ನಿಮ್ಮ ಮಗುವಿಗೆ ಎಷ್ಟು ವರ್ಷಗಳ ಕಾಲ ಎದೆ ಹಾಲು ನೀಡಬಹುದು ಗೊತ್ತಾ! ತಾಯಂದಿರು ತಿಳಿದುಕೊಳ್ಳಲೇಬೇಕಾದ ವಿಷಯ ಇದು!

ತಾಯ್ತನ ಎನ್ನುವ ಸುಖವನ್ನು ಅನುಭವಿಸಿದವರಿಗೆ ಗೊತ್ತು. ತಾಯಿಯಾದವಳು ಮಗುವಿನ ಮುಖ ನೋಡುತ್ತಿದ್ದಂತೆ ತನ್ನ ಎಲ್ಲಾ ನೋವನ್ನೂ ಮರೆಯುತ್ತಾಳೆ. ಇನ್ನು ತಾಯಿ ಕುಡಿಸುವ ಎದೆಹಾಲು ಮಗುವಿಗೆ ನೀಡುವ ಅತೀ ಹೆಚ್ಚಿನ ಪೋಷ್ಠಿಕಾಂಶ. ಮಗುವಿಗೆ ತಾಯಿ ಎದೆ ಹಾಲಿನಲ್ಲಿ ಸಿಗುವಷ್ಟು ಪೋಷಕಾಂಶ ಬೇರೆ ಯಾವುದೇ ಆಹಾರದಲ್ಲಿಯೂ ಸಿಗಲು ಸಾಧ್ಯವೇ ಇಲ್ಲ. ಹಾಗಾಗಿ ಮಗುವಿಗೆ ಹುಟ್ಟಿದ ಆರು ತಿಂಗಳು ಬೇರೆ ಯಾವುದೇ ಆಹಾರವನ್ನೂ ನೀಡಬಾರದು ಎಂದು ಹೇಳಲಾಗುತ್ತದೆ. 

ಇನ್ನು ಮಗುವಿಗೆ ತಾಯಿಯಾದವಳು ಎಷ್ಟು ದಿನಗಳವರೆಗೆ ಹಾಲನ್ನು ಕುಡಿಸಬೇಕು ಎನ್ನುವುದನ್ನು ಅರಿತುಕೊಳ್ಳುವುದು ಕೂಡ ಅಷ್ಟೇ ಮುಖ್ಯ! ಆರು ತಿಂಗಳ ಬಳಿಕ ಮಗುವಿಗೆ ಸೊಲಿಡ್ ಫುಡ್ ಕೊಡಬಹುದು ಎಂದು ವೈದ್ಯರು ಸೂಚಿಸುತ್ತಾರೆ. ಇನ್ನು ಮಗುವಿಗೆ ಕೆಲವರು ಎರಡು ಮೂರು ವರ್ಷಗಳವರೆಗೂ ಎದೆ ಹಾಲಿನ ಪೂರೈಕೆ ಮಾಡುತ್ತಾರೆ. ಇನ್ನು ಕೆಲವರು ಬೇಗ ಬಿಡಿಸುತ್ತಾರೆ. ಇವುಗಳಿಂದ ಯಾವೆಲ್ಲಾ ರೀತಿಯ ಪರಿಣಾಮಗಳು ಉಂಟಾಗಬಹುದು ನೋಡೋಣ!

ತಾಯಿ ಎದೆಹಾಲಿನಿಂದ ಮಗುವಿಗೆ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳೂ ಸಿಗುತ್ತದೆ. ಇದು ಬೇರೆ ಯಾವ ಆಹಾರದಿಂದಲೂ ಸಿಗಲು ಸಾಧ್ಯವೇ ಇಲ್ಲ. ಇನ್ನು ತಾಯಿ ಹಾಗೂ ಮಗುವಿನ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ಇಬ್ಬರ ನಡುವೆ ಬಾಂಡಿಂಗ್ ಬೆಸೆದುಕೊಳ್ಳಲು ಕೂಡ ತಾಯಿ ಮಗುವಿಗೆ ಹಾಲು ಕುಡಿಸುವುದು ಅತೀ ಮುಖ್ಯ.

