ಯಾವ ರಾಶಿಯವರು ಯಾವ ರಾಶಿಯವರ ಸ್ನೇಹ ಮಾಡಬಹುದು ಗೊತ್ತಾ? ಇದರಿಂದ ಸ್ನೇಹವೂ ಗಟ್ಟಿಯಾಗಿರುತ್ತೆ ನೋಡಿ!

ಸ್ನೇಹಿತರ ದಿನ ಅಂದ್ರೆ ಸ್ನೇಹಿತರಿಗೆ ಖುಷಿ. ಒಬ್ಬರಿಗೊಬ್ಬರು ಕೈಗೆ ಸ್ನೆಹಿತರ ಬ್ಯಾಂಡ್ ಬದಲಾಯಿಸಿಕೊಂಡು ಖುಷಿ ಪಡುತ್ತಾರೆ. ಹಲವರು ಸ್ನೇಹಕ್ಕೆ ರಕ್ತ ಸಂಬಂಧಕ್ಕಿಂತಲೂ ಹೆಚ್ಚಿನ ಬೆಲೆಯನ್ನು ಕೊಡುತ್ತಾರೆ. ಆದರೆ ಕಲವರು ಸ್ನೇಹವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಬಿಡಿ! ಅಂದಹಾಗೆ ಯಾವ ರಾಶಿಯವರು ಯಾರ ಸ್ನೆಹ ಮಾಡಬಹುದು? ಯಾವ ಎರಡು ರಾಸಿಯವರು ಸ್ನೇಹಿತರಾಗಿ ಬಹಳಷ್ಟು ಸ್ಮಾಯ ಜೊತೆಗಿರಬಲ್ಲರು ಬನ್ನಿ ನೋಡೋಣ.

ಮೇಷ: ಮೇಷ ರಾಶಿಯವರು ಸ್ನೆಹಪರ ವ್ಯಕ್ತಿತ್ವ ಹೊಂದಿರುತ್ತಾರೆ. ಧನು ರಾಶಿಯವರು ಇವರಿಗೆ ಉತ್ತಮ ಸ್ನೇಹಿತರಾಗುತ್ತಾರೆ. ಈ ಇಬ್ಬರು ಅತ್ಯುತ್ತಮ ಸಮಯವನ್ನು ಜೊತೆಯಾಗಿ ಕಳೆಯುತ್ತಾರೆ. ಇನ್ನು ವೃಷಭ ರಾಶಿಯವರು ಹೆಚ್ಚಾಗಿ ಕನ್ಯಾ ರಾಶಿಯವರೊಂದಿಗೆ ಉತ್ತಮ ಸ್ನೇಹ ಹೊಂದಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸ್ನೇಹಿತರ ಹುಡುಕಾಟ ನಡೆಸುವವರಾಗಿರುತ್ತಾರೆ.

ಮಿಥುನ ರಾಶಿಯವರು ತುಲಾ ರಾಶಿಯವ ಉತ್ತಮ ಸ್ನೆಹಿತರು. ಅಲ್ಲದೇ ಇವರಿಗೆ ಕುಂಬರಾಶಿಯವರು ಕೂಡ ಉತ್ತಮ ಸ್ನೇಹಿತರಾಗಬಲ್ಲರು. ಕಟಕ ಹಾಗೂ ವೃಶ್ಚಿಕ ರಾಶಿಯವರಿಗೆ ಅವಿನಾಭಾವ ನಂಟು. ಇಬ್ಬರ ನಡುವೆ ಭಾವನೆಗಳು ಆಳವಾಗಿರುತ್ತದೆ.  ಯಾವುದೇ ರಾಶಿಯ ಸ್ನೆಹಿತರನ್ನು ಮಾಡಿಕೊಳ್ಳುವ ಸಾಮರ್ಥ್ಯ ಸಿಂಹ ರಾಶಿಯವರಿಗೆದೆ. ಸ್ನೇಹದಲ್ಲಿ ಪರಸ್ಪರ ವ್ಯತ್ಯಾಸ ಇದ್ರೂ ಎಲ್ಲವನ್ನೂ ಮ್ಯಾನೇಜ್ ಮಾಡುತ್ತಾರೆ ಸಿಂಹ ರಾಶಿಯವರು.

ಕನ್ಯಾ ರಾಶಿಯವರು ಮಕರ ರಾಶಿಯವರೊಂದಿಗೆ ಒಳ್ಳೆಯ ಸ್ನೇಹ ಬೆಳೆಸಿಕೊಳ್ಳಬಲ್ಲವರು. ಪ್ರಾಮಾಣಿಕ ಸ್ನೆಹಕ್ಕೆ ಬೆಲೆ ಕೊಡುತ್ತಾರೆ. ಇನ್ನು ತುಲಾ ರಾಶಿಯವರು ಮತ್ತು ಕುಂಭ ರಾಶಿಯವರು ಚೆನ್ನಾಗಿ ಬೆರೆಯುತ್ತಾರೆ. ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳುವ ಸ್ನೇಹಿತರು ಇವರು. ಇವರ ಸ್ನೇಹ ನೋಡಿದರೆ ಇತರರಿಗೆ ಅಸೂಯೆ  ಮೂಡಬಹುದು.  ಇಬ್ಬರೂ ಪರಸ್ಪರ ಗೌರವಿಸುತ್ತಾರೆ.

ವೃಶ್ಚಿಕ ಮತ್ತು ಮೀನ ರಾಶಿಯವರು ಅದ್ಭುತ ಸ್ನೇಹಿತರಾಗಬಲ್ಲರು.  ಇವರ ಸ್ನೇಹ ದೀರ್ಘಕಾಲದವರೆಗೆ ಮುಂದುವರೆಯುತ್ತದೆ. ಇಬ್ಬರ ನಡುವಿನ ನಂಬಿಕೆ ಉತ್ತಮವಾಗಿರುತ್ತದೆ. ಧನು ರಾಶಿಯವರು ಸಿಂಹ ರಾಶಿಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇಬ್ಬರೂ ಜೊತೆಯಾಗಿ ಸುತ್ತಾಡುತ್ತಾರೆ.    ವೃಷಭ ರಾಶಿಯವರೊಂದಿಗೆ ಮಕರ ರಾಶಿಯವರು ಉತ್ತಮ ಸ್ನೇಹಿತರಾಗುತ್ತಾರೆ. ಇಬ್ಬರ ನಡುವಿನ ಆತ್ಮೀಯತೆ ಆಳವಾಗಿರುತ್ತದೆ. ಮಾದರಿ ಸ್ನೇಹಿತರು ಎನಿಸಿಕೊಳ್ಳುತ್ತಾರೆ.

ಕುಂಭ ರಾಶಿಯವರು ಮತ್ತು ಮಿಥುನ ರಾಶಿಯವರು ಒಳ್ಳೆಯ ಸ್ನೆಹಿತರಾಗಬಲ್ಲವರು. ಸದಾ ಹರಟುವುದು ಇವರ ಹವ್ಯಾಸ. ಮೀನ ಮತ್ತು ಕಟಕ ರಾಶಿಯವರು ಒಟ್ಟಾಗಿ ಇರುವ ಉತ್ತಮ ಸ್ನೆಹಿತರು. ಇವರು ಯಾವಾಗಲೂ ದೂರಾಗುವುದೇ ಇಲ್ಲ. ನಿಮ್ಮ ಸ್ನೇಹಿತರು ಯಾವ ರಾಶಿಯವರು? ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ!

Leave A Reply

Your email address will not be published.