ತೆಲಗು ಸಿರೀಯಲ್ ಸೆಟ್ ನಲ್ಲಿ ನಡೆದ ಘಟನೆ ಬಗ್ಗೆ ಬೊಗಳೆ ಬಿಟ್ರಾ ಚಂದನ್; ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಈ ಪ್ರಶ್ನೆಗಳಿಗೆ ಚಂದನ್ ಅವರ ಉತ್ತರವೇನು!

ನಟ ಚಂದನ್ ಕುಮಾರ್ ಹಾಗೂ ತೆಲಗು ಧಾರಾವಾಹಿ ತಂತ್ರಜ್ಞರ ನಡುವೆ ನಡೆದ ಗುದ್ದಾಟ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಪತ್ರಿಕಾಗೋಷ್ಠಿಯನ್ನೂ ಕೂಡ ನಡೆಸಿ ಅಲ್ಲಿ ನಡೆದ ಘಟನೆ ಬಗ್ಗೆ ಚಂದನ್ ಕುಮಾರ್ ವಿವರಣೆ ನೀಡಿದ್ದಾರೆ. ಇನ್ನು ಅವರ ಬೆಂಬಲಕ್ಕೆ ಮುದ್ದುಲಕ್ಷ್ಮಿ ಧಾರಾವಾಹಿಯ ನಿರ್ಮಾಪಕ ಹರೀಶ್, ಕನ್ನಡ ಪರ  ಸಂಘ, ಹಾಗೂ ಅವರ ಪತ್ನಿ ಕವಿತಾ ಗೌಡ ಬೆಂಬಲಕ್ಕೆ ನಿಂತಿದ್ದರು.

ಇನ್ನು ನಟ ಚಂದನ್ ಕುಮಾರ್ ಈ ರೀತಿ ಕಿರಿಕ್ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ, ಅಥವಾ ತೆಲಗು ಇಂಡಸ್ಟ್ರಿಯಲ್ಲಿಯೂ ಮೊದಲ್ಲ, ಅಲ್ಲಿಯೂ ಕನ್ನಡದಲ್ಲಿಯೂ ನಟನೆಯ ಸಂದರ್ಭದಲ್ಲಿ ಒಂದಿಲ್ಲೊಂದು ಕಿರಿಕ್ ಮಾಡಿಕೊಂಡು ಶೂಟಿಂಗ್ ಅರ್ಧದಲ್ಲಿಯೇ ಬಿಟ್ಟು ಹೋದ ಪ್ರಕರಣಗಳು ಸಾಕಷ್ಟುವೆ. ಇಂದು ಹೈದ್ರಾಬಾದ್ ನಲ್ಲಿ ಆದ ಗಲಾಟೆ, ಕನ್ನಡಿಗನೊಬ್ಬನಿಗೆ ಆದ ಅಮವಾನ ಎಂದು ತನ್ನ ವಯಕ್ತಿಕ ವಿಚಾರವನ್ನು ಕನ್ನಡಿಗರ ತಲೆಗೆ ಕಟ್ಟುತ್ತಿರುವ ಚಂದನ್ ಕುಮಾರ್ ಅವರ ಬಳಿ ಸಾಕಶ್ಃಟು ಪ್ರಶ್ನೆಗಳನ್ನು ಕೇಳಿ ಒಬ್ಬ ವ್ಯಕ್ತಿ ವಾಟ್ಸಪ್ ನಲ್ಲಿ ಪ್ರಶ್ನೆಗಳನ್ನ ಹರಿಬಿಟ್ಟಿದ್ದಾನೆ. ಇದೀಗ ಸಿಕ್ಕಾಪಟ್ತೆ ವೈರಲ್ ಆಗುತ್ತಿದೆ. ಆದರೆ ಹೀಗೆ ಚಂದನ್ ಅವರ ಬುಡ ಅಲ್ಲಾಡಿಸುವ ಪ್ರಶ್ನೆಗಳನ್ನ ಕೇಳಿರುವ ವ್ಯಕ್ತಿ ಯಾರು ಎನ್ನುವ ವಿಷಯ ಮಾತ್ರ ಬಹಿರಂಗವಾಗಿಲ್ಲ. ಆದರೆ ಆ ಪ್ರಶ್ನೆಗಳು ಮಾತ್ರ ಇಂಟರೆಸ್ಟಿಂಗ್ ಆಗಿವೆ.

ಚಂದನ್ ಕುಮಾರ್ ಗೆ ವಾಟ್ಸಾಪ್ ನಲ್ಲಿ ಕೇಳಲಾದ ಪ್ರಶ್ನೆಗಳೇನು!

