ಒಂದು ಕಡೆ ಕಪಾಳಮೋಕ್ಷ: ಮತ್ತೊಂದು ಕಡೆ ಚಂದನ್ ಶಾಕ್ ನೀಡಲು ತಯಾರಿ ನಡೆಸಿದ ತೆಲುಗಿನ ಜನತೆ: ಏನಾಗುತ್ತಿದೆ ಗೊತ್ತೇ??

ಕನ್ನಡದ ಉದಯೋನ್ಮುಖ ಯುವ ನಟ ಚಂದನ್ ಕುಮಾರ್ ಅವರ ಜೀವನದಲ್ಲಿ ನಡೆದ ಇದೊಂದು ಘಟನೆ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಚಂದನ್ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಧಾರಾವಾಹಿಗಳಲ್ಲಿಯೂ ಹೆಚ್ಚು ಅಭಿನಯಿಸುತ್ತಿದ್ದರು ಅಲ್ಲಿಯೂ ಅತ್ಯುತ್ತಮ ನಟ ಅಂತ ಕರೆಸಿಕೊಂಡಿರುವ ಚಂದನ್ ಕುಮಾರ್ ಇದೀಗ ತೆಲುಗು ಜನರ ದೃಷ್ಟಿಯಲ್ಲಿ ವಿಲನ್ ಆಗಿದ್ದಾರೆ. ಇದಕ್ಕೆ ಕಾರಣ ಇತ್ತೀಚೆಗೆ ನಡೆದ ಒಂದು ಘಟನೆ.

ಕನ್ನಡದ ಯುವ ನಟ ಚಂದನ್ ಕುಮಾರ್ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಸಿನಿಮಾದ ಮೂಲಕ ಖ್ಯಾತಿಯನ್ನು ಪಡೆದಿದ್ದಾರೆ. ಕನ್ನಡದಲ್ಲಿ ಧಾರಾವಾಹಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಜೊತೆಗೆ ಹಲವಾರು ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ ಚಂದನ್ ಅವರು ಬಿಗ್ ಬಾಸ್ ನಲ್ಲಿ ರನ್ನರ್ ಅಫ್ ಕೂಡ ಆಗಿದ್ದವರು. ಇತ್ತೀಚಿಗೆ ತೆಲುಗಿನಲ್ಲಿ ’ಸಾವಿತ್ರಮ್ಮ ಗಾರಿ ಅಬ್ಬಾಯಿ’ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಚಂದನ್ ಈ ಧಾರಾವಾಹಿಯ ಮೂಲಕ ತಲುಗಿನಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಇದೀಗ ಚಂದನ್ ಕುಮಾರ್ ಹಾಗೂ ಅಲ್ಲಿನ ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ನಡುವೆ ಗುದ್ದಾಟ ನಡೆದಿದೆ.

ಧಾರಾವಾಹಿಯ ಶೂಟಿಂಗ್ಗಾಗಿ ಹೈದ್ರಾಬಾದಿಗೆ ತೆರಳಿದ್ದರು. ಚಂದನ್ ಆ ಸಮಯದಲ್ಲಿ ಶೂಟಿಂಗ್ ಸೆಟ್ ನಲ್ಲಿ ಶೂಟಿಂಗ್ ಆರಂಭವಾಗುವುದಕ್ಕೂ ಮುನ್ನ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಮಲಗಿಕೊಂಡಿದ್ದರಂತೆ. ಆ ಸಮಯದಲ್ಲಿ ಅಸಿಸ್ಟೆಂಟ್ ಕ್ಯಾಮರಾ ಮ್ಯಾನ್ ಮೇಲೆ ಚಂದನ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿತ್ತು ಅಲ್ಲದೆ ಶೂಟಿಂಗ್ ಸೆಟ್ ನಲ್ಲಿ ಚಂದನ್ ಕುಮಾರ್ ಅವರ ಮೇಲೆ ಅಸಿಸ್ಟೆಂಟ್ ಕ್ಯಾಮರಾಮನ್ ಹಲ್ಲೇ ನಡೆಸಿದ್ದು, ಆ ವಿಡಿಯೋ ವೈರಲ್ ಆಗಿತ್ತು.

ಸದ್ಯ ಚಂದನ್ ಕುಮಾರ್ ಅವರು ತೆಲುಗಿನ ಕ್ಯಾಮರಾಮನ್ ಹಾಗೂ ತಂತ್ರಜ್ಞಾನ ಜೊತೆ ಮಾಡಿಕೊಂಡಿರುವ ಕಿರಿಕ್ ನಿಂದಾಗಿ ಅವರಿಗೆ ಕೆರಿಯರಿಗೆ ಕುತ್ತು ಬರುವ ಸಾಧ್ಯತೆ ಇದೆ. ಇತ್ತು ಚಂದನ್ ಅವರು ಈಗಾಗಲೇ ಕನ್ನಡ ಪರ ಸಂಘಟನೆಯವರ ಜೊತೆಯು ಸೇರಿ ಪತ್ರಿಕಾಗೋಷ್ಠಿ ನಡೆಸಿದ್ದು ತನಗೆ ಕಬಾಳ ಮೋಕ್ಷ ಮಾಡಿದವರು ನನ್ನ ಬಳಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ ಅತ್ತ ಚಂದನ್ ಕುಮಾರ್ ಅವರನ್ನು ತೆಲುಗು ಧಾರಾವಾಹಿ ಗಳಿಂದ ಬ್ಯಾ’ನ್ ಮಾಡಲಾಗುವುದು ಎನ್ನುವ ಮಾತು ಕೇಳಿ ಬರುತ್ತಿದೆ.

ಇನ್ನು ಚಂದನ್ ಕುಮಾರ್ ಧಾರಾವಾಹಿಯಲ್ಲಿ ನಟನೆಯ ಮೇಲೆ ಕೆಲವೊಂದು ಕಿರಿಕ್ ಅನ್ನು ಕನ್ನಡದಲ್ಲಿ ಮಾಡಿಕೊಂಡಿದ್ದಾರೆ ಅಲ್ಲದೆ ಈ ಹಿಂದೆ ಪತ್ನಿ ಕವಿತಾ ಗೌಡ ಜೊತೆ ಶಿವಗಂಗೆ ಬೆಟ್ಟದ ಮೇಲೆ ಚಪ್ಪಲಿ ಹಾಕಿಕೊಂಡು ಫೋಟೋಶೂಟ್ ಮಾಡಿ ವಿವಾದಕ್ಕೆ ಗುರಿಯಾಗಿದ್ದರು. ಹುಟ್ಟಿನಲ್ಲಿ ಚಂದನ್ ಅವರ ಸ್ವಭಾವವೂ ಕೂಡ ಇಂತಹ ಕೆಲವು ಘಟನೆಗಳಿಗೆ ಸಾಕ್ಷಿಯಾಗುತ್ತಿದೆ ಎನ್ನುವುದು ಕೆಲವರ ಅಂಬೋಣ.

Leave A Reply

Your email address will not be published.