Kannada Astrology: ದೇವರಿಗೆ ನೈವೇದ್ಯ ಮಾಡಬೇಕಿದ್ರೆ ಈ ತಪ್ಪು ಮಾಡ್ಬೇಡಿ ! ಮುಂದಿನ ಕಷ್ಟ ನಿವೇ ಅನುಭವಿಸಬೇಕು!

Kannada Astrology: ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಇಲ್ಲಿ ಹಲವು ಧರ್ಮಿಯರು, ಪಂತದವರು, ಜಾತಿಯವರು ಇದ್ದಾರೆ. ಆದರೂ ಅದರಲ್ಲಿ ಹಿಂದುಗಳು ಬಹುಸಂಖ್ಯಾತರು. ಹಿಂದುಗಳು ದೇವರನ್ನು ಬಹುವಾಗಿ ನಂಬುತ್ತಾರೆ. ಹಾಗಾಗಿ ವರ್ಷದ ಆರಂಭದಿಂದ ಕೊನೆಯವರೆಗೂ ಒಂದೆಲ್ಲ ಒಂದು ಹಬ್ಬ ಇದ್ದೇ ಇರುತ್ತದೆ. ಹಿಂದೂಗಳ ಮನೆಯಲ್ಲಿ ನಿತ್ಯವು ದೇವರಿಗೆ ಪೂಜೆ ಮಾಡಲೇಬೇಕು. ಪೂಜೆ ಮಾಡಿದ ನಂತರ ನೈವೇದ್ಯ ಅರ್ಪಿಸದಿದ್ದರೆ ಪೂಜೆ ಪೂರ್ಣವಾಗುವುದಿಲ್ಲ. ಹಾಗಾಗಿ ನಾವು ತಿನ್ನುವ ಮೊದಲು ದೇವರಿಗೆ ಅರ್ಪಿಸಿ ತಿನ್ನುವುದು ನಮ್ಮಲ್ಲಿನ ಪದ್ಧತಿ. ಆದರೂ ನೈವೇದ್ಯ ಮಾಡಲು ವಿಧಿ ವಿಧಾನಗಳಿವೆ. ಹೇಗೆ ಬೇಕೋ ಹಾಗೆ ನೈವೇದ್ಯ ಮಾಡಿದರೆ ದೇವರಿಗೆ ಸಲ್ಲುವುದಿಲ್ಲ. ನಿಮ್ಮ ಪ್ರಾರ್ಥನೆ ಫಲಿಸುವುದಿಲ್ಲ. ಹಾಗಾಗಿ ನೈವೇದ್ಯ ಮಾಡಬೇಕಿದ್ದರೂ ಕೆಲವೊಂದು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ.

ಹಿಂದೂ ಧರ್ಮದಲ್ಲಿ ಪೂಜೆಯ ನಂತರ ದೇವರಿಗೆ ಪ್ರಸಾದ ಅರ್ಪಿಸುವ ಪದ್ಧತಿ ಇದೆ. ನಂಬಿಕೆಯ ಪ್ರಕಾರ ಭಕ್ತರು ನೀಡುವ ಪ್ರಸಾದವನ್ನು ದೇವರು ಸೂಕ್ಷ್ಮ ರೂಪದಲ್ಲಿ ಸ್ವೀಕರಿಸುತ್ತಾನೆ. ಈ ನೈವೇದ್ಯ ಅರ್ಪಣೆ ಕುರಿತು ಧಾರ್ಮಿಕ ಗ್ರಂಥಗಳಲ್ಲಿ ಕೆಲವು ನಿಯಮಗಳನ್ನು ನೀಡಲಾಗಿದೆ. ಅದರ ಪ್ರಕಾರವೇ ನೀಡಬೇಕು.

