ಮನೆಯಲ್ಲಿಯೇ ನಿಮಗಿರುವ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಇದೊಂದು ವೀಳ್ಯದೆಲೆ ಮನೆಮದ್ದು ಸಾಕು!

ಇಂದು ಸರಿಯಾಗಿ ಊಟ ತಿಂಡಿಯನ್ನು ಸರಿಯಾದ ಸಮಯಕ್ಕೆ ಮಾಡುವುದಕ್ಕೂ ನಮಗ್ಯಾರಿಗೂ ಪುರುಸೊತ್ತೇ ಇಲ್ಲ. ಹಾಗಾಗಿ ಇನ್ನಿಲ್ಲದಷ್ಟು ಅನಾರೋಗ್ಯ ಸಮಸ್ಯೆಗಳೂ ಕಾಡುತ್ತವೆ. ಅವುಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಮುಖ್ಯವಾದದ್ದು. ಇಂದು ಈ ಸಮಸ್ಯೆ ಯಾರಿಗೂ ಇಲ್ಲ ಎನ್ನುವುದೇ ಇಲ್ಲ. ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಗಳು, ಆಹಾರ ಕ್ರಮಗಳು ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಖ್ಯ ಕಾರಣ.

ಅಷ್ಟೇ ಅಲ್ಲ, ಇಂದು ಕೆಲಸವೂ ಹೆಚ್ಚಾಗಿ ಒತ್ತಡವೂ ಅಧಿಕವಾಗುತ್ತಿದೆ. ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆಯೂ ಹೆಚ್ಚಾಗಿದೆ. ಎದೆಯುರಿ, ಹೊಟ್ಟೆ ಉರಿ, ಹುಳಿತೇಗು, ತಲೆನೋವು ಮೊದಲಾದ ಸಮಸ್ಯೆ ಮೊದಲಾದವು ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳು. ಗ್ಯಾಸ್ಟ್ರಿಕ್ ಆರಂಭವಾಯ್ತು ಅಂದ್ರೆ ದಿನವೂ ಕಿರಿಕಿರಿ ಅನ್ನಿಸುತ್ತೆ. ಸರಿಯಾಗಿ ಕೆಲಸ ಮಾಡುವುದಕ್ಕೂ ಆಗುವುದಿಲ್ಲ. ದೈನಂದಿನ ಚಟುವಟಿಕೆಗಳು ಸುಲಭವಾಗುವುದಿಲ್ಲ. ಸರಿಯಾಗಿ ಆಹಾರ ಸೇವಿಸುವುದಕ್ಕೂ ಆಗುವುದಿಲ್ಲ. ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾದರೆ ಸಾಮಾನ್ಯವಾಗಿ ವೈದ್ಯರ ಬಳಿ ಹೋಗಿ ಒಂದಿಷ್ಟು ಮಾತ್ರೆಯನ್ನು ತಂದು ನುಂಗುವವರೇ ಹೆಚ್ಚು. ಆದರೆ ಇದು ಶಾಶ್ವತ ಪರಿಹಾರವನ್ನಂತೂ ನೀಡುವುದಿಲ್ಲ.          

ಇಂಥ ಮಾತ್ರೆಗಳನ್ನೆಲ್ಲಾ ನುಂಗುವ ಬದಲು, ಸುಲಭವಾದ ಯಾವುದೇ ಅಡ್ಡ ಪರಿಣಾಮಗಳೂ ಇಲ್ಲದ ಮನೆಮದ್ದುಗಳನ್ನು ಮಾಡಿಕೊಂಡು ನಿಯಮಿತವಾಗಿ ಸೇವಿಸುತ್ತಾ ಬಂದರೆ ಖಂಡಿತವಾಗಿಯೂ ಗ್ಯಾಸ್ಟಿಕ್ ಸಮಸ್ಯೆ ಉಪಶಮನವಾಗುತ್ತದೆ. ಹಾಗಾದರೆ ಅಂತಹ ಮನೆಮದ್ದು ಯಾವುದು ನೋಡೋಣ ಬನ್ನಿ.