ಇಂದು ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ಅತೀ ಸಣ್ಣ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುತ್ತಾರೆ. ಈ ಕಾರಣಕ್ಕೆ ಬೇಗ ಎದೆಹಾಲು ಕುಡಿಸುವುದನ್ನು ಕೂಡ ನಿಲ್ಲಿಸಿಬಿಡುತ್ತಾರೆ. ಹೀಗೆ ಮಾಡಿದರೆ ಮಗುವಿನ ಭವಿಷ್ಯದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಅವರ ಬೆಳವಣಿಗೆಯಲ್ಲಿ ಸಮಸ್ಯೆ ಉಂಟಾಗಬಹುದು. ಮಗುವಿಗೆ ಎ’ದೆಹಾಲು ಕುಡಿಸಿದಷ್ಟು ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಇನ್ನು ಮಗುವುಗೆ ಯಾವಾಗ ಹಾಲು ಕುಡಿಸುವುದನ್ನು ಬಿಡಿಸಬೇಕು ಎನ್ನುವುದು ಹಲವರಿಗೆ ಯೋಚನೆ. ವೈದ್ಯರ ಪ್ರಕಾರ ಎರಡು ಮೂರು ವರ್ಷಗಳವರೆಗೂ ಎದೆಹಾಲು ಕುಡಿಸುವುದು ತಪ್ಪೇನಲ್ಲ. ಆದರೆ ಅದಕ್ಕಿಂತ ತಡವಾದರೆ ಹಲ್ಲಿನ ವಸಡಿನಲ್ಲಿ ಸಮಸ್ಯೆ ಉಂಟಾಗಬಹುದು. ವೈದ್ಯರ ಸಲಹೆ ಪ್ರಕಾರ, ರಾತ್ರಿ ಮಗು ಮಲಗುವಾಗ ಹಲ್ಲನ್ನು ಸ್ವಚ್ಛ ಗೊಳಿಸಿ, ನಂತರ ನೀರನ್ನು ಕುಡಿಸಿ ಮಲುಗಿಸಬೇಕು.

ಮಗುವಿಗೆ ಹಲ್ಲು ಬಂದನಂತರ ವೈದ್ಯರು ಸೂಚಿಸಿದ ಟೂತ್ ಪೇಸ್ಟ್ ನ್ನು ಬಳಸಿ ಮೃದುವಾಗಿ ಹಲ್ಲುಜ್ಜಿ. ಇದರಿಂದ ಹಲ್ಲಿನಲ್ಲಿ ಹುಳುಕು ಕಾಣಿಸಿಕೊಳ್ಳುವುದಿಲ್ಲ. ಮಗುವಿಗೆ ಹಾಲು ಕುಡಿಸುವ ವಿಚಾರ ಬಂದಾಗ ಮುಜುಗರ ಪಟ್ತುಕೊಳ್ಳುವುದು, ಅವರಿವರು ಹೇಳಿದ್ದನ್ನು ಕೇಳಿ ಬೇಗ ಹಾಲು ಕುಡಿಸುವುದನ್ನು ನಿಲ್ಲಿಸುವುದು ಇವುಗಳನ್ನು ಮಾಡಬೇಡಿ. ನಿಮ್ಮಲ್ಲಿ ಎದೆಹಾಲು ಬರುವವರೆಗೂ ಮಗುವಿಗೆ ಹಾಲು ಉಣಿಸಬಹುದು. ಬೇರೆ ಆಹಾರದ ಜೊತೆಗೆ ಸ್ವಲ್ವವೇ ಎದೆಹಾಲನ್ನು ಕುಡಿದರೂ ಆ ಮಗುವಿಗೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ.

Leave A Reply

Your email address will not be published.