ಅದಿತಿ ಮದುವೆಯ ಜವಾಬ್ದಾರಿ ಹೊತ್ತ ವೇದಾಂತ್; ಬದಲಾದ ಸುಹಾಸಿನಿ; ಮುಂದೇನು ಪ್ಲ್ಯಾನ್!

ವೇದಾಂತ ಮನೆಯಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ವೇದಾಂತ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.   ಈ ನಿರ್ಧಾರವನ್ನು ಕೇಳಿ ಮನೆಯವರು ಕೂಡ ಖುಷಿಯಾಗಿದ್ದಾರೆ. ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಟ್ಟಿಮೇಳ ಧಾರಾವಾಹಿ ಅತ್ಯಂತ ಚೆನ್ನಾಗಿ ಮೂಡಿಬರುತ್ತಿದೆ. ಸಾಕಷ್ಟು ಟ್ವಿಸ್ಟ್ ಗಳನ್ನು ನೀಡಿ ಜನರಲ್ಲಿ ಕುತೂಹಲ ಮೂಡಿಸಿದೆ. ಇದೀಗ ವೇದಾಂತ ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ. ಅದೇನು ಗೊತ್ತಾ?

ತನ್ನ ನಾದಿನಿ ಅದಿತಿ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿದ್ದಾನೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವೇದಾಂತ್ ಅವರ ಮನೆಯಲ್ಲಿಯೂ ಕೂಡ ಸಂಭ್ರಮ ಮನೆ ಮಾಡಿದ್ದು, ಈ ಸಂದರ್ಭದಲ್ಲಿ ವೇದಾಂತ್ ತಾಯಿ ಸುಹಾಸಿನಿ, ಪರಿಮಳ ಅವರನ ವಿಶೇಷ ಅತಿಥಿಯಾಗಿ ಕಳುಹಿಸಿದ್ದಾರೆ ಇದನ್ನು ನೋಡಿ ಮನೆಯವರು ಫುಲ್ ಶಾಕ್ ಆಗಿದ್ದಾರೆ. ತನ್ನ ಅತ್ತೆಯಲ್ಲಿ ಆದ ಬದಲಾವಣೆಯನ್ನು ನೋಡಿ ಅಮ್ಮು ಶಾಕ್ ಆಗಿದ್ದಾಳೆ. ಇನ್ನು ಇದೇ ಸಂದರ್ಭದಲ್ಲಿ ವೇದಾಂತ್ ಹೇಳಿದ ನಿರ್ಧಾರದ ಬಗ್ಗೆ ಎಲ್ಲರೂ ಸಹ ಮತ ಸೂಚಿಸಿದ್ದಾರೆ. ಅದಿತಿಯ ಮದುವೆಗೆ ನೀವೆಲ್ಲರೂ ಸಹಕರಿಸಬೇಕು ಎಂದು ವೇದಾಂತ್ ಕೇಳುತ್ತಾನೆ ಆಗ ವಿಕಿ ಹಾಗೂ ಸಾರ್ಥಕ ಇಬ್ಬರು ಒಪ್ಪಿಕೊಂಡು ನಾವು ನಮ್ಮ ಮನೆಯ ಮದುವೆಯನ್ನ ನೆರವೇರಿಸದೆ ಮತ್ತೆ ಬೇರೆ ಯಾರು ನೋಡುತ್ತಾರೆ! ಇದೆಲ್ಲ ಜವಾಬ್ದಾರಿಯೂ ನಮ್ಮದೇ ಎಂದು ಭರವಸೆಯನ್ನು ನೀಡಿದ್ದಾರೆ. ಅಲದೇ ವೇದಾಂತ್ ನಾನು ಅಮ್ಮು ಅಪ್ಪ ಅಮ್ಮನಿಗೆ ಮಾತು ನೋಡಿದ್ದೇನೆ ಎಲ್ಲಿಯೂ ಯಾವ ಲೋಪದೋಷವು ಆಗಬಾರದು ಎಂದು ಹೇಳುತ್ತಾನೆ ಇದಕ್ಕೆ ಸಾರ್ಥಕ ಕೂಡ ಒಪ್ಪಿಗೆ ಸೂಚಿಸುತ್ತಾನೆ. ಅದಿತಿ ಮದುವೆಗೆ ನಿಶ್ಚಿತಾರ್ಥದ ಡೇಟ್ ಫಿಕ್ಸ್ ಆಯ್ತು ಅಂತ ವೇದಾಂತ್ ಹೇಳಿದ್ದಕ್ಕೆ ಎಲ್ಲರಿಗೂ ಆಶ್ಚರ್ಯವಾಗುತ್ತೆ ಹುಡುಗ ಫಿಕ್ಸ್ ಆದ ಅಂದಮೇಲೆ ನಿಶ್ಚಿತಾರ್ಥ ಫಿಕ್ಸ್ ಆದಂತೆ ಅರ್ಥ ಅಲ್ವಾ ಅಂತ ವೇದಾಂತ ಕೇಳುತ್ತಾನೆ.

ಇನ್ನು ವೇದಾಂತ ಪರಿಮಳ ಅವರ ಬಳಿ ಅದಿತಿಯ ಮದುವೆಯ ಸಂಪೂರ್ಣ ಖರ್ಚನ್ನು ತಾನೇ ಬರಿಸುವುದಾಗಿ ಹೇಳಿದ್ದಾನೆ. ಈಗಾಗಲೇ ಆರತಿ ಹಾಗೂ ಅಮ್ಮು ಮದುವೆ ಗಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ ಇನ್ನು ಅವರಿಗೆ ಅದರ ಸಾಲದ ಹೊರೆಯನ್ನ ತೀರಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಅದಿತಿಯ ಮದುವೆ ಸಂಪೂರ್ಣವಾಗಿ ನಾನೇ ಭಾವಿಸುತ್ತೇನೆ. ಈತ ಆರತಿ ಹಾಗೂ ಅಮ್ಮು ಅಪ್ಪ-ಅಮ್ಮನಿಗೆ ಒಂದು ಮನೆಯನ್ನು ಕಟ್ಟಿಸಿಕೊಡಬೇಕು ಅಂತ ತಮ್ಮ ಕೈಲಾದಷ್ಟು ಹಣವನ್ನು ಕೂಡಿಸುತ್ತಿದ್ದಾರೆ. ಆದರೆ ಈ ಚಿಲ್ಲರೆ ಕಾಸು ಹೀಗೆ ಒಟ್ಟಾಗ್ತಾ ಇದ್ರೆ, ಮನೆ ಕಟ್ಟಿಸಿಕೊಡೋದು ಯಾವಾಗ ಅಂತ ಆರತಿಗೆ ಚಿಂತೆ ಕಾಡುತ್ತಿದೆ.

ಇದೀಗ ವೇದಾಂತ್ ಅದಿತಿಯ ಮದುವೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಅಲ್ಲದೆ ಅದರ ಖರ್ಚು ವೆಚ್ಚಗಳನ್ನು ಕೂಡ ತಾನೇ ಧರಿಸಲು ಮುಂದಾಗಿದ್ದಾನೆ ಇದಕ್ಕೆ ಮನೆಯವರ ಎಲ್ಲರ ಸಹಮತ ಇದೆ. ಸುಹಾಸಿನಿ ಕೂಡ ತನ್ನ ಬೆಂಬಲವಿದೆ ಎಂದು ಹೇಳಿದ್ದಾರೆ. ಮುಂದೆ ಏನಾಗುತ್ತದೆ ಕಾದು ನೋಡಬೇಕು.

Leave A Reply

Your email address will not be published.