ಈ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದೇ ಇರುತ್ತದೆ. ಹಾಗೂ ಮನೆಯಲ್ಲಿಲ್ಲದೇ ಇದ್ದರೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಅದರಲ್ಲೂ ಹಳ್ಳಿಗಳಲ್ಲಂತೂ ಮನೆಯಲ್ಲಿಯೇ ಈ ವಸ್ತುವನ್ನು ಬೆಳೆಯುತ್ತಾರೆ. ಅದುವೇ ವೀಳ್ಯದೆಲೆ. ತಾಂಬೂಲವನ್ನು ದಿನವೂ ಹಾಕಿಕೊಳ್ಳುವ/ ಎಲೆ ಅಡಿಕೆಯನ್ನು ದಿನವೂ ತಿನ್ನುವ ಅಭ್ಯಾಸ ಹಲವರಿಗಿರುತ್ತದೆ. ಅಂತವರು ವೀಳ್ಯದೆಲೆಯನ್ನು ಮನೆಯಲ್ಲಿಟ್ಟುಕೊಳ್ಳುತ್ತಾರೆ.

ಇನ್ನು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಲು ಮಾಡಬೇಕಾದ ಮನೆಮದ್ದುಗೆ ಬೇಕಾಗುವ ವಸ್ತುಗಳು ವೀಳ್ಯದೆಲೆ, ಲವಂಗ ಹಾಗೂ ಅಜ್ವೈನ ಅಥವಾ ಓಂಕಾಳು.   ಈ ಮೂರು ವಸ್ತುಗಳು ಆದರದ್ಡೇ ಆದ ಆರೋಗ್ಯ ಗುಣಗಳನ್ನು ಹೊಂದಿವೆ. ಔಷಧಿಯ ತಯಾರಿಕೆಗಳಲ್ಲಿಯೂ ಬಳಸಲಾಗುವ ಈ ವಸ್ತುಗಳು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಇವುಗಳ ಸೇವನೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಬಲ್ಲದು.

ಒಂದು ವೀಳ್ಯದೆಲೆ, ಒಂದೆರಡು ಲವಂಗ, ಅರ್ಧ ಚಮಚ ಅಜ್ವೈನ ಅಥವಾ ಓಂ ಕಾಳನ್ನು ತೆಗೆದುಕೊಂಡು ಒಟ್ಟಿಗೆ ಬಾಯಲ್ಲಿಟ್ಟುಕೊಂಡು ಅದರ ರಸವನ್ನು ನುಂಗಿ! ವಿಳ್ಯದೆಲೆ ಹಾಗೂ ಲವಂಗ ಎರಡೂ ಒಗರು,ಕಡು ಟೇನಸ್ಟ್ ನೀಡಬಹುದು! ಹಾಗಾಗಿ ಇದನ್ನು ಜಗೆದು ನುಂಗುವುದಕ್ಕಿಂತ ಹಾಗೆಯೇ ಬಾಯಲ್ಲಿಟ್ಟುಕೊಂಡು ಅದರ ರಸವನ್ನು ನುಂಗುತ್ತಾ ಇರಿ. ಈ ರೀತಿ ನಿಯಮಿತವಾಗಿ ಮಾಡುವುದರಿಂದ ನೀವು ಸುಲಭವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಉಳಿಯಬಹುದು. ಇನ್ನು ಇದರಲ್ಲಿ ಯಾವುದೇ ಅಡ್ಡ ಪರಿಣಾಮವೂ ಇಲ್ಲದ ಕಾರಣ, ಸುಲಭವಾಗಿ ಈ ಮನೆಮದ್ದನ್ನು ಮಾಡಿಕೊಂಡು ಸೇವಿಸಬಹುದು!

Leave A Reply

Your email address will not be published.