ವಿಕ್ರಾಂತ್ ರೋಣಕ್ಕೆ ಸಿಕ್ತು 5 ಸ್ಟಾರ್; ನಾನು ನೋಡಿದ ಬೆಸ್ಟ್ 3ಡಿ ಸಿನಿಮಾ ಇದು ಎಂದ ಪ್ರೇಕ್ಷಕ!

ಕಿಚ್ಚ ಸುದೀಪನ ಮ್ಯಾನರಿಸಂ ಎಲ್ಲರಿಗೂ ಇಷ್ಟವಾಗುತ್ತೆ. ಅದೇ ಮ್ಯಾನರಿಸಂ ಅನ್ನು ಆಕ್ಷನ್ ಜೊತೆ ತೆರೆ ಮೇಲೆ ತಂದ್ರೆ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ. ಸದ್ಯ ವಿಕ್ರಾಂತ ರೋಣ ಸಿನಿಮಾದ ಅಬ್ಬರ ಜೋರಾಗಿದೆ ಫಸ್ಟ್ ಡೇ ಫಸ್ಟ್ ಶೋ ನಲ್ಲೆ ಅನೂಪ್ ಭಂಡಾರಿ ದೊಡ್ಡ ಗೆಲುವನ ಸಾಧಿಸಿದ್ದಾರೆ. ಈ ಸಿನಿಮಾಕ್ಕೆ ಬಂಡವಾಳ ಹಾಕಿದ ಜಾಕ್ ಮಂಜು ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನು ವಿಕ್ರಾಂತ ರೋಣ ಚಿತ್ರದ ವಿಮರ್ಶರಂತೂ ಒಂದು ಸ್ಟಾರ್ ಎಕ್ಸ್ಟ್ರಾನೇ ಕೊಟ್ಟಿದ್ದಾರೆ.

ಕತ್ತಲೆ ಪ್ರಪಂಚದಲ್ಲಿ ನಡೆಯುವ ಸಾಕಷ್ಟು ವಿಷಯಗಳನ್ನು ಅನಾವರಣಗೊಳಿಸುವ ಫ್ಯಾಂಟಸಿ ಚಿತ್ರ ಇದು. ಕಮರೊಟ್ಟು ಎನ್ನುವ ಕಾಲ್ಪನಿಕ ಗ್ರಾಮದಲ್ಲಿ ಬ್ರಹ್ಮರಾಕ್ಷಸ ಮಕ್ಕಳನ್ನು ಕೊಲ್ಲುತ್ತಾನೆ ಎನ್ನುವ ನಂಬಿಕೆ. ಆ ಕೊಲೆಗಳನ್ನು ನಿಜವಾಗಿ ಯಾರೂ ಮಾಡ್ತಾರೆ ಅನ್ನೋದನ್ನ ಕಂಡುಹಿಡಿಯೋಕೆ ಬರುವವನೇ ವಿಕ್ರಾಂತ್ ರೋಣ.

ಕಿಚ್ಚ ಸುದೀಪ್ ವಿಕ್ರಾಂತ ರೋಣ ಪಾತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು 3ಡಿ ಸಿನಿಮಾ ಹೋಗಿರುವ ಈ ಚಿತ್ರ ಅತ್ಯದ್ಭುತ ಸೆಟ್ಟಿನಲ್ಲಿ ನಿರ್ಮಾಣವಾಗಿದೆ. ಈ ಎಲ್ಲಾ 3ಡಿ ಮೂಲಕ ಅತ್ಯದ್ಭುತವಾಗಿ ಕಂಗೊಳಿಸುತ್ತವೆ. ಕಿಚ್ಚ ಸುದೀಪ್ ಇದುವರೆಗೆ ಸಾಕಷ್ಟು ಕಮರ್ಷಿಯಲ್ ಚಿತ್ರಗಳನ್ನು ಮಾಡಿದ್ದಾರೆ ಆದರೆ ಈ ಸಿನಿಮಾ ಅವೆಲ್ಲದಕ್ಕೂ ಸಾಕಷ್ಟು ವಿಭಿನ್ನವಾಗಿದೆ. ಮಾಸ್ ಡೈಲಾಗ್ ಗಳು ಇಲ್ಲ ಅನಗತ್ಯ ಅನಿಸುವ ಫೈಟಿಂಗ್ ಇಲ್ಲ. ಆದರೆ ಒಬ್ಬ ಉತ್ತಮ ತಂದೆಯಾಗಿ ಸುದೀಪ್ ಜನರಿಗೆ ಹೆಚ್ಚು ಇಷ್ಟವಾಗುತ್ತಾರೆ.

