ಸೋನಿ ಬಿಡುಗಡೆ ಮಾಡಿದೆ ರಿಂಗ್ ಮಾದರಿಯ ಲಿಂಕ್ ಬಡ್ಸ್: ಮಾರುಕಟ್ಟೆಯಲ್ಲಿರುವ ಎಲ್ಲಾ ಇಯರ್ ಬಡ್ ಗಳಿಗಿಂತ ಹೆಚ್ಚು ಬ್ಯಾಟರಿ ಲೈಫ್ ಹೊಂದಿದೆ!

ಟೆಕ್ನಾಲಜಿ ಅಭಿವೃದ್ಧಿಯಾಗುತ್ತಿದ್ದ ಹಾಗೆ ಮನುಷ್ಯ ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುತ್ತಾನೆ. ಹೊಸ ಮಾದರಿಯ ಇಲೆಕ್ಟ್ರಾನಿಕ್ ವಸ್ತುಗಳನ್ನ ಬಳಸಲು ಮುಂದಾಗುತ್ತಾನೆ. ಇಂದು ಮನುಷ್ಯನಿಗೆ ಅನುಕೂಲವಾಗುವಂಥ ಹಲವು ಹೊಸ ಹೊಸ ಡಿವೈಸ್ ಗಳು ಬಿಡುಗಡೆ ಗೊಂಡಿವೆ. ಮೊದಲಿನ ಹಾಗೆ ಮೊಬೈಲ್ ಕಿವಿಗಿಟ್ಟು ಮಾತನಾಡಲು ಕಷ್ಟಪಡಬೇಕಾಗಿಲ್ಲ. ಅಥವಾ ಉದ್ದವಾದ ವಾಯರ್ ಇರುವ ಇಯರ್ ಫೋನ್ ಗಳನ್ನೂ ಬಳಸಬೇಕಾಗಿಲ್ಲ. ಸುಲಭವಾಗಿ ಬ್ಲೂಟೂತ್ ಸಹಾಯದಿಂದ ಕನೆಕ್ಟ್ ಮಾದಬಹುದಾದ ಸಣ್ಣ ಇಯರ್ ಬಡ್ ಇದ್ರೆ ಸಾಕು. ಮೊಬೈಲ್ ನ್ನು ಜೇಬಲ್ಲೋ, ಬ್ಯಾಗಲ್ಲೂ ಇಟ್ಟು ಮಾತನಾಡಬಹುದು.

ಹಾಗಾಗಿ ಜನರಿಗೆ ಅನುಕೂಲವಾಗುವ ಹಲವು ವಿಶೇಷವಾದ ಇಯರ್ ಬಡ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದೀಗ ಸೋನಿ ಪ್ರಸ್ತುತ ಪಡಿಸಿರುವ ಲಿಂಕ್ ಬಡ್ ಗಳು ಬಹಳ ವಿಶೇಷವಾಗಿವೆ. ಉತ್ತಮ ಫೀಚರ್, ಒಳ್ಳೆಯ ಬ್ಯಾಟರಿ ಲೈಫ್ ಹಾಗೂ ಸುಲಬಹ್ವಾಗಿ ಬಳಸಬಹುದಾದ ಸೋನಿ ಲಿಂಕ್ ಬಡ್ ಗಳ ಬಗ್ಗೆ ಇಲ್ಲಿದೆ ಸಂಪೂರ್‍ಣ ಮಾಹಿತಿ!

ಸೋನಿ ಕಂಪೆನಿ ಹೊಸದಾಗಿ ಸೋನಿ ಲಿಂಕ್‌ಬಡ್ಸ್‌ ) ಇಯರ್‌ಬಡ್‌ ಸಾಧನವನ್ನು ಲಾಂಚ್ ಮಾಡಿದ್ದು, ಜನರಿಗೆ ಇಷ್ಟವಾಗುವ ರೀತಿಯಲ್ಲಿ ಹೊಸ ವಿನ್ಯಾಸವನ್ನು ಹೊತ್ತು ಬಂದಿದೆ. ಈ ಡಿವೈಸ್‌ ರಿಂಗ್ ಮಾದರಿಯ ರಚನೆ ಹೊಂದಿದೆ. ಪ್ರೀಮಿಯಂ ಆಡಿಯೊ ಸಾಧನ ಇದಾಗಿದ್ದು 17.5 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹಿಂದಿದೆ. ಇನ್ನು ನೋಡೋದಕ್ಕೂ ಬಹಳ ಆಕರ್ಷಕವಾಗಿರುವ ಈ ಲಿಂಕ್ ಬಡ್ ಗಳು ಬೂದು, ಕಪ್ಪು ಬಣ್ಣಗಳಲ್ಲಿ ಲಭ್ಯವಿವೆ!

ಐಪಿಎಕ್ಸ್ 4 ನೀರಿನ ಪ್ರತಿರೋಧದ ರೇಟಿಂಗ್ ಅನ್ನು ಹೊಂದಿವೆ. ಬ್ಯಾಟರಿ ಬಾಳಿಕೆಗೆ ಸಂಬಂಧಿಸಿದಂತೆ ಹೇಳುವುದಾದರೆ ಈ ಇಯರ್‌ಬಡ್‌ಗಳು ಒಮ್ಮೆ ಚಾರ್ಜ್ ಮಾಡಿದ್ರೆ 5.5 ಗಂಟೆಗಳವರೆಗೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ 12 ಗಂಟೆಗಳವರೆಗೆ ಆಲಿಸುವ ಸಾಮರ್ಥ್ಯ 10 ನಿಮಿಷಗಳ ಚಾರ್ಜ್ 90 ನಿಮಿಷಗಳ ಆಲಿಸುವ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

Leave A Reply

Your email address will not be published.