ಚಾಣಾಕ್ಯ ನೀತಿಯ ಪ್ರಕಾರ ಈ ವ್ಯಕ್ತಿ ಎಲ್ಲರನ್ನೂ ಶತ್ರುಗಳಂತೇ ಕಾಣುತ್ತಾರೆ; ಅಂಥವರಿಂದ ದೂರನೇ ಇರಿ!

ಮಾನವನ ನಿತ್ಯದ ಜೀವನಕ್ಕೆ ಚಾಣಾಕ್ಯನ ನೀತಿ ಪಾಠಗಳು ಇಂದಿಗೂ ಅನ್ವಯವಾಗುತ್ತದೆ. ನಾವು ಹೇಗಿದ್ದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎನ್ನುವುದನ್ನು ಚಾಣಾಕ್ಯ ಬಹಳ ಅರ್ಥ ಗರ್ಭಿತವಾಗಿ, ಸೂಕ್ಷ್ಮವಾಗಿ ತಿಳಿಸಿದ್ದಾನೆ. ಹಾಗಾಗಿ ಚಾಣಾಕ್ಯ ನೀತಿಯನ್ನು ಸರಿಯಾಗಿ ಅರ್ಥೈಸಿಕೊಂಡರೆ ಜೀವನದಲ್ಲಿ ಸುಲಭವಾಗಿ ಯಶಸ್ಸನ್ನು ಕಾಣಬಹುದು!

ಚಾಣಾಕ್ಯ ಹೇಳುವಂತೆ, ಇಂತಹ ಸ್ವಭಾವ ಇರುವ ವ್ಯಕ್ತಿ ಇತರರನ್ನು ಶತ್ರುಗಳಂತೆ ಕಾಣುತ್ತಾರೆ. ಹಾಗಾಗಿ ನೀವು ಈ ತರಹದವರ ಎದುರು ನಿಂತು ಮಾತನಾಡುವಾಗ ಯೋಚನೆ ಮಾಡಬೇಕು. ಹಾಗಾದರೆ ಅಂತಹವರ ಸ್ವಭಾವ ಹೇಗಿರುತ್ತೆ? ತಿಳಿದುಕೊಳ್ಳೋಣ!

ಆಚಾರ್ಯ ಚಾಣಾಕ್ಯ ನೀತಿಯ ಪ್ರಕಾರ, ತಮ್ಮ ವಾದದ ಮೇಲೆ ಬಲವಾಗಿ ನಂಬಿಕೆ ಇರುವವರು ಇತರರು ತಮಗೆ ಸಲಹೆಯನ್ನು ನೀಡಿದರೆ ಶತ್ರುಗಳಂತೆ ಭಾವಿಸುತ್ತಾರೆ. ಇಂಥವರಿಗೆ ಯಾವುದೇ ಕಾರಣಕ್ಕೂ ಸಲಹೆ ನೀಡಲು ಹೋಗಬೇಡಿ. ಅದರಿಂದ ಮುಖಭಂಗವೂ ಆಗಬಹುದು.

ಹಣದ ದುರಾಸೆ ಹೊಂದಿರುವವರು ಇತರರನ್ನು ಶತ್ರುಗಳಂತೆಯೇ ಕಾಣುತ್ತಾರೆ. ಅವರಿಗೆ ಸರಿ, ತಪ್ಪುಗಳ ಬಗ್ಗೆ ಯಾರೇ ಸಲಹೆ ನೀಡಿದರೂ ಅದೂ ಇಷ್ಟವಾಗುವುದಿಲ್ಲ. ಅಂಥವರನ್ನು ಶತ್ರುಗಳಂತೇ ಟ್ರೀಟ್ ಮಾಡುತ್ತಾರೆ. ಇನ್ನು ಗಂದ ಹೆಂದತಿ ದಾಂಪತ್ಯದಲ್ಲಿ ಅನುಮಾನವೇ ದೊಡ್ದ ಶತ್ರು. ಅನುಮಾನ ಬಂದಾಗ ಕುಳಿತು ಕೂಡಲೇ ಪರಿಹರಿಸಿಕೊಳ್ಳಬೇಕು. ಇಲ್ಲವಾದರೆ, ಅನುಮಾನ ಪರಿಹಾರವಾಗದೇ ಇಬ್ಬರೂ ಒಬ್ಬರನ್ನೊಬ್ಬರು ಶತ್ರುಗಳಂತೆ ಭಾವಿಸುತ್ತಾರೆ.

ಇನ್ನು ಚಾಣಾಕ್ಯ ಹೇಳುವ ಪ್ರಕಾರ ಮೂರ್ಖತನವೂ ಕೂಡ ನಮ್ಮ ಶತ್ರುವೇ. ಸರಿಯಾದ ಜ್ಞಾನ ವಿದ್ದವರ ಬಳಿ ಮಾಹಿತಿಯನ್ನು ಖಲೆಹಾಕಬೇಕು. ಅವರಿಂದ ಗೊತ್ತಿಲ್ಲದ್ದನ್ನು ತಿಳಿದುಕೊಳ್ಳಬೇಕು. ಅದನ್ನು ಬಿಟ್ಟು ಮೂರ್ಖರ ಮೇಲೆ ಅವಲಂಬಿತರಾದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ. ಅಂಥವರ ಮಾತನ್ನು ಕೇಳಿದ್ರೆ ಜೀವನದಲ್ಲಿ ಎಡವುತ್ತೀರಿ ಎಚ್ಚರ!

ಇನ್ನು ನಮ್ಮ ತಪ್ಪನ್ನು ಎತ್ತಿ ತೋರಿಸಿದರೆ ಅವರೂ ಕೂಡ ನಮ್ಮ ಶತ್ರುಗಳಂತೇ ಭಾಸವಾಗುತ್ತದೆ. ಅದರಲ್ಲೂ ಯಾರ ಎದುರಲ್ಲಿಯೂ ನಮ್ಮನ್ನು ತಪ್ಪಿತಸ್ಥರು ಎಂದು ಕರೆದರೆ ಅಂಥವರು ನಮಗೆ ಇಷ್ಟವಾಗುವುದಿಲ್ಲ. ಆದರೆ ಮುಂದೆ ನಿಂತು ಹೊಗಳಿ ಹಿಂದೆ ತೆಗಳುವವರಿಗಿಂತ ನೇರವಾಗಿ ತಪ್ಪನ್ನು ಹೇಳಿ ನಮಮ್ನ್ನು ಸರಿದಾರಿಗೆ ತರುವವರೆ ನಿಜವಾಗಿಯೂ ಮಿತ್ರರು!  ಚಾಣಾಕ್ಯ ಹೇಳುವ ಈ ವ್ಯಕ್ತಿಯಿಂದ ನೀವು ದೂರವಿದದ್ರೆ ನೀವು ಯಾರಿಗೂ ಶತ್ರುವಾಗುವುದಿಲ್ಲ. ನಿಮಗೂ ಯಾರೂ ಶತ್ರುಗಳು ಇರುವುದಿಲ್ಲ ಏನನ್ನುತ್ತೀರಿ!

Leave A Reply

Your email address will not be published.