’ಪುಷ್ಫಾ’ ನಿರ್ಮಾಣ ಸಂಸ್ಥೆಯ ಜೇಬಿಗೆ ಬಿತ್ತು ಕತ್ತರಿ; ನಿರ್ದೇಶಕರ, ನಟನ ಸಂಭಾವನೆ ಕೇಳಿ ನಿರ್ಮಾಪಕರು ಸುಸ್ತೋ ಸುಸ್ತು!

ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ದಿ ರೈಸ್ ಭಾಗ 2 ಚಿತ್ರೀಕರಣ ಇನ್ನೇನು ಆರಂಭವಾಗಲಿದೆ. ಆದರೆ ಈ ಚಿತ್ರದ ನಿರ್ಮಾಣದ ವೆಚ್ಚದ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಬಹಿರಂಗವಾಗಿವೆ. ಈ ವರದಿಗಳ ಪ್ರಕಾರ ಎರಡನೇ ಭಾಗದ ನಿರ್ಮಾಣಕ್ಕೆ ಸಾಕಷ್ಟು ವೆಚ್ಚ ಆಗಲಿದ್ದು ಚಿತ್ರಕ್ಕೆ ಬಂಡವಾಳ ಮೈತ್ರಿ ಮೂವಿ ಮೇಕರ್ಸ್ ಗೆ ಕೈಸುಟ್ಟಿಕೊಳ್ಳುವ ಭಯವೂ ