ನಿಜಕ್ಕೂ ಅಣಬೆ ತಿನ್ನುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತಾ? ಅಸಲಿಗೆ ಅಣಬೆ ತಿಂದರೆ ಏನಾಗುತ್ತದೆ ಗೊತ್ತೇ?

ಮಳೆಗಾಲದಲ್ಲಿ ಮಾತ್ರ ತಾಜಾ ಆಗಿ ಸಿಗುವ ಅಣಬೆ ಅಥವಾ ಮಶ್ರೂಮ್ ತಿನ್ನೋದಕ್ಕೂ ರುಚಿ ಹಾಗೆನೇ ಆರೋಗ್ಯಕ್ಕೂ ಕೂಡ ಒಳ್ಳೆಯದು. ಅಣಬೆಯಲ್ಲಿ ಫೈಬರ್ ಪೊಟ್ಯಾಶಿಯಂ ಪ್ರೊಟೀನ್ ವಿಟಮಿನ್ ಡಿ ಮೊದಲ ಪೋಷಕಾಂಶಗಳು ಸಮೃದ್ಧವಾಗಿವೆ ಹಾಗಾಗಿ ಇದು ಹಲವಾರು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. ಇಂದು ಹೋಟೆಲ್ ಗಳಲ್ಲಿಯೂ ನೀವು ಹಲವಾರು ಪಾಕವಿಧಾನಗಳಲ್ಲಿ ಅಣಬೆಯನ್ನು ಬಳಸುವುದನ್ನ ನೋಡಿರಬಹುದು ಇದು ಬಹಳ ರುಚಿಕರವು ಹೌದು.

ಅಣಬೆ ಅಥವಾ ಮಶ್ರೂಮ್ ನಲ್ಲಿ ಕ್ಯಾಲೋರಿ ಕಡಿಮೆ ಆಗಿರುತ್ತೆ. ಹಾಗಾಗಿ ಇದು ತೂಕನಷ್ಟಕ್ಕೆ ಬಹಳ ಉಪಯೋಗಕಾರಿ. ಹೆಚ್ಚಾಗಿ ಮಳೆಗಾಲದಲ್ಲಿ ಸಿಗುವ ಅಣಬೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತದೆ. ಬೆಳಗ್ಗೆ ನೋಡಿದರೆ ತಾಜಾ ಹಾಗೂ ಮೊಗ್ಗಾಗಿರುವ ಆಣಬೆಗಳು ಸಿಗುತ್ತವೆ. ಇದಕ್ಕಿಂತಲೂ ತಾಜಾ ಮಶ್ರೂಮ್ ಬಳಸುವುದು ಹೆಚ್ಚು ಆರೋಗ್ಯಕರ. ಇನ್ನು ಮಶ್ರೂಮ್ ನಿಂದ ಉಂಟಾಗುವ ಪ್ರಯೋಜನಗಳ ಬಗ್ಗೆ ನೋಡುವುದಾದರೆ,

ಮೊದಲನೆಯದಾಗಿ ಮಶ್ರೂಮ್ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಅಣಬೆಯಲ್ಲಿದೆ ಆಕ್ಸಿಡೆಂಟ್ ಗಳು ಮತ್ತು ಫೈಟೋ ಕೆಮಿಕಲ್ ಗಳು ಆಂಟಿ ಫಂಗಲ್ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುತ್ತವೆ ಶಿಲೀಂದ್ರಗಳ ಸೋಂಕುಗಳನ್ನು ಸಹ ಮಶ್ರೂಮ್ ಸೇವನೆಯಿಂದ ಗುಣಪಡಿಸಿಕೊಳ್ಳಬಹುದು.

ಇನ್ನು ಹೃದ್ರೋಗಕ್ಕೂ ಅಣಬೆಯನ್ನು ಬಳಸುವುದು ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳಿಂದಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಮಾಡುತ್ತದೆ ಹಾಗಾಗಿ ಹೃದಯಘಾತದಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಲ್ಲದು. ಜೊತೆಗೆ ಅಣಬೆ ಸೇವನೆ ಮಾಡಿದಾಗ ಹೊಟ್ಟೆಯ ಕೆಲವು ಸಮಸ್ಯೆಗಳಾದ ಮಲಬದ್ಧತೆ ಅಜೀರ್ಣ ಮೊದಲಾದ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.

ಅಷ್ಟೇ ಅಲ್ಲ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುವುದಕ್ಕೂ ಕೂಡ ಮಶ್ರೂಮ್ ಗಳನ್ನ ಬಳಸುವುದು ಅತ್ಯಂತ ಪ್ರಯೋಜನಕಾರಿ ಇದರಲ್ಲಿ ಪಾಲಿಕ್ ಆಸಿಡ್ ಹಾಗೂ ಕಬ್ಬಿನಾಂಶ ಇದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಕೂಡ ಬಲಪಡಿಸುತ್ತದೆ. ದೇಹದಲ್ಲಿ ರಕ್ತದ ಕೊರತೆ ಇದ್ದರೆ ಅದನ್ನ ಸರಿದೂಗಿಸುವ ಶಕ್ತಿ ಮಶ್ರೂಮ್ ನಲ್ಲಿದೆ.

ಇನ್ನು ಅಣಬೆ ಅಥವಾ ಮಶ್ರೂಮ್ ತ್ವಚೆಯ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಮಶ್ರೂಮ್ ಸೇವನೆ ಮಾಡುವುದರಿಂದ ಚರ್ಮವು ಹೊಳೆಯುತ್ತದೆ ಅಣಬೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ಮೈಕ್ರೋಕೋಬಿಯಲ್ ಗುಣಗಳು ಇದ್ದು ಇವು ತ್ವಚೆಯ ಮೇಲೆ ಹೇಳುವ ಮೊಡವೆಗಳಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಾಗಾದ್ರೆ ಇನ್ಯಾಕೆ ತಡ, ಇಷ್ಟೆಲ್ಲಾ ಪ್ರಯೋಜನಗಳಿರುವ ಮಶ್ರೂಮ್ ಅನ್ನು ತಪ್ಪದೇ ಆಗಾಗ ಸೇವಿಸಿದರೆ ಆರೋಗ್ಯದ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು.

Leave A Reply

Your email address will not be published.