ಅನುಪ್ ಭಂಡಾರಿ ರಂಗಿ ತರಂಗ ಸಿನಿಮಾ ವನ್ನ ಹೇಗೆ ಅದ್ಭುತವಾಗಿ ನಿರ್ಮಿಸಿ ಕೊಟ್ಟಿದ್ದರು ಅದೇ ರೀತಿ ವಿಕ್ರಾಂತ ರೋಣ ಸಿನಿಮಾದ ಕಥೆಯನ್ನು ಕೂಡ ಹೆಣೆದಿದ್ದಾರೆ. ಕಮರೊಟ್ಟು ಎನ್ನುವ ಹೆಸರು ಕೇಳಿದ್ರೇನೇ ರಂಗಿತರಂಗ ನೆನಪಾಗುತ್ತೆ. ಹಾಗಾಗಿ ವಿಕ್ರಾಂತ ರೋಣ ಸಿನಿಮಾಕ್ಕೂ ರಂಗಿ ತರಂಗಕ್ಕೂ ಸಾಕಷ್ಟು ಸಾಮ್ಯತೆಯನ್ನು ಪ್ರೇಕ್ಷಕರು ಕಾಣಬಹುದು.

ತ್ರೀಡಿ ಸಿನಿಮಾಗೆ ಮೊದಲ ಪ್ರಯತ್ನದಲ್ಲಿಯೇ ಅನುಪ ಭಂಡಾರಿ ಹಾಗೂ ಚಿತ್ರತಂಡ ಗೆದ್ದಿದೆ ಹಾಸ್ಯ ಭಾವನೆಗಳು ಎಲ್ಲದರ ಮಿಶ್ರಣ ಈ ಸಿನಿಮಾ. ಬಹುತೇಕ ಸಿನಿಮಾದ ದೃಶ್ಯಗಳು ಸೆಟ್ನಲ್ಲಿ ಶೂಟ್ ಮಾಡಲಾಗಿದ್ರು ಬಹಳ ನೈಜತೆಯ ಫೀಲ್ ಕೊಡುತ್ತೆ ಇದಕ್ಕೆ ಮುಖ್ಯ ಕಾರಣ 3ಡಿ ಆಗಿರೋದು ಕೂಡ. ಇನ್ನು ಈ ಎಲ್ಲಾ ವಿಚಾರದಲ್ಲಿ ಆರ್ಟ್ ಡೈರೆಕ್ಟರ್ ಶಿವಕುಮಾರ್ ಅವರ ಕೈಚಳಕ ಮನ ಸೋರೆಗೊಳ್ಳುತ್ತೆ.

ಮತ್ತೆ ಮತ್ತೆ ಅಜನೇಶ ಲೋಕನಾಥ್ ಅವರ ಸಂಗೀತ ಇಷ್ಟವಾಗುತ್ತೆ. ಛಾಯಾಗ್ರಹಕ ವಿಲಿಯಂ ಡೇವಿಡ್ ಅವರು ಚಿತ್ರಕೆ ಹೊಸ ರೂಪವನ್ನು ಕೊಟ್ಟಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ರವಿಶಂಕರ್ ಗೌಡ, ಚಿತ್ಕಲಾ ಬಿರಾದಾರ್ ಎಲ್ಲರೂ ವಿಕ್ರಾಂತ ರೋಣದ ಒಂದು ಅದ್ಭುತ ಭಾಗವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಥಿಯೇಟರ್ ನಲ್ಲೂ ಜೋರಾಗಿ ಸೌಂಡ್ ಮಾಡಿದ್ದು ರಾರಾ ರಕ್ಕಮ್ಮ ಹಾಡು. ಒಟ್ಟಿನಲ್ಲಿ ಸಿನಿಪ್ರಿಯರಿಗೆ ಇವತ್ತಿನ ರಸದೌತಣ ವಿಕ್ರಾಂಟ್ ರೋಣ!

Leave A Reply

Your email address will not be published.