ಅಪ್ಪಿ ತಪ್ಪಿಯೂ ಕೂಡ ಕೈಮುಗಿದು ಬೇಡಿದರೂ ಈ ರಾಶಿಯವರಿಗೆ ಸಾಲ ಕೊಡಬೇಡಿ, ವಾಪಸ್ ಬರಲ್ಲ. ಯಾವ ರಾಶಿಯವರಿಗೆ ನೋಡಿ!

ಕೆಲವರಿಗೆ ಸಂಕಷ್ಟದಲ್ಲಿ ಸಹಾಯ ಅಂತ ಹಣವನ್ನು ಕೊಟ್ಟಿರುತ್ತೇವೆ ಆದರೆ ಅವರಿಗೆ ಯಾವಾಗ ಹಣವನ್ನು ವಾಪಸ್ ಕೊಡಲು ಸಾಧ್ಯವಾಗುತ್ತೋ ಆಗಲು ಕೂಡ ಹಿಂದುರಿಗಿಸುವುದೇ ಇಲ್ಲ ಹಾಗಾಗಿ ಸಾಲ ನೀಡುವಾಗ ಬಹಳ ಯೋಚನೆ ಮಾಡಿ ನೀಡಬೇಕು ಎಲ್ಲರಿಗೂ ಸಾಲ ಕೊಟ್ಟ ಕೂಡಲೇ ಅವರು ಹಿಂತುರುಗಿ ಕೊಡುತ್ತಾರೆ ಎನ್ನುವ ಭರವಸೆಯೂ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ರಾಶಿಯವರಿಗೆ ಸಾಲ ನೀಡುವುದಕ್ಕಿಂತ ಮೊದಲು ಸಾಕಷ್ಟು ಬಾರಿ ಯೋಚನೆ ಮಾಡಬೇಕು ಎಂದು ಹೇಳಲಾಗುತ್ತದೆ. ಅಂತಹ ರಾಶಿ ಯಾವುದು ಗೊತ್ತಾ ಬನ್ನಿ ನೋಡೋಣ.

ಸಾಲ ನೀಡುವುದು ತಪ್ಪಲ್ಲ ಆದರೆ ಅದು ಎಂತವರಿಗೆ ನೀಡಬೇಕು ಅಂತ ಯೋಚನೆ ಮಾಡಬೇಕು. ಯಾಕೆಂದರೆ ಕೆಲವು ರಾಶಿಯವರಿಗೆ ಕೊಟ್ಟ ಹಣವನ್ನು ಹಿಂತುರುಗಿ ಕೊಟ್ಟು ಅಭ್ಯಾಸವೇ ಇರುವುದಿಲ್ಲ ಅವರಿಗೆ ಕೇವಲ ಹಣವನ್ನು ಪಡೆದುಕೊಳ್ಳುವುದು ಮಾತ್ರ ಗೊತ್ತು. ನಮ್ಮ ಸ್ನೇಹಿತರಿಗೆ ಸಂಬಂಧಿಗಳಿಗೆ ಅಥವಾ ನೆರೆಹೊರೆಯವರಿಗೆ ಬಹಳ ಕಷ್ಟವಿದ್ದಾಗ ಅಗತ್ಯವಿದ್ದಾಗ ನಾವು ಹಣವನ್ನು ಕೊಡಬೇಕಾಗುತ್ತದೆ. ಆದರೆ ಅವರು ಕೂಡ ಸರಿಯಾದ ಸಂದರ್ಭ ದಲ್ಲಿ ಅದನ್ನು ಹಿಂತುರುಗಿ ಕೊಡಬೇಕು. ದುರದೃಷ್ಟವಶಾತ್ ಇಂಥ ಅಭ್ಯಾಸ ಹಲವರಿಗೆ ಇರುವುದೇ ಇಲ್ಲ. ಹಾಗಾಗಿ ನಾವು ಹೇಳುವ ಈ ಕೆಲವು ರಾಶಿಯವರಿಗೆ ನೀವು ಹಣವನ್ನು ಕೊಡುವಾಗ ಒಂದಲ್ಲ ಎರಡಲ್ಲ ನೂರು ಬಾರಿ ಯೋಚನೆ ಮಾಡಿ ನಂತರ ಸಹಾಯ ಮಾಡಿ.

