ಹತ್ತು ರೂಪಾಯಿಯ ಒಂದು ಪ್ಯಾಕೆಟ್ ಪಾರ್ಲೆ-ಜಿ ಬಿಸ್ಕಟ್ ಇದ್ರೆ ಸಾಕು ಎಷ್ಟು ರುಚಿಯಾದ ಸಿಹಿ ತಿಂಡಿ ರೆಡಿ ಮಾಡಬಹುದು ನೋಡಿ!

ಬುದ್ಧಿವಂತರೆಲ್ಲಾ ಪಾರ್ಲೇಜಿ ತಿನ್ನುತ್ತಾರೆ. ಪಾರ್ಲೇ ಜಿ ತಿಂದವರಲ್ಲ ಜೀನಿಯಸ್ ಆಗುತ್ತಾರೆ ಅಂತ ಹೇಳುತ್ತಾರೆ. ಅಡೇನೇ ಇರಲಿ ಬಿಸ್ಕಟ್ ಪ್ರಿಯರಂತೂ ಸಾಕಷ್ಟು ಜನರಿದ್ದಾರೆ. ಇನ್ನು ಬಿಸ್ಕಟ್ ನ್ನು ಹಾಗೆಯೇ ತಿನ್ನುವುದರ ಬದಲಿಗೆ ಒಂದು ರುಚಿಯಾದ ತಿಂಡಿಯನ್ನು ಮಾಡಿಕೊಂದು ಸವಿಯಬಹುದು. ಹೇಗೆ ಅಂತಿರಾ .. ಬನ್ನಿ ರೆಸಿಪಿ ನೋಡೋಣ.

ಬೇಕಾಗುವ ಸಾಮಗ್ರಿಗಳು;

ಪಾರ್ಲೆ ಜಿ ಬಿಸ್ಕೆಟ್ ಎರಡು ಪ್ಯಾಕೆಟ್ (ಹತ್ತು ರೂಪಾಯಿ ಪ್ಯಾಕೆಟ್) ಬೇರೆ ಬಿಸ್ಕಟ್ ನ್ನು ಕೂಡ ಬಳಸಬಹುದು.

ಹಾಲಿನ ಪುಡಿ – ಕಾಲು ಕಪ್

ಹಾಲು – ಕಾಲು ಕಪ್

ತುಪ್ಪ – ಕರಿಯಲು

ಬಾದಾಮಿ ಚೂರುಗಳು – ಅಲಂಕಾರಕ್ಕೆ

ಫ್ಲೇವರ್ ಗಾಗಿ ಸ್ಟ್ರಾಬೆರಿ ಅಥವಾ ವೆನಿಲ್ಲಾ ಎಸೆನ್ಸ್\ ಏಲಕ್ಕಿ ಪುಡಿ

ಮಾಡುವ ವಿಧಾನ;

ಮೊದಲಿಗೆ ಒಂದು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ ಆ ತುಪ್ಪದಲ್ಲಿ ಬಿಸ್ಕೆಟ್ ಅನ್ನು ಹಾಕಿ ಕರೆಯಿರಿ. ನೀವು ತುಪ್ಪದ ಬದಲು ಎಣ್ಣೆಯನ್ನು ಬಳಸಬಹುದು ಆದರೆ ತುಪ್ಪವನ್ನು ಬಳಸಿದರೆ ಪರಿಮಳ ಹಾಗೂ ಫ್ಲೇವರ್ ಉತ್ತಮವಾಗಿರುತ್ತದೆ. ಬಿಸ್ಕೆಟ್ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಹುರಿದು ತೆಗೆಯಿರಿ. ಈಗ ಉರಿದ ಬಿಸ್ಕೆಟ್ ಅನ್ನು ಎರಡು ಭಾಗವಾಗಿ ತುಂಡರಿಸಿ. ಈಗ ಒಂದು ಮಿಕ್ಸರ್ ಜಾರ್ ತೆಗೆದುಕೊಂಡು ಅದರಲ್ಲಿ ಈ ತುಂಡರಿಸಿದ ಬಿಸ್ಕೆಟ್ ಅನ್ನು ಹಾಕಿ ಪುಡಿ ಮಾಡಿ. ಇದು ತುಪ್ಪವನ್ನು ಹಾಕಿ ಫ್ರೈ ಮಾಡಿರೋ ಬಿಸ್ಕೆಟ್ ಆದ್ದರಿಂದ ಪೇಸ್ಟ್ ರೀತಿಯಲ್ಲಿ ತಯಾರಾಗುತ್ತೆ.

