ಇನ್ನು ಮುಂದೆ ನಿಮಗೆ ಚಾನ್ಸ್ ಸಿಗುವುದಿಲ್ಲ ಎಂದರೆ ಭರ್ಜರಿ ಟಾಂಗ್ ನೀಡಿದ ಪವಿತ್ರ; ಕೊಟ್ಟ ಶಾಕ್ ಏನು ಗೊತ್ತೇ?? ತೆಗೆದುಕೊಂಡ ನಿರ್ಧಾರವೇನು ಗೊತ್ತೇ??

ಕನ್ನಡದ ಹಿರಿಯ ನಟಿ ಪವಿತ್ರ ಲೋಕೇಶ ಹಾಗೂ ತೆಲುಗು ಚಿತ್ರರಂಗದಲ್ಲಿ ತುಂಬಾ ಹೆಸರು ಮಾಡಿರುವ ನರೇಶ ಬಾಬು ಅವರ ನಡುವಿನ ಸಂಬಂಧದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ವಾದ ವಿವಾದಗಳು ನಡೆದು ಹೋಗಿವೆ. ಸದ್ಯ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ತುಸು ಬ್ರೇಕ್ ಬಿದ್ದಂತೆ ಕಾಣಿಸುತ್ತಿದೆ. ನಟಿ ಪವಿತ್ರ ಲೋಕೇಶ ತನ್ನ ಜೀವನದಲ್ಲಿ ಹುಳಿ ಹಿಂಡುತ್ತಿದ್ದಾರೆ ಅಂತ ನರೇಶ್ ಬಾಬು ಅವರ ಮೂರನೆಯ ಪತ್ನಿ ರಮ್ಯಾ ಆರೋಪ ಮಾಡಿದ್ದರು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪವಿತ್ರ ಲೋಕೇಶ್ ಹಾಗೂ ನರೇಶ್ ಬಾಬು ತಮ್ಮ ಆವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ವಹಿಸುತ್ತಿದ್ದಾರೆ.

ಇತ್ತೀಚಿಗೆ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ ಅವರು ಸಹೋದರ ಸಹೋದರಿ ಪಾತ್ರವನ್ನು ತೆಲುಗು ಸಿನಿಮಾ ಒಂದರಲ್ಲಿ ನಿಭಾಯಿಸಿದ್ದರು ಅದುವೇ ರವಿತೇಜ ಅಭಿನಯದ, ಶರತ್ ಮಾಂಡವ ಅವರ ನಿರ್ದೇಶನದ ರಾಮ್ ರಾವ್ ಆನ್ ಡ್ಯುಟಿ ಎನ್ನುವ ಚಿತ್ರ. ಆದರೆ ಈ ಸಿನಿಮಾದಲ್ಲಿ ಇವರಿಬ್ಬರ ಜೋಡಿಯನ್ನು ನೋಡಿ ಜನ ಬಿದ್ದು ಬಿದ್ದು ನಕ್ಕಿದ್ರು.

ನಿಜ ಜೀವನದಲ್ಲಿ ಗಂಡ ಹೆಂಡತಿ ಹಾಗೆ ಜೀವನ ನಡೆಸುತ್ತಿರುವ ಪವಿತ್ರ ಲೋಕೇಶ್ ಹಾಗೂ ನರೇಶ್ ಈಗ ಸಿನಿಮಾದಲ್ಲಿ ಸಹೋದರ ಸಹೋದರಿ ಪಾತ್ರವನ್ನು ನಿಭಾಯಿಸಿದ್ದು ಜನಕ್ಕೆ ಕಾಮಿಡಿ ಎನಿಸಿದೆ. ಇನ್ನು ಈ ಮಧ್ಯೆ ಪವಿತ್ರ ಲೋಕೇಶ್ ಅವರ ಪ್ರೇಮ ಪ್ರಕರಣದಿಂದಾಗಿ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿತ್ತು.

ಇವರಿಗೆ ಸಾಕಷ್ಟು ಸ್ಟಾರ್ ನಟರ ತಾಯಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ನಟಿ ಪವಿತ್ರ ಲೋಕೇಶ್ ಅವರಿಗೆ ಕನ್ನಡದಲ್ಲಿ ಚಿತ್ರರಂಗದಲ್ಲಿಯೂ ಬಹಳ ಉತ್ತಮ ಹೆಸರಿತ್ತು. ಅದೇ ಪೋಷಕ ನಟಿಯಾಗಿ ಇಂದಿಗೂ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದರು ಪವಿತ್ರ ಲೋಕೇಶ್. ಇವರಿಗೆ ಸಾಕಷ್ಟು ಉತ್ತಮ ಪಾತ್ರಗಳನ್ನು ನಿಭಾಯಿಸಿದ ಪವಿತ್ರ ಲೋಕೇಶ್ ಅವರಿಗೆ ಈಗ ಅಂತಹ ಪಾತ್ರಗಳು ಸಿಗುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ಇದು ಕೇವಲ ಜನರ ಊಹೆ ಅಂತ ಸಾಬೀತುಪಡಿಸುವುದಕ್ಕೆ ಹೊರಟಿದ್ದಾರೆ ನಟಿ ಪವಿತ್ರ ಲೋಕೇಶ್. ಹೇಗೆ ಅಂತೀರಾ!

ಪವಿತ್ರ ಲೋಕೇಶ್ ಈದಿಕ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಇನ್ನು ಇವರಿಗೆ ಉತ್ತಮ ಸಂಭಾವನೆ ಸಿಗುವುದಕ್ಕೆ ನಟ ನರೇಶ ಕೂಡ ಸಹಾಯ ಮಾಡುತ್ತಿದ್ದಾರಂತೆ ಟಾಲಿವುಡ್ ನಲ್ಲಿ ದಿನವೊಂದಕ್ಕೆ ನಟಿಸುವುದಕ್ಕೆ 60 ಸಾವಿರ ಸಂಭಾವನೆ ಪಡೆಯುತ್ತಿದ್ದರೂ ಪವಿತ್ರ ಲೋಕೇಶ್. ಇದೀಗ ಅದು ಒಂದು ಲಕ್ಷಕ್ಕೆ ಏರಿಸಿಕೊಂಡಿದ್ದಾರೆ ಅಂತ ಮಾತುಗಳು ಕೇಳಿ ಬರ್ತಾ ಇದೆ. ಹೌದು ನಟಿ ಪವಿತ್ರ ಲೋಕೇಶ್ ಒಂದು ಸಿನಿಮಾದಲ್ಲಿ ನಟಿಸುವುದಕ್ಕೆ ದಿನಕ್ಕೆ ಒಂದು ಲಕ್ಷ ಚಾರ್ಜ್ ಮಾಡುತ್ತಾರೆ. ಟಾಲಿವುಡ್ ನಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಬದಲಿಗೆ ಅವರು ಉತ್ತಮ ನಟಿ ಅನ್ನೋದು ಮಾತ್ರ ಎಲ್ಲರ ಗಮನದಲ್ಲಿದೆ ಅಂತ ಅವರ ಹೆಚ್ಚಿದ ಸಂಭಾವನೆಯನ್ನು ನೋಡಿ ಊಹಿಸಬಹುದು.

Leave A Reply

Your email address will not be published.