ನೀವೂ ಹೋಳಿ ಹಬ್ಬಕ್ಕೆ ಬಣ್ಣದೋಕುಳಿ ಆಡ್ತಿರಾ; ಹಾಗಾದರೆ ತ್ವಚೆಗೆ ಅಂಟಿದ ಬಣ್ಣವನ್ನು ಸುಲಭವಾಗಿ ತೆಗೆಯೋದು ಹೇಗೆ? ಇಲ್ಲಿದೆ ಟಿಪ್ಸ್

ಹೋಳಿ ಹಬ್ಬ ಅಂದ್ರೆ ಅದು ರಂಗಿನ ಹಬ್ಬ, ಬಣ್ಣಗಳ ಹಬ್ಬ. ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚುತ್ತಾ ಸಂತೋಷವನ್ನು ಹಂಚಿಕೊಳ್ಳುವ ಹಬ್ಬ. ದೇಶದ ಕೆಲವು ಭಾಗಗಳಲ್ಲಿ ಹೋಳಿಯನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ರಾಧಾ ಕೃಷ್ಣರಿಗೆ ಪ್ರಿಯವಾದ ಹೋಳಿ ಹಬ್ಬ ಇನ್ನೇನು ಶುರುವಾಗಲಿದೆ. ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಎರಚಿಕೊಳ್ಳಲೂ ನೀವು ಸಿದ್ದರಾಗಿದ್ದೀರಿ ಅಲ್ಲವೇ? ಈ ಸಮಯದಲ್ಲಿ ನೀವು ನಿಮ್ಮ ತ್ವಚೆಯ ಬಗ್ಗೆಯೋ ಸ್ವಲ್ಪ ಕೇರ್ ಮಾಡಬೇಕು. ಹಾಗಾಗಿ ಹೋಳಿ ಬಣ್ಣವನ್ನು ತ್ವಚೆಯಿಂದ ನಿವಾರಿಸುವುದು ಹೇಗೆ ಈ ಲೇಖನದಲ್ಲಿದೆ.

ಮೊದಲನೆಯದಾಗಿ ತೆಂಗಿನ ಎಣ್ಣೆ. ತೆಂಗಿನೆಣ್ಣೆಯಿಂದ ಇರುವ ಪ್ರಯೋಜನಗಳನ್ನು ಹೇಳಿ ಮುಗಿಸಲು ಸಾಧ್ಯವೇ ಇಲ್ಲ. ಅಷ್ಟು ಉತ್ತಮ ಈ ತೆಂಗಿನ ಎಣ್ಣೆ. ಇದು ಚರ್ಮಕ್ಕೆ ಕವಚದಂತೆ ಕಾವಲು ಕಾಯುತ್ತದೆ. ಹಾಗಾಗಿ  ಹೋಳಿ ಹಬ್ಬದ ನಂತರ ತ್ವಚೆಗೆ ತೆಂಗಿನ ಎಣ್ಣೆಯನ್ನು ಹಚ್ಚುವುದನ್ನು ಮರೆಯಬೇಡಿ. ಇದು ತ್ವಚೆಯನ್ನು ಶುಷ್ಕತೆಯಿಂದ ರಕ್ಷಿಸುತ್ತದೆ.  

ಇನ್ನು ಆಲಿವ್‌ ಎಣ್ಣೆ. ಆಲಿವ್ ಎಣ್ಣೆ ದುಬಾರಿಯಾದರೂ ಅದರ ಪ್ರಯೋಜನಗಳು ಹಲವು. ಇದು ಸೂರ್ಯನ ಶಾಖಕ್ಕೆ ತ್ವಚೆ ಸುಡುವುದನ್ನು ತಪ್ಪಿಸುತ್ತದೆ. ಇದರಲ್ಲಿ ಜಿಡ್ದಿನ ಪ್ರಮಾಣ ಕಡಿಮೆಯಾದ್ದರಿಂದ ತ್ವಚೆಗೆ ಲೇಪಿಸಿಕೊಳ್ಳುವುದು ಸುಲಭ.  ಬಣ್ಣಗಳ ಹೋಳಿ ಹಬ್ಬದ ಆಚರಣೆಯ ನಂತರ ಚರ್ಮದ ಸೌಂದರ್ಯವನ್ನು ಕಾಪಾಡಲು ಆಲಿವ್‌ ಎಣ್ಣೆಯನ್ನು ಬಳಸಿ. ಇದು ತ್ವಚೆಯನ್ನು ತೇವಗೊಳಿಸುತ್ತದೆ. ಕೃತಕ ಬಣ್ಣಗಳಿಂದ ಮೊಡವೆ ಉಂಟಾಗುವ ಸಾಧ್ಯತೆಯನ್ನು ತಡೆಯುತ್ತದೆ.

ಬಾದಾಮಿ ಎಣ್ಣೆ ಕೂಡ ಉತ್ತಮ ಪ್ರಯೋಜನವನ್ನು ತ್ವಚೆಗೆ ನೀಡುತ್ತದೆ. ಬಾದಾಮಿ ಎಣ್ಣೆಯನ್ನು ಲ್ಯಾವೆಂಡರ್‌ ಅಥವಾ ಶ್ರೀಗಂಧದ ಎಣ್ಣೆಯ ಜೊತೆಗೆ ಮಿಕ್ಸ್ ಮಾಡಿ ತ್ವಚೆಗೆ ಅನ್ವಯಿಸಿ. ಹೋಳಿ ಹಬ್ಬದ ಬಣ್ಣ ಮೈ ತುಂಬಿಕೊಂಡಿದ್ದರೆ ಅದು ತ್ವಚೆಯ ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾಗಿ ತ್ವಚೆಯ ಆರೋಗ್ಯಕ್ಕಾಗಿ ಬಾದಾಮಿ ಎಣ್ಣೆಯನ್ನು ಬಳಸಿ. ಇದು ಶುಷ್ಕ ಚರ್ಮವನ್ನು ಕಾಪಾಡುತ್ತದೆ.  

ವರ್ಷದಲ್ಲಿ ಒಮ್ಮೆ ಬರುವ ಹೋಳಿಯನ್ನು ಚೆನ್ನಾಗಿ ಎಂಜಾಯ್ ಮಾಡಿ ಆದರೆ ತ್ವಚೆ ಹಾಗೂ ಪರಿಸರದ ಬಗೆಗೂ ಗಮನವಿರಲಿ. ಹಾಗಾಗಿ ಆದಷ್ಟು ರಾಸಾಯನಿಕ ಮಿಶ್ರಿತ ಬಣ್ಣದ ಬದಲು ನೈಸರ್ಗಿಕ ಬಣ್ಣಗಳನ್ನೇ ಬಳಸಿ.

Leave A Reply

Your email address will not be published.