ದೇವರಿಗೆ ಪ್ರಸಾದವನ್ನು ನೀಡಿದರೆ ಆ ಅಡುಗೆಯಲ್ಲಿ ಎಣ್ಣೆ ಹಾಗೂ ಮೆಣಸಿನಕಾಯಿಯನ್ನು ಬಳಸಬಾರದು. ಇದರ ಬದಲು ತುಪ್ಪವನ್ನು ಬಳಕೆ ಮಾಡಬೇಕು. ದೇವರು ಸಾತ್ವಿಕ ಆಹಾರವನ್ನು ಮಾತ್ರ ಸ್ವೀಕರಿಸುತ್ತಾನೆ. ಅದೇ ಸಮಯದಲ್ಲಿ ಎಣ್ಣೆ ಹಾಗೂ ಮೆಣಸಿನ ಕಾಯಿ ಬಳಸಿದ ಅಡುಗೆ ರಾಜಮನೆತನದ ಅಡುಗೆ ಎಂದು ಪರಿಗಣಿತವಾಗುತ್ತದೆ.

ಭಗವಾನ್ ವಿಷ್ಣು ಹಾಗೂ ಆತನ ಅವತಾರದ ದೇವರುಗಳನ್ನು ಪೂಜಿಸುವಾಗ ಪ್ರಸಾದ ಸಲ್ಲಿಸಿದಾಗ ತುಳಸಿಯನ್ನು ಪ್ರಸಾದದ ರೂಪದಲ್ಲಿ ಹಾಕಬೇಕು. ಭಗವಾನ್ ವಿಷ್ಣು ಹಾಗೂ ಅವತಾರವೇತ್ತಿದ ರೂಪದ ದೇವರು ತುಳಸಿ ಇಲ್ಲದೆ ಪ್ರಸಾದವನ್ನು ಸ್ವೀಕರಿಸುವುದಿಲ್ಲ.

ದೇವರಿಗೆ ಪ್ರಸಾದ ಅರ್ಪಿಸುವಾಗ ದೇವರ ಮುಂದೆ ಇಟ್ಟ ತಕ್ಷಣ ತೆಗೆಯಬೇಡಿ. ಭಗವಂತನಿಗೆ ನೈವೇದ್ಯ ಅರ್ಪಿಸಿದ ನಂತರ ಭಕ್ತರು ಸ್ವಲ್ಪ ಸಮಯ ಅದರಿಂದ ದೂರ ಸರಿಯಬೇಕು. ಸ್ವಲ್ಪ ಸಮಯದ ನಂತರ ದೇವರಿಗೆ ನಮಸ್ಕರಿಸಿ ಪ್ರಸಾದವನ್ನು ತೆಗೆದುಕೊಳ್ಳಬಹುದು.

ಪೂಜೆಯ ಸಮಯದಲ್ಲಿ ಶಿವ ಹಾಗೂ ಗಣಪತಿಗೆ ಅರ್ಪಿಸುವ ಪ್ರಸಾದದಲ್ಲಿ ತುಳಸಿಯನ್ನು ಬಳಸುವಂತಿಲ್ಲ. ಶಿವನಿಗೆ ಬಿಲ್ವಪತ್ರೆ ಅರ್ಪಿಸುವುದು ಮಂಗಲಕರ ಎಂದು ಪರಿಗಣಿಸಲ್ಪಟ್ಟಿದೆ. ಗಣೇಶನಿಗೆ ದೂರ್ವೇಯನ್ನು ಅರ್ಪಿಸುವುದು ಶ್ರೇಯಸ್ಸು.

ಬೇಯಿಸಿದ ಆಹಾರವನ್ನು ದೇವರಿಗೆ ಅರ್ಪಿಸಿ ಪೂಜೆಯ ನಂತರ ಅದರ ಸ್ವಲ್ಪ ಭಾಗವನ್ನು ತೆಗೆದುಕೊಂಡು ಹೋಗಿ ಹಸುವಿಗೆ ತಿನ್ನಿಸಿ ನಂತರ ನಾವು ಸೇವಿಸಬೇಕು.

Leave A Reply

Your email address will not be published.