ಬಿಗ್ ಅಪ್ಡೇಟ್: ಬಿಗ್ ಬಾಸ್ ಗೆ ಹೋಗುತ್ತಿರುವ ಮೊದಲ ಸ್ಪರ್ಧಿ ಯಾರು ಗೊತ್ತೆ?? ಕೊನೆಗೂ ಸಿಕ್ತು ನಿಖರ ಮಾಹಿತಿ

ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 6 ರಿಂದ ಬಿಗ್ ಬಾಸ್ ಆರಂಭವಾಗಲಿದೆ. ಈಗಾಗಲೇ ಇದರ ಪ್ರೊಮೋ ಕೂಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಕಿಚ್ಚ ಸುದೀಪ್ ಈ ಪ್ರಮೋದಲ್ಲಿ ಉತ್ತಮ ಔಟ್ ಫಿಟ್ ಧರಿಸಿದ್ದಾರೆ. ಇದು ಕಿಚ್ಚನ ಅಭಿಮಾನಿಗಳಿಗೂ ಬಹಳ ಇಷ್ಟವಾಗಿದೆ.

ಇನ್ನು ಈ ಬಾರಿಯ ಬಿಗ್ ಬಾಸ್ ಸೀಸನ್ 9 ಬಹಳ ವಿಶೇಷವಾಗಿ ಇರಲಿದೆ. ಅದೇನೆಂದರೆ ಬಿಗ್ ಬಾಸ್ ವೂಟ್ ಸೆಲೆಕ್ಟ್ ನಲ್ಲಿ ಪ್ರಸಾರವಾಗಲಿದೆ. ದಿನದ 24 ಗಂಟೆಯೂ ಬಿಗ್ ಬಾಸ್ ಮನೆಯ ದೃಶ್ಯಾವಳಿಗಳನ್ನು ತೋರಿಸಲಾಗುತ್ತದೆ. ಮೊದಲೇ ಜನರಿಗೆ ಬಿಗ್ ಬಾಸ್ ಬಗ್ಗೆ ಕುತೂಹಲ ಜಾಸ್ತಿ ಅದರಲ್ಲೂ ಇಡೀ ದಿನ ಪ್ರಸಾರವಾಗುವ ಬಿಗ್ ಬಾಸ್ ಶೋ ನೋಡಲು ಹಲವರು ಕಾಯುತ್ತಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಈಗಾಗಲೇ ಚರ್ಚೆಗಳು ಆರಂಭವಾಗಿವೆ. ಪ್ರತಿಬಾರಿ ಬಿಗ್ ಬಾಸ್ ಪ್ರಸಾರವಾಗುವ ಸೂಚನೆ ಸಿಕ್ಕ ಕೂಡಲೇ ಜನರು ತಮಗೆ ಇಷ್ಟವಾದ ಸ್ಪರ್ಧಿಗಳ ಹೆಸರಗಳನ್ನು ಸೂಚಿಸುತ್ತಾರೆ. ಅದರಲ್ಲೂ ಈ ಬಾರಿ ಬಿಗ್ ಬಾಸ್ ಮನೆಗೆ ಸೋಶಿಯಲ್ ಮಿಡಿಯಾ ಸ್ಟಾರ್ ಗಳನ್ನು ಹೆಚ್ಚಾಗಿ ಕರೆತರಲಾಗುವುದು ಎನ್ನುವ ಮಾಹಿತಿ ಇದೆ. ಇದೀಗ ವೈರಲ್ ಸ್ಟಾರ್ ಗಳು ಹೆಚ್ಚಾಗುತ್ತಿದ್ದು, ಯೂಟ್ಯೂಬ್ ನಲ್ಲಿಯೂ ಕೆಲವರು ತುಂಬಾನೇ ಫೇಮಸ್ ಆಗುತ್ತಿದ್ದಾರೆ. ಇಂಥವರನ್ನ ಬಿಗ್ ಬಾಸ್ ಮನೆಗೆ ಕಳುಹಿಸುತ್ತಾರೆ ಹಾಗೂ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರವಾಗುವ ಸೀಸನ್ ನಲ್ಲಿಯೂ ಈ ಕೆಲವು ಸ್ಪರ್ಧಿಗಳು ಇರಲಿದ್ದಾರೆ ಎನ್ನುವ ಮಾಹಿತಿಯಿದೆ.

ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಹೋಗುತ್ತಾರೆ ಎನ್ನುವ ಕುತೂಹಲ ಹಲವರಲ್ಲಿದೆ. ಪ್ರತಿಸಲದಂತೆ ಈ ಬಾರಿಯೂ ಸ್ಪರ್ಧಿಗಳ ಬಗ್ಗೆ ಯಾವ ಹಿಂಟ್ ನ್ನೂ ಬಿಟ್ಟುಕೊಟ್ಟಿಲ್ಲ ಬಿಗ್ ಬಾಸ್ ತಂಡ. ಆದರೂ ಈ ನಡುವೆ ಬಿಗ್ ಬಾಸ್ ಮನೆಗೆ ಹೋಗುವ ಒಬ್ಬ ಸ್ಪರ್ಧಿಯ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ಆ ಸ್ಪರ್ಧಿ ಯಾರು ಗೊತ್ತೇ!

ಬಿಗ್ ಬಾಸ್ ಮನೆಗೆ ಹೋಗುವ ಒಂದು ಸ್ಪರ್ಧಿಯ ಹೆಸರು ಲೀಕ್ ಆಗಿದೆ. ಅವರು ಬೇರೆ ಯಾರೂ ಅಲ್ಲ, ಮಮ್ಗಳ ಮುಖಿಯರ ಏಳ್ಗೆಗಾಗಿ ಶ್ರಮಿಸುತ್ತಿರುವ ಮಂಜಮ್ಮ ಜೋಗತಿ. ಹೌದು, ಬಿಗ್ ಬಾಸ್ ಗೆ ಇವರೇ ಮೊದಲ ಸ್ಪರ್ಧಿಯಾಗಿ ಹೋಗಲಿದ್ದಾರಂತೆ! ಆದರೂ ಇದು ಕೇವಲ ಗಾಸಿಪ್ ಅಥವಾ ನಿಜವಾದ ಹೆಸರೋ ಎಂದು ತಿಳಿಯಲು ಅಗಸ್ಟ್ 6ರ ವರೆಗೆ ಕಾಯಬೇಕು!

Leave A Reply

Your email address will not be published.