ದೇಹದಲ್ಲಿ ಕಾಣಿಸಿಕೊಳ್ಳುವ ಸಣ್ಣ ನೋವಿಗೆ ಮನೆಮದ್ದೇ ಸಾಕು! ಅದಕ್ಕೇಲ್ಲಾ ಯಾಕೆ ಮಾತ್ರೆ!

ದೇಹದಲ್ಲಿ ಏನೇ ನೋವು ಕಣಿಸಿದರೂ ಫೇನ್ ಕಿಲ್ಲರ್ ನುಂಗುವ ಅಭ್ಯಾಸ ಮಾಡಿಕೊಂಡಿದೇವೆ. ಆದರೆ ಇದರಿಂದ ಉಂಟಾಗುವ ಪರಿಣಾಮವನ್ನು ಮಾತ್ರ ಯಾರೂ ಊಹಿಸಿರುವುದಿಲ್ಲ. ಪೇನ್ ಕಿಲ್ಲರ್ ಮಾತ್ರೆಗಳನ್ನು ಸೇವಿಸುತ್ತಾ ಬಂದರೆ ಅದು ದೇಹದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರಬಹುದು. ಸಣ್ಣ ಪುಟ್ಟ ನೋವುಗಳಿಗೆಲ್ಲಾ ಮಾತ್ರೆ ನುಂಗುವುದು ಒಳ್ಳೆಯದಲ್ಲ. ಅದಕ್ಕೆಲ್ಲಾ ಶೀಘ್ರ ಉಪಶಮನ ನೀಡುವಂತ ಹಲವು ಮನೆಮದ್ದುಗಳು ಇವೆ. ಅವುಗಳನ್ನ ಟ್ರೈ ಮಾಡಿ ನೋಡಿ.

ಅರಿಶಿನ ಹಾಲು: ಬಹಳ ಹಿಂದಿನಿಂದಲೂ ಬಳಸುತ್ತಿರುವ ಒಂದು ಮನೆಮದ್ದು. ಹಿಂದಿನ ಕಾಲದಲ್ಲಿ ಶೀತ ನೆಗಡಿ ಆದರೂ ಅರಿಶಿನ ಹಾಲನ್ನೇ ಹೆಚ್ಚಾಗಿ ಬಳಸುತ್ತಿದ್ದರು.  ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅರಿಶಿನ ಹಾಲು ಕುಡಿಯುವದರಿಂದ ಗಾಯಗಳು ಬೇಗನೇ ಗುಣವಾಗುತ್ತದೆ ನಂಜುನಿರೋಧಕ ಗುಣಗಳನ್ನು ಹೊಂದಿದೆ.  ಅರಿಶಿನದಲ್ಲಿ ಕರ್ಕ್ಯುಮಿನ್ ಸಂಯುಕ್ತವಿದೆ ಇದು ದೇಹದ ಮೇಲಾಗಿರುವ ಗಾಯ, ನೂವನ್ನು ನಿವಾರಿಸುತ್ತದೆ. ಇನ್ನುಆಂತರಿಕವಾಗಿ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ.

ಶುಂಠಿ: ಶುಂಠಿ ಕಷಾಯವನ್ನುಆಗಾಗ ಕುಡಿಯುವ ಅಭ್ಯಾಸ ಹಲವರಿಗಿರುತ್ತದೆ. ಇದು ತುಂಬಾ ಒಳ್ಳೆಯದು. ಸ್ನಾಯುಗಳ ನೋವುಗಳು ಕಾಣಿಸಿಕೊಂಡಾಗ ನೈಸರ್ಗಿಕವಾಗಿ ನೋವನ್ನು ಶಮನಗೊಳಿಸಲು ಶುಂಠಿ ಬೆಸ್ಟ್ ಸೊಲ್ಯುಶನ್! ಶುಂಠಿ ಚಹಾವನ್ನು ಬಿಸಿಯಾಗಿ ಕುಡಿದರೆ ಒಳ್ಳೆಯದು. ದಿನನಿತ್ಯದ ಪದಾರ್ಥಗಳಲ್ಲಿಯೂ ಶುಂಠಿಯನ್ನು ಬಳಸಬಹುದು. ಶುಂಠಿಯು ಗ್ಯಾಸ್ಟಿಕ್ ಸಮಸ್ಯೆಗೂ ಕೂಡ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ.

