ಲಂಚ್ ಬಾಕ್ಸ್ ಗೆ ಬ್ರೇಕ್ ಫಾಸ್ಟ್ ಗೆ ಯಾವುದಕ್ಕಾದರೂ ಸರಿ ಹೀಗೆ ಧೀಡಿರ್ ಅಂತ ರೈಸ್ ಬಾತ್ ನ್ನು ಮಾಡಿ!

ದಿನವೂ ಆಫೀಸ್ ಗೆ ಲಂಚ್ ಬಾಕ್ಸ್ ಕಳಿಸಬೇಕು, ಮಕ್ಕಳಿಗೆ ಶಾಲೆಗೂ ತಿಂಡಿ ಬಾಕ್ಸ್ ಕಳಿಸಬೇಕು. ಹಾಗಂತ ದಿನವೂ ಒಂದೇ ರೀತಿಯ ಆಹಾರ ಪದಾರ್ಥಗಳನ್ನ ಮಾಡಿ ಕಳಿಸಿದರೆ ಖಂಡಿತವಾಗಿಯೂ ಬಾಕ್ಸ್ ಖಾಲಿಯಾಗದೆ ಹಾಗೆ ವಾಪಸ್ ಬರುತ್ತೆ. ಅದರಲ್ಲೂ ಮಕ್ಕಳಿಗಂತೂ ತರಾವರಿ ತಿಂಡಿ ನಿದ್ರೆ ಮಾತ್ರ ಇಷ್ಟವಾಗೋದು ಹಾಗಾಗಿ ನಾವು ಇಂದು ಸುಲಭವಾಗಿ ಫಟ್ ಫಟ್ ಅಂತ ಮಾಡಿಕೊಳ್ಳಬಹುದಾದ ರೈಸ್ ಬಾತ್ ರೆಸಿಪಿಯೊಂದನ್ನು ಹೇಳುತ್ತೇವೆ.

ರೈಸ್ ಬಾತ್ ಮಾಡಲು ಬೇಕಾಗುವ ಸಾಮಗ್ರಿಗಳು;

ಕ್ಯಾಪ್ಸಿಕಂ ಒಂದು -ದೊಡ್ಡ ಗಾತ್ರದ್ದು

ಟೊಮ್ಯಾಟೋ ಒಂದು- ಮಧ್ಯಮಗಾತ್ರದ್ದು

ಈರುಳ್ಳಿ ಒಂದು – ಮಧ್ಯಮ ಗಾತ್ರದ್ದು (ಈ ಎಲ್ಲ ತರಕಾರಿಗಳನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ)

ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ

ಅಚ್ಚಖಾರದ ಪುಡಿ ಒಂದು ಚಮಚ ಧನಿಯ ಪುಡಿ ಒಂದು ಚಮಚ

ಗರಂ ಮಸಾಲ ಪುಡಿ ಕಾಲು ಚಮಚ

ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ

ರುಚಿಗೆ ತಕ್ಕಷ್ಟು ಉಪ್ಪು

ಕಾಲು ಚಮಚ ಅರಿಶಿಣ

ಅನ್ನ ಒಂದು ಬೌಲ್

ರೈಸ್ ಬಾತ್ ಮಾಡುವ ವಿಧಾನ;

ಗ್ಯಾಸ್ ಸ್ಟವ್ ಮೇಲೆ ಒಂದು ಬಾಣಲೆಯನ್ನು ಇಟ್ಟು ಅದು ಬಿಸಿಯಾದ ನಂತರ ಅದಕ್ಕೆ ಎಣ್ಣೆಯನ್ನು ಹಾಕಿ ನಂತರ ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹುರಿಯಿರಿ. ಎರಡು ನಿಮಿಷ ಈರುಳ್ಳಿ ಹುರಿದ ನಂತರ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಒಂದು ನಿಮಿಷ ಮತ್ತೆ ಹುರಿಯಿರಿ.

ಇದಕ್ಕೆ ಹೆಚ್ಚಿದ ಟೊಮ್ಯಾಟೊವನ್ನು ಸೇರಿಸಿ ಮತ್ತೆ ಹುರಿಯಿರಿ. ಟೊಮೆಟೊ ಚೆನ್ನಾಗಿ ಎಣ್ಣೆಯಲ್ಲಿ ಬೇಯಲಿ. ನಂತರ ಹೆಚ್ಚಿಟ್ಟ ಕ್ಯಾಪ್ಸಿಕಂ ಅನ್ನು ಸೇರಿಸಿ. ಕ್ಯಾಪ್ಸಿಕಂ ತುಂಬಾ ಬೇಯುವ ಅಗತ್ಯವಿಲ್ಲ ಸ್ವಲ್ಪ ಬೆಂದರೆ ಸಾಕು ಹಾಗಾಗಿ ಒಂದು ನಿಮಿಷಗಳ ಕಾಲ ಇದನ್ನು ಹುರಿದುಕೊಳ್ಳಿ.

ಉರಿದ ಮಿಶ್ರಣಕ್ಕೆ ಉಪ್ಪನ್ನು ಸೇರಿಸಿ. ಇದಕ್ಕೆ ಅರಿಶಿಣ ಪುಡಿ, ಧನಿಯಾ ಪುಡಿ ಅಚ್ಚಕಾರದ ಪುಡಿ ಗರಂ ಮಸಾಲಾ ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎರಡು ನಿಮಿಷಗಳ ಕಾಲ ಹುರಿದುಕೊಳ್ಳಿ ಹೀಗೆ ಹುರಿಯುವಾಗ ಗ್ಯಾಸ್ ಮಧ್ಯಮ ಉರಿಯಲ್ಲಿರಲಿ. ಇದಕ್ಕೆ ಅಗತ್ಯವಿದ್ದರೆ ಕಾಲು ಚಮಚ ನೀರನ್ನ ಸೇರಿಸಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ.

ಕೊನೆಯಲ್ಲಿ ಈ ಹುರಿದ ಮಿಶ್ರಣಕ್ಕೆ ಅನ್ನವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕೊನೆಯಲ್ಲಿ ಅಗತ್ಯವಿದ್ದರೆ ನಿಂಬೆ ರಸವನ್ನು ಬೇಕಾದರೆ ಹಾಕಿಕೊಳ್ಳಬಹುದು. ಈಗ ದಿಡೀರ್ ಅಂತ ರುಚಿಕರವಾದ ರೈಸ್ ಬಾತ್ ಸವಿಯಲು ಸಿದ್ಧವಾಗಿದೆ ಇದನ್ನ ನಿಮಗೆ ಇಷ್ಟವಾದ ರೈತ ಜೊತೆ ಸವಿಯಲುಬಹುದು.

Leave A Reply

Your email address will not be published.