300ರೂ. ಒಳಗೆ ಪಡೆಯಬಹುದು ಪೂರ್ತಿ ಒಂದು ತಿಂಗಳ ಪ್ರೀಪೇಯ್ಡ್ ಪ್ಲ್ಯಾನ್; ಇದರಲ್ಲಿ ಏನೆಲ್ಲಾ ಸೌಲಭ್ಯಗಳಿವೆ ನೋಡಿ!

ದೇಶದ ಪ್ರಖ್ಯಾತ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್ಟೆಲ್, ಬಿಎಸ್ಎನ್ಎಲ್, ವಿ ಐ ಎಲ್ಲವೂ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಹೊಸ ಹೊಸ ಪ್ರಿಪೇಡ್ ಯೋಜನೆಗಳನ್ನು ಪರಿಚಯಿಸುತ್ತಿರುತ್ತವೆ. ಪ್ರತಿ ಬಾರಿ ವಿಶೇಷ ಹಾಗೂ ಆಕರ್ಷಕವಾದ ಪ್ರಿಪೇಡ್ ಯೋಜನೆಗಳನ್ನ ನೀಡುತ್ತವೆ. ಆದರೆ ಜನರು ತಮಗೆ ಬೇಕಾದ ಡಾಟಾ ವಾಯ್ಸ್ ಕರೆ ಮೊದಲ ಸೌಲಭ್ಯಗಳಿರುವ ಟೆಲಿಕಾಂ ಯೋಜನೆಗಳನ್ನು ಆಯ್ದುಕೊಳ್ಳುತ್ತಾರೆ ಅದರಲ್ಲಿಯೂ ಹೆಚ್ಚಾಗಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ತಿಂಗಳು ಪೂರ್ತಿ ಬಳಕೆ ಮಾಡಲು ಸಾಧ್ಯವಾಗುವಂತಹ ಯೋಜನೆಗಳಿದ್ದರೆ ಹೆಚ್ಚು ಪ್ರಯೋಜನಕಾರಿ ಹಾಗಾಗಿ ಇಂತಹ ಯೋಜನೆಗಳನ್ನು ಕೂಡ ಟೆಲಿಕಾಂ ಕಂಪನಿಗಳು ಪ್ರಸ್ತುತಪಡಿಸಿವೆ. ಹೆಚ್ಚಾಗಿ ಪ್ರಿಪೇರ್ ಪ್ಲಾನ್ ಗಳು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತವೆ ಆದರೆ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ರಿಪೇಡ್ ಪ್ಲಾನ್ ಗಳನ್ನು ಜನರು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಹೀಗಾಗಿ 300 ರೂಪಾಯಿಗಳ ಬೆಲೆಗೆ ತಿಂಗಳ ಪೂರ್ತಿ ಪ್ರಯೋಜನ ಪಡೆಯಬಹುದಾದಂತ ಪ್ರಿಪೇಡ್ ಯೋಜನೆಗಳನ್ನು ಕೆಲವು ಟೆಲಿಕಾಂ ಕಂಪನಿಗಳು ಪರಿಚಯಿಸುವೆ. ಬನ್ನಿ ಆ ಯೋಜನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಜಿಯೋ ಟೆಲಿಕಾಂ ನ 259 ರೂಪಾಯಿ ಪ್ಲಾನ್; ಈ ಯೋಜನೆಯ ಸಂಪೂರ್ಣ ಒಂದು ತಿಂಗಳ ಯೋಜನೆಯಾಗಿದೆ. ಈ ಪ್ರಿಪೇಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ 1.5ಜಿಬಿ ಡಾಟಾ ಪ್ರಯೋಜನ ಸಿಗುತ್ತದೆ. ದಿನದಲ್ಲಿ ಈ ಡಾಟಾ ಮುಗಿದರೆ ಅದು 64 ಕೆಬಿಎಸ್ ಗೆ ಇಳಿಯುತ್ತದೆ. ಅಷ್ಟೇ ಅಲ್ಲದೆ ಈ ಪ್ಲಾನ್ ನಲ್ಲಿ ಅನೇಕ ಧ್ವನಿ ಕರೆಗಳು ಹಾಗೂ ದೈನಂದಿನ 100 ಎಸ್ಎಂಎಸ್ ಗಳು ಕೂಡ ಲಭ್ಯವಿವೆ. ಇಷ್ಟೇ ಅಲ್ಲದೆ ಜಿಯೋಗ್ರಾಹಕರು ಜಿಯೋ ಅಪ್ಲಿಕೇಶನ್ ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ಪಡೆಯಬಹುದು.

ಏರ್ಟೆಲ್ 296 ರೂಪಾಯಿ ಪ್ರಿಪೇಯ್ಡ್ ಪ್ಲಾನ್; ಈ ಯೋಜನೆಯ ಕೂಡ ಪೂರ್ಣ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದೆ ಅಂದರೆ ಈ ಯೋಜನೆಯ ಅಡಿಯಲ್ಲಿ ನೀವು 30 ದಿನಗಳಿಗೆ 25 ಜಿಬಿ ಡಾಟಾವನ್ನು ಪಡೆಯಬಹುದು. ಜೊತೆಗೆ ಅನಿಯಮಿತ ಕರೆಗಳನ್ನು ಕೂಡ ಗ್ರಾಹಕರು ಪಡೆದುಕೊಳ್ಳಬಹುದು. ಇನ್ನು ದಿನದ ಡಾಟಾ ಮುಗಿದ ನಂತರ ಚಂದದಾರರು ಪ್ರತಿ ಎಂಬಿ ಗೆ 50 ಪೈಸೆ ಶುಲ್ಕ ನೀಡಬೇಕಾಗುತ್ತದೆ. ಜೊತೆಗೆ ಪ್ರತಿದಿನ 100 ಎಸ್ಎಂಎಸ್ ಗಳ ಸೌಲಭ್ಯ ಇದೆ. ಅಷ್ಟೇ ಅಲ್ಲದೆ ಚಂದದಾರರು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಅಗತ್ಯನ ಪಡೆಯಬಹುದು ಅಲ್ಲದೆ ಹಲೋ ಟ್ಯೂನ್ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.

ಬಿಎಸ್ಎನ್ಎಲ್ ನ 247 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್; ಇತ್ತೀಚಿಗೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸಡ್ಡು ಹೊಡೆಯುವಂತೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಯೋಜನೆಯಲ್ಲಿ ಪ್ರತಿದಿನ 100 ಎಸ್ ಎಂ ಎಸ್ ಸೌಲಭ್ಯ ಇದೆ ಇದರೊಂದಿಗೆ ಉಚಿತ ವಾಯ್ಸ್ ಕರೆಗಳ ಸೌಲಭ್ಯ ಕೂಡ ಇದೆ. ಈ ಯೋಜನೆ ಕೂಡ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ವಿ ಟೆಲಿಕಾಂ ನ 249 ರೂಪಾಯಿ ಪ್ರೀಪೇಯ್ಡ್ ಪ್ಲ್ಯಾನ್; ಈ ಪ್ರಿಪೇಡ್ ಪ್ಲಾನ್ ಕೇವಲ 21 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಇದರಲ್ಲಿಯೂ 100 ಉಚಿತ ಎಸ್ಎಂಎಸ್ ಸೌಲಭ್ಯಗಳಿದ್ದು ಗ್ರಾಹಕರು ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. ಅಲ್ಲದೇ ದಿನಕ್ಕೆ 1.5 ಜಿಬಿ ಡಾಟಾ ಪ್ರಯೋಜನವನ್ನು ಕೂಡ ಪಡೆಯಬಹುದು.

Leave A Reply

Your email address will not be published.