ರಾಜಮೌಳಿ ಮೆಚ್ಚಿದ ವಿಕ್ರಾಂತ್ ರೋಣ: ಅದರಲ್ಲೂ ರಾಜಮೌಳಿ ಮನಗೆದ್ದಿದೆ ಅದೊಂದು ವಿಶೇಷ ಪಾತ್ರ ಯಾವುದು ಗೊತ್ತೇ??

ಕೊನೆಗೂ ನಿರೀಕ್ಷೆಯಂತೆಯೇ ವಿಕ್ರಾಂತ್ ರೋಣ ಸಿನಿಮಾ ಗೆದ್ದಿದೆ. ತೆರೆಕಂದ ಎರಡೇ ದಿನದಲ್ಲಿ ವಿಶ್ವಾದ್ಯಂತ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ದ ಬಜೆಟ್ ನಲ್ಲಿ ನಿರ್ಮಿಸಿದ ಮೊದಲ 3 ಡಿ ಚಿತ್ರ ಎನ್ನುವ ಖ್ಯಾತಿ ಕೂಡ ಇದರದ್ದು. ಈಗಾಗಲೇ ವಿಶ್ವಾದ್ಯಂತ 1600 ಥಿಯೇಟರ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾದ 3ಡಿ ವರ್ಶನ್ ಬಿಡುಗಡೆಯಾಗಿದೆ. ರಾಜ್ಯದಲ್ಲಂತೂ ವಿಕ್ರಾಂತ್ ನ ಆರ್ಭಟ ಜೋರಾಗಿದೆ. ಆರಡಿ ಕಟೌಟ್ ಗೆ ಅಭಿಮಾನಿಗಳ ಅಭಿನಂದನೆಗಳ ಮಹಾಪೂರವೆ ಹರಿದುಬರುತ್ತಿದೆ.

ಅಂದಹಾಗೆ ವಿಕ್ರಾಂತ್ ರೋಣ ಸಿನಿಮಾವನ್ನು ಇತರ ಎಲ್ಲಾ ಭಾಷೆಯ ಸಿನಿ ಪ್ರಿಯರೂ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಖ್ಯಾತ ನಿರ್ದೇಶಕರಿಗೂ ಕೂಡ ಈ ಪ್ರಯತ್ನ ಇಷ್ಟವಾಗಿದೆ. ಇನ್ನು ವಿಕ್ರಾಂತ್ ರೋಣ ಸಿನಿಮಾವನ್ನು ನೋಡಿ ಟಾಲಿವುಡ್ ನ ಬೆಸ್ಟ್ ಡೈರೆಕ್ಟರ್ ರಾಜಮೌಳಿ ಕೂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಹೌದು ಟ್ವೀಟರ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾ ನೊಡಿದ ಬಳಿಕ ಆ ಬಗ್ಗೆ ಮಾತನಾಡಿದ್ದಾರೆ ನಿರ್ದೇಶಕ ರಾಜಮೌಳಿ!

ರಾಜಮೌಳಿ ಹಾಗೂ ಸುದೀಪ್ ನಡುವೆ ಬಹಳ ಉತ್ತಮ ಸ್ನೇಹವಿದೆ. ಹಾಗಾಗಿ ಇಬ್ಬರೂ ಸಿನಿಮಾರಂಗದಲ್ಲಿಯೂ ಒಬ್ಬರಿಗೊಬ್ಬರು ಬೆಂಬಲವಾಗಿಯೇ ನಿಂತಿದ್ದಾರೆ.  ಸುದೀಪ್ ಅವರ ಸಿನಿಮಾಗಳಿಗೂ ವಿಮರ್ಶೆಗಳನ್ನ ಹೇಳುತ್ತಾರೆ ರಾಜಮೌಳಿ! ರಾಜಮೌಳಿ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ್ದು ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಜೊತೆಗೆ ಟಾಲಿವುಡ್ ನಲ್ಲಿಯೂ ವಿಕ್ರಾಂತ್ ರೋಣ ಇನ್ನಷ್ಟು ಜನರನ್ನು ಆಕರ್ಷಿಸುತ್ತಿದೆ. ಈ ಸಿನಿಮಾವನ್ನು ನೋಡಿದ್ರೆ ಚಿತ್ರರಂಗದ ಎಫರ್ಟ್ ಎದ್ದು ಕಾಣಿಸುತ್ತದೆ. ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು ಬಾಕ್ ಮಂಜು ಬಂಡವಾಳ ಹಾಕಿದ್ದಾರೆ.