ಅನಾನಸ್: ಅನಾನಾಸ್ ಹಣ್ಣು ತಿನ್ನುವುದಕ್ಕೂ ರುಚಿ. ಈ ಹಣ್ಣಿನಲ್ಲಿ ಬ್ರೊಮೆಲಿನ್ ಎಂಬ ನೈಸರ್ಗಿಕ ರಾಸಾಯನಿಕ ಇದೆ.  ಉತ್ತಮ ಹಲ್ಲು ನೋವು ನಿವಾರಕವೂ ಹೌದು. ಈ ನೈಸರ್ಗಿಕ ರಾಸಾಯನಿಕದಿಂದಾಗಿ ತೂಕ ಇಳಿಯುತ್ತದೆ. ಹಾಗೂ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಅನಾನಸ್ ರಸ, ಅನಾನಸ್ ಸಲಾಡ್, ಅನಾನಸ್ ಚಟ್ನಿ ಮತ್ತು ಸುಟ್ಟ ಅನಾನಸ್ ಆಹಾರ ಪದಾರ್ಥಗಳನ್ನು ಮಾಡಿಕೊಂಡು ಸೇವಿಸಬಹುದು.

ಲವಂಗ: ಲವಂಗವು ಎಲ್ಲಾ ರೀತಿಯ ಹಲ್ಲು ಮತ್ತು ವಸಡು ನೋವುಗಳನ್ನ ನಿವಾರಿಸಬಲ್ಲದು. ಇನ್ನು ಹಲ್ಲು ನೋವಿನ ಔಷಧಗಳಲ್ಲಿಯೂ ಲವಂಗವನ್ನು ಬಳಸಲಾಗುತ್ತದೆ. ಹಲ್ಲು ನೋವು ಇರುವವರು ಲವಂಗವನ್ನು ಬಾಯಲ್ಲಿಯ್ಯು ಜಗೆಯಬಹುದು. ಅಥವಾ ಲವಂಗವನ್ನು ಜಜ್ಜಿ, ಅದನ್ನು ನೋವಿನ ಹಲ್ಲಿನ ಕೆಳಗೆ ಇಡಿ. ಕೂಡಲೇ ಹಲ್ಲು ನೋವು ನಿವಾರಣೆಯಾಗುತ್ತದೆ. ಇದರಲ್ಲಿ ಯುಜೆನಾಲ್ ಎಂಬ ಸಂಯುಕ್ತವಿದೆ. ಇದು ಮೊದಲು ನೋವಿನ ಜಾಗವನ್ನು ಮರಗಟ್ಟುವಂತೆ ಮಾಡಿ ನಂತರ ನೋವನ್ನು ಕಡಿಮೆ ಮಾಡುತ್ತದೆ.

ಚೆರ್ರಿ ಹಣ್ಣುಗಳು: ಚೆರ್ರಿ ಹಣ್ಣನ್ನು ಆಗಾಗ ಸೇವಿಸುತ್ತಿರುರುವುದು ಒಳ್ಳೆಯದು! ಈ ಹಣ್ಣಿನಲ್ಲಿ ಆಂಥೋಸಯಾನಿನ್ಸ್ ಎಂಬ ಸಕ್ರಿಯ ಸಂಯುಕ್ತವಿದೆ. ಇದು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಕನಿಷ್ಟ 20-25 ಚೆರ್ರಿಗಳನ್ನು ತಿನ್ನಬೇಕು. ಆಗ ನೋವು ಕಡಿಮೆಯಾಗುತ್ತಾ ಬರುತ್ತದೆ. ಚೆರ್ರಿ, ತಲೆನೋವು ಮತ್ತು ಕೀಲು ನೋವನ್ನು ಕೂಡ ಉಪಶಮನ ಮಾಡುತ್ತದೆ. ಚರ್ರಿ ಹಣ್ಣನ್ನು ಹಾಗೆಯೇ ಸೇವಿಸುವುದು ಉತ್ತಮ.

Leave A Reply

Your email address will not be published.