ಅಲ್ಲಿ ಆಗಿರುವ ಕಪಾಳ ಮೋಕ್ಷವನ್ನು ಅಮ್ಮನ ಹೆಸರು ಹೇಳಿ ಹ್ಯಾಂಡಲ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ಅಮ್ಮ ಆರೋಗ್ಯವಾಗಿ ಮನೆಗೆ ಬಂದ ಮೇಲೋ ಈ ಹೈಡ್ರಾಮಾ ಯಾಕೆ? ನಿಮ್ಮ ವಯಕ್ತಿಕ ಜಗಳವನ್ನು ಕನ್ನಡಿಗರ ತಲೆಗೆ ಕಟ್ಟುತ್ತಿರುವುದೇಕೇ? ಇದೇನು ಮೊದಲ ಬಾರಿಗೆ ನೀವು ಕಿರಿಕ್ ಮಾಡಿಕೊಳ್ಳುತ್ತಿರುವುದಲ್ಲ. ಕಲರ್ಸ್ ಕನ್ನಡ ನಿಮ್ಮನ್ನ ಶಾಶ್ವತವಾಗಿ ಬ್ಯಾನ್ ಮಾಡಿದ್ದು ನಿಮ್ಮ ಸ್ವಭಾವದಿಂದಲೇ ಅಲ್ಲವೇ?

ಲಕ್ಷ್ಮೀ ಬಾರಮ್ಮ ಧಾರವಾಹಿಯ ಸೆಟ್ನಲ್ಲಿ ನಿಮ್ಮ ಕಾಟವನ್ನು ತಡೆಯಲಾಗದೆ ಕೊನೆಗೆ ನಿರ್ಮಾಪಕ ಮಿಲನ ಪ್ರಕಾಶ್ ಅವರು ನಿಮ್ಮನ್ನ ಕತ್ತು ಹಿಡಿದು ದಬ್ಬವಿಲ್ಲವೇ? ಕನ್ನಡ ನಿರ್ಮಾಪಕರೆಲ್ಲರೂ ನಿಮ್ಮ ಮೇಲೆ ಹಲ್ಲೆಯಾಗಿದ್ದು ಸರಿಯಾಗಿದೆ ನಾವು ಮಾಡಿದ ಮಾಡಬೇಕಿದ್ದ ಕೆಲಸವನ್ನು ತೆಲುಗು ಧಾರಾವಾಹಿ ದೊಡ್ಡ ಮಾಡಿದೆ ಅಂತ ಸಮಾಧಾನ ಪಟ್ಟುಕೊಂಡಿದ್ದು ಸುಳ್ಳೇ? ಯಾಕಂದ್ರೆ ನೀವು ಕನ್ನಡ ನಿರ್ಮಾಪಕರಿಗೆ ಅಷ್ಟು ತಲೆ ನೋವಾಗಿದ್ರಿ. ಸರಿಯಾದ ಟಿ ಆರ್ ಪಿ ಬಂದರೆ ಮಾತ್ರ ಧಾರಾವಾಹಿ ಮುಂದುವರಿಯೋದು ಆದರೆ ನೀವು ನಿಮಗೆ ಬೇಕಾದ ಸಂದರ್ಭದಲ್ಲಿ ಶೂಟಿಂಗ್ ನಲ್ಲಿ ಇರ್ತೇನೆ ಅಂದ್ರೆ ಅದು ಧಾರಾವಾಹಿ ತಂಡಕ್ಕೆ ಲಾಸ್ ಆಗುತ್ತೆ. ಇನ್ನು ಸುವರ್ಣದಲ್ಲಿಯೂ ಕೂಡ ನೀವು ಇಂಥದ್ದೇ ಕಿರಿಕ್ ಮಾಡಿಕೊಂಡಿದ್ರಿ ಸಿನಿಮಾದಲ್ಲಿ ತಾನು ಅಭಿನಯಿಸುವುದಕ್ಕೆ ಶುರು ಮಾಡಿದ ಮೇಲೆ ಧಾರವಾಹಿಗೆ ಬರೋದೇ ಇಲ್ಲ ಅಂತ ಹೇಳಿದ್ರಿ. ಮತ್ತೆ ಹಿಂತುರುಗಿ ಬಂದಿದ್ದಾದರೂ ಹೇಗೆ?