ವಿಕ್ರಾಂತ್ ರೋಣ ಸಿನಿಮಾವನ್ನ ಮೆಚ್ಚಿಕೊಂಡಿರುವ ನಿರ್ದೇಶಕ ರಾಜಮೌಳಿ ಈ ಸಿನಿಮಾದಲ್ಲಿ ಬರುವ ಒಂದು ವಿಶೇಷ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದು ಆ ಪಾತ್ರದ ಬಗ್ಗೆಯೂ ಬರೆದಿದ್ದಾರೆ. ’ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿಗಾಗಿ ನಿಮಗೆ ಅಭಿನಂದನೆಗಳು ಕಿಚ್ಚ ಸುದೀಪ್. ಈ ರೀತಿಯ ಸಿನಿಮಾ ಮಾಡುವುದಕ್ಕೆ ಧೈರ್ಯ ಮತ್ತು ನಂಬಿಕೆ ಎರಡೂ ಬೇಕು. ಹಾಗಾಗಿಯೇ ನಿಮಗೆ ಯಶಸ್ಸು ಸಿಕ್ಕಿದೆ. ಈ ಚಿತ್ರದ ಕೇಂದ್ರಬಿಂದುವಾದ ಪ್ರಿಕ್ಲೈಮ್ಯಾಕ್ಸ್ ಸನ್ನಿವೇಶ ಅದ್ಭುತವಾಗಿದೆ. ಜೊತೆಗೆ ವಿಶೇಷ ಅಭಿನಂದನೆಗಳು ಗುಡ್ಡಿಯ ಸ್ನೇಹಿತ ಭಾಸ್ಕರ್ ಪಾತ್ರಕ್ಕೆ’. ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.  ಇಲ್ಲಿ ಭಾಸ್ಕರ್ ಪಾತ್ರ ಯಾಕೆ ವಿಶೇಷ ಅನ್ನೋದನ್ನ ಸಿನಿಮಾ ನೋಡಿದೋರಿಗೆ ಅರ್ಥವಾಗಿರುತ್ತೆ! ಇನ್ನು ಕಿಚ್ಚ ಸುದೀಪ್ ಕೂಡ ರಾಜಮೌಳಿಯವರ ಟ್ವೀಟ್ ಗೆ ಪುನರ್ ಸಂದೇಶವನ್ನೂ ಕಳುಹಿಸಿದ್ದಾರೆ. ’ಧನ್ಯವಾದಗಳು ರಾಜಮೌಳಿ ಸರ್. ನಿಮ್ಮಿಂದ ಇಂಥ ಮಾತುಗಳನ್ನು ಕೇಳುವುದು ಹೆಮ್ಮೆಯ ಸಂಗತಿ. ಭಾಸ್ಕರ್ ಸೇರಿದಂತೆ ನಮ್ಮೆಲ್ಲರ ಕಡೆಯಿಂದ ಧನ್ಯವಾದಗಳು ಹಾಗೂ ಪ್ರೀತಿಯ ಅಪ್ಪುಗೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಕಿಚ್ಚ ಸುದೀಪ್. ಒಟ್ಟಿನಲ್ಲಿ ಕೆಜಿಎಫ್ ಹಾಗೂ ಆರ್ ಆರ್ ಆರ್ ಸಿನಿಮಾ ಸಕ್ಸೆನ್ ನಂತರ ಅದೆಲ್ಲಾ ದಾಖಲೆಗಳನ್ನು ಮುರಿಯುವತ್ತ ವಿಕ್ರಾಂತ್ ರೋಣ ಮುನ್ನುಗ್ಗುತ್ತಿದೆ

Leave A Reply

Your email address will not be published.