ಒಟಿಟಿಯಲ್ಲಿ ಬರ್ತಿದ್ದಾರೆ ಭುವಿ ಟೀಚರ್! ಕಾರಣ ಕೇಳಿದ್ರೆ ನೀವೂ ಸಂಭ್ರಮಿಸುತ್ತೀರಾ!

ಕನ್ನಡ ಕಿರುತೆರೆ ಧಾರಾವಾಹಿಗಳಲ್ಲಿ ಸದ್ಯ ಸಿಕ್ಕಾಪಟ್ಟೆ ಫೇಮಸ್ ಆಗಿರೋದು ಕನ್ನಡತಿ ಧಾರಾವಾಹಿ. ಕಳೆದ ಒಂದು ವರ್ಷಗಳಿಂದ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿಯ ಪ್ರತಿಯೊಂದು ಪಾತ್ರವನ್ನೂ ಜನ ತುಂಬಾನೇ ಇಷ್ಟಪಟ್ಟಿದ್ದಾರೆ! ಅದರಲ್ಲೂ ಭುವಿ ಹಾಗೂ ಹರ್ಷ ಜೋಡಿಯ ಬಗ್ಗೆಯಂತೂ ಮಾತೇ ಇಲ್ಲ. ಜನರ ಅಪೇಕ್ಷೆಯಂತೆ ಇವರಿಬ್ಬರ ವಿವಾಹವೂ ಏರ್ಪಟ್ಟಿದೆ.

ಭುವಿ ಪಾತ್ರಧಾರಿಯಾಗಿ ಜನರ ಮನಸ್ಸನ್ನು ಗೆದ್ದಿರುವ ನಟಿ ರಂಜನಿ ರಾಘವನ್. ಈ ಹಿಂದೆ ಪುಟ್ಟ ಗೌರಿ ಮದುವೆಯ ಮೂಲಕವೇ ಹೆಚ್ಚು ಫೇಮಸ್ ಆಗಿದ್ದ ರಂಜಿನಿ ಕನ್ನಡತಿಯಲ್ಲಿ ಭುವಿಯ ಪಾತ್ರದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ರಂಜನಿಯವರ ಸ್ವಭಾವಕ್ಕೆ ಹತ್ತಿರವಾಗಿರುವ ಈ ಪಾತ್ರ ರಂಜನಿಯವರೂ ಕೂದ ಅಷ್ಟೇ ಶ್ರದ್ಧೆಯಿಂದ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ!

ಇನ್ನು ರಂಜನಿ ರಾಘವನ್ ಧಾರಾವಾಹಿಯಲ್ಲಿ ಮಾತ್ರವಲ್ಲ, ಸಿನಿಮಾಗಳಲ್ಲಿಯೂ ಸಕ್ರಿಯವಾಗಿದ್ದಾರೆ. ಇತ್ತೀಚಿಗೆ ಅವರ ನಟನೆಯ ಎರಡು ಚಿತ್ರಗಳು ಒಂದು ವಾರಗಳ ಅಂತರದಲ್ಲಿ ಬಿಡುಗಡೇಯಾಗಿದ್ದವು. ದಿಗಂತ್ ಜೊತೆ ಅಭಿನಯದ ’ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಹಾಗೂ ಮನೋಜ್ ಜೊತೆ ’ಟಕ್ಕರ್’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದರು ನಟಿ ರಂಜಿನಿ ರಾಘವನ್. ಇದೀಗ ಈ ವಿಷಯಕ್ಕೆ ಕುರಿತಂತೆ ಒಂದು ಖುಷಿಯ ವಿಚಾರವನ್ನು ರಂಜಿನಿ ಹಂಚಿಕೊಂಡಿದ್ದಾರೆ.

ನಟಿ ರಂಜನಿ ರಾಘವನ್ ಕೂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ’ಓಟಿಟಿಯಲ್ಲಿ ನನ್ನ ಎರಡೂ ಸಿನಿಮಾ ರಿಲೀಸ್ ಆಗುತ್ತಿದೆ. ನಾನು ತುಂಬಾ ಖ್ಹುಷಿಯಾಗಿದ್ದೇನೆ. ಅಮೆಜಾನ್ ಫ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ನೋಡಲು ’ಹಣವಿಲ್ಲ’ ಎಂದು ಟೈಪ್ ಮಾಡಿ ಹುಡುಕಿ’ ಎಂದು ಪೋಸ್ಟ್ ಬರೆದು ಹಂಚಿಕೊಂಡಿದ್ಡಾರೆ.

ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಚಿತ್ರವನ್ನು ವಿನಾಯಕ ಕೊಡ್ಸರ ಅವರು ನಿರ್ದೇಶನ ಮಾಡಿದ್ಡಾರೆ. ಪಕ್ಕಾ ಮಲೆನಾಡಿನ ಸೊಗಡಿನಲ್ಲಿ ಚಿತ್ರೀಕರಣ ಕಂಡ ಸಿನಿಮಾ ಇದು! ಈ ಸಿನಿಮಾದಲ್ಲಿ ದಿಗಂತ್ ಹಾಗೂ ಐಂದ್ರಿತಾ ರೇ ಜೋಡಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ಡಾರೆ. ಮಲೆನಾಡಿನ ಹುಡಿಗಿಯಾಗಿ ರಂಜನಿ ಕೂಡ ಈ ಸಿನಿಮಾದಲ್ಲಿ ಗಮನ ಸೆಳೆಯುತ್ತಾರೆ.

ಇನ್ನು ಟಕ್ಕರ್ ಸಿನಿಮಾ ಕಥೆಯನ್ನು ನೋಡುವುದಾದರೆ ಇದು ಸೈಬರ್ ಕ್ರೈಂ ಗೆ ಸಂಬಂಧಪಟ್ಟ ಸಿನಿಮಾ! ಸಹೋದರಿಯೊಬ್ಬಳು ಕಷ್ಟದಲ್ಲಿ ಸಿಲುಕಿದಾಗ ಅದೌ ಸೈಬರ್ ಕ್ರೈಮ್ ಎಂಬುದು ಅರಿವಾಗಿ ಅದನ್ನು ಕಥಾ ನಾಯಕ ಹೇಗೆ ಬೇಧಿಸುತ್ತಾನೆ ಎನ್ನುವುದೇ ಈ ಕಥೆಯ ವಸ್ತು.

ಒಟ್ಟಿನಲ್ಲಿ ನಟಿ ರಂಜನಿ ರಾಘವನ್ ಅಭಿನಯದ ಈ ಎರಡೂ ಸಿನಿಮಾಗಳೂ ಕೂಡ ಉತ್ತಮ ಸಂದೇಶವನ್ನು ಹೊಂದಿವೆ. ಹಾಗಾಗಿ ಈ ಸಿನಿಮಾಗಳು ಒಟಿಟಿಯಲ್ಲಿ ಹೆಚ್ಚು ಜನರು ನೋಡಿ ಇಶ್ಃತಪಡುತ್ತಾರೆ ಎನ್ನುವ ನಿರೀಕ್ಷೆಯಿದೆ.

Leave A Reply

Your email address will not be published.