ತೆಲುಗಿನಲ್ಲಿಯೂ ಇದು ಮೊದಲ ಬಾರಿಗೆ ಏನಲ್ಲ. ಈ ಹಿಂದೆ ತೆಲುಗು ಮಾ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸಾವಿತ್ರಮ್ಮ ಗಾರು ಅಪಾಯಿ ಧಾರಾವಾಹಿ ಎನ್ನ ನೀವು ಅರ್ಧಕ್ಕೆ ಬಿಟ್ಟಿದ್ದು ಕೂಡ ಕಿರಿಕ್ ಮಾಡಿಕೊಂಡೆ ಅಲ್ವಾ? ಆದರೆ ನಂತರ ನಾನು ಮದುವೆ ಇರುವ ಕಾರಣ ಧಾರವಾಹಿ ಬಿಟ್ಟಿದ್ದೇನೆ ಅಂತ ಸಮುಜಾಯಿಸಿ ಕೊಟ್ರಿ. ಎಲ್ಲಾ ಕಲಾವಿದರು ಹೀಗೆ ಮದುವೆ ಮಕ್ಕಳು ಅಂತ ಧಾರಾವಾಹಿ ಬಿಡ್ತಾ ಇದ್ರೆ ನಿರ್ಮಾಪಕರು ಹೊಟ್ಟೆಪಾಡಿಗೆ ಏನು ಮಾಡಬೇಕು?

ಅದು ಬಿಡಿ ನೀವು ಶೂಟಿಂಗ್ ಸೆಟ್ನಲ್ಲಿ ನಿದ್ದೆ ಮಾಡಿದ್ದು ಯಾಕೆ? ಒಂದು ಧಾರಾವಾಹಿ ಅಂದ್ರೆ ಅಲ್ಲಿ ಇಡೀ ದಿನ ಕೆಲಸ ನಡೆಯುತ್ತೆ. ಜನರೇಟರ್ ರನ್ ಆಗುತ್ತಾ ಇರುತ್ತೆ. ಸ್ವಲ್ಪ ಶೂಟಿಂಗ್ ತಡವಾದರೂ ಲೊಕೇಶನ್ ಬಾಡಿಗೆ ಡಬಲ್ ಆಗುತ್ತೆ ಅಂತದ್ರಲ್ಲಿ ನೀವು ನಿದ್ದೆ ಮಾಡಿ ಸಮಯ ಹಾಳು ಮಾಡ್ತಾ ಇದ್ರೆ ನಿರ್ಮಾಪಕರು ಏನು ಮಾಡಬೇಕು? ಟೈಂಗೆ ಸರಿಯಾಗಿ ಟೆಲಿಕಾಸ್ಟ್ ಆಗದೆ ಇದ್ರೆ ಧಾರಾವಾಹಿ ನೋಡುರು ಯಾರು? ನಿಮ್ಮ ಕಡೆಯಿಂದ ಇಷ್ಟೊಂದು ತಪ್ಪಿಟ್ಟುಕೊಂಡು ಬೇರೆಯವರ ಮುಂದೆ ಬೆರಳು ಮಾಡಿ ತೋರಿಸುವುದು ಮಾತ್ರವಲ್ಲದೆ ನಿಮ್ಮ ಜಗಳದಲ್ಲಿ ಕನ್ನಡಿಗರ ಭಾವನೆಗಳನ್ನು ಬಳಸಿಕೊಳ್ಳುತ್ತಾ ಇರೋದು ತಪ್ಪಲ್ವಾ?

ಹೀಗೆ ಚಂದನ್ ಕುಮಾರ್ ಅವರ ಚಳಿ ಬಿಡಿಸುವಂತಹ ಸಾಕಷ್ಟು ಪ್ರಶ್ನೆಗಳನ್ನ ವ್ಯಕ್ತಿ ಒಬ್ಬ ಕೇಳಿದ್ದಾನೆ. ಆದರೆ ಇದರ ಬಗ್ಗೆ ಅಧಿಕೃತವಾಗಿ ಚಂದನ್ ಕುಮಾರ್ ಆಗಲಿ ಅಥವಾ ಈ ಪ್ರಶ್ನೆಗಳನ್ನು ಕೇಳಿದವರಾಗಲಿ ಯಾವ ಮಾಹಿತಿಯನ್ನು ನೀಡಿಲ್ಲ ಆದರೆ ಸಾಕಷ್ಟು ಜನರಿಗೆ ಆತ ಕೇಳಿರುವ ಪ್ರಶ್ನೆಗಳು ಮಾತ್ರ ಹಂಡ್ರೆಡ್ ಪರ್ಸೆಂಟ್ ಸತ್ಯ ಎನಿಸಿದೆ.

Leave A Reply

Your email address will not be published.