ಒಂದು ಬೌಲಿಗೆ ಕಾಲು ಕಪ್ಪು ಹಾಲಿನ ಪುಡಿಯನ್ನು ಹಾಕಿ ಇದಕ್ಕೆ ಕಾಲು ಕಪ್ಪು ಹಾಲನ್ನು ಸೇರಿಸಿ ಮಿಕ್ಸ್ ಮಾಡಿ. ಇದು ಕೋವಾದಂತೆ ಸಿದ್ಧವಾಗುತ್ತದೆ. ಈಗ ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಬಿಸಿ ಮಾಡಿ. ಇದಕ್ಕೆ ಕಾಲು ಕಪ್ಪು ಸಕ್ಕರೆಯನ್ನು ಹಾಕಿ ಸಕ್ಕರೆಯನ್ನು ಕರಗಿಸಿ. ಸಕ್ಕರೆ ಪಾಕ ಬಂದ ನಂತರ ಇದಕ್ಕೆ ಕಲಸಿಟ್ಟ ಹಾಲಿನ ಪುಡಿ ಮಿಶ್ರಣವನ್ನು ಹಾಕಿ. ಸಕ್ಕರೆ ಪಾಕ ಒಂದೆಳೆ ಬಂದರೆ ಸಾಕು ಅದಕ್ಕಿಂತ ಹೆಚ್ಚಿಗೆ ಪಾಕ ತರಿಸುವ ಅಗತ್ಯವಿಲ್ಲ. ಹಾಲಿನ ಪುಡಿ ಸ್ವಲ್ಪ ಗಟ್ಟಿಯಾಗುವವರೆಗೆ ಕೈ ಆಡಿಸುತ್ತಲೇ ಇರಿ. ಈಗ ಇದಕ್ಕೆ ಫ್ಲೇವರ್ ಗಾಗಿ ಸ್ಟ್ರಾಬೆರಿ ಎಸ್ಸೆನ್ಸ್ ಹಾಕಿ. ಇದು ಆಪ್ಷನಲ್ ಆಗಿದ್ದು ಬೇಕಾದರೆ ಈ ಹಂತವನ್ನು ಸ್ಕಿಪ್ ಮಾಡಬಹುದು.

ಹಾಲಿನ ಪುಡಿ ಹಾಗೂ ಸಕ್ಕರೆ ಸರಿಯಾಗಿ ಪೇಸ್ಟ್ ರೀತಿ ಬಂದ ತಕ್ಷಣ ಅದಕ್ಕೆ ಮಿಕ್ಸಿಯಲ್ಲಿ ಬಿಟ್ಟುಕೊಂಡ ಬಿಸ್ಕೆಟ್ ಪೇಸ್ಟನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿ ಇಟ್ಟು ಇದನ್ನ ಮಿಕ್ಸ್ ಮಾಡಿಕೊಳ್ಳಿ ಈಗ ಬೇಕಿದ್ದರೆ ಸ್ವಲ್ಪ ತುಪ್ಪವನ್ನು ಸೇರಿಸಬಹುದು. ಈಗ ಮಿಕ್ಸ್ ಮಾಡುತ್ತಾ ಇದ್ದಂತೆ ಹೆಚ್ಚುವರಿ ತುಂಬಾ ಬಿಟ್ಟುಕೊಂಡು ಬರುತ್ತದೆ ಹಾಗಾದಾಗ ಅದನ್ನ ತೆಗೆದು ಒಂದು ಎಣ್ಣೆ ಸಾವಿರದ ಪ್ಲೇಟ್ ಮೇಲೆ ಹಾಕಿ. ಇದನ್ನು ಸರಿಯಾಗಿ ಚೌಕಾಕಾರದಲ್ಲಿ ಪ್ಲೇಟ್ ಮೇಲೆ ಹರಡಿ ನಂತರ ಇದರ ಮೇಲ್ಭಾಗದಲ್ಲಿ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಬಾದಾಮಿ ಪುಡಿಯನ್ನು ಹಾಕಿ. ನಂತರ 10 ನಿಮಿಷ ಹಾಗೆ ಬಿಡಿ. ಬಳಿಕ ಇದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಂಡರೆ ಬಿಸ್ಕೆಟ್ನಿಂದ ತಯಾರಾದ ಸ್ವೀಟ್ ಸವಿಯಲು ಸಿದ್ಧ.

Leave A Reply

Your email address will not be published.