ಮೊದಲನೆಯದಾಗಿ ಮಕರ ರಾಶಿ. ಮಕರ ರಾಶಿಯವರಿಗೆ ಹಣದ ಬೆಲೆಯೇ ಗೊತ್ತಿಲ್ಲ. ಕೆಲವೊಮ್ಮೆ ನೀರಿನಂತೆ ಹಣವನ್ನು ಖರ್ಚು ಮಾಡುತ್ತಾರೆ. ಯಾವುದೇ ಮುಂಜಾಗ್ರತೆಯನ್ನು ವಹಿಸದೆ ಕೈಯಲ್ಲಿರುವ ಹಣವನ್ನು ಖರ್ಚು ಮಾಡುವ ಸ್ವಭಾವದವರಿಗೆ ನೀವು ಹಣ ನೀಡಿದರೆ ಮತ್ತೆ ಅದು ಹಿಂತಿರುಗಿ ಪಡೆಯುವ ಬಗ್ಗೆ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ ಅಥವಾ ಮತ್ತೆ ಮತ್ತೆ ಅವರನ್ನ ಕೇಳಬೇಕಾಗುತ್ತದೆ. ಹಾಗಾಗಿ ಈ ರಾಶಿಯವರಿಗೆ ಹಣ ಕೊಡುವ ಮೊದಲು ಒಮ್ಮೆ ಯೋಚಿಸಿ.

ಇನ್ನು ಸಿಂಹ ರಾಶಿ ಇವರು ತಾವು ಸಾಲ ತೆಗೆದುಕೊಳ್ಳುವುದು ಮಾತ್ರವಲ್ಲ ಇತರರಿಗೆ ಸಾಲ ಕೊಡಿಸುವುದರಲ್ಲಿ ಮುಂದಾಳತ್ವ ವಹಿಸುತ್ತಾರೆ. ಇವರು ಸ್ನೇಹಿತರಿಂದ ಮಾತ್ರವಲ್ಲದೆ ತಮ್ಮ ಪ್ರೇಮಿಗಳಿಂದಲೂ ಸಾಲವನ್ನು ಪಡೆಯುತ್ತಾರೆ. ಈ ರಾಶಿಯವರು ಸರಿಯಾದ ಸಮಯಕ್ಕೆ ಹಣವನ್ನು ಹಿಂತುರುಗಿಸುವ ಅಭ್ಯಾಸವನ್ನು ಇಟ್ಟುಕೊಂಡಿಲ್ಲ. ಹಾಗಾಗಿ ಇವರಿಗೂ ಹಣವನ್ನು ನೀಡುವಾಗ ಸ್ವಲ್ಪ ವಿಚಾರ ಮಾಡುವುದು ಒಳಿತು.

ಇನ್ನು ಧನು ರಾಶಿ ಅವರ ಬಗ್ಗೆ ಹೇಳುವುದಾದರೆ. ಇವರು ಗುಣದಲ್ಲಿ ಬಹಳ ಒಳ್ಳೆಯವರು ಆದರೆ ಇವರಿಗೆ ಮರೆವಿನ ಸಮಸ್ಯೆ ಇದೆ. ಹಾಗಾಗಿ ಸಾಲ ತೆಗೆದುಕೊಂಡು ಸಾಲವನ್ನು ತೀರಿಸುವುದನ್ನ ಮರೆತುಬಿಡುತ್ತಾರೆ. ಧನು ರಾಶಿಯವರಿಗೆ ಸಾಲ ನೀಡಿದರೆ ಮತ್ತೆ ಮತ್ತೆ ನೀವು ಅದನ್ನ ಹಿಂತಿರುಗಿಸುವಂತೆ ಅವರಿಗೆ ನೆನಪು ಮಾಡಬೇಕು ಇಲ್ಲವಾದರೆ ನೀವು ಕೊಟ್ಟಿರುವ ಹಣ ವಾಪಸ್ ಬರುವ ನಿರೀಕ್ಷೆ ಬೇಡ! ಈ ಮೂರು ರಾಶಿಯವರಿಗೆ ಹಣ ಸಾಲ ನೀಡುವುದಕ್ಕೂ ಮೊದಲು ಮುಂಜಾಗ್ರತೆಯನ್ನು ಮಹಿಸುವುದು ಒಳಿತು!

Leave A Reply

Your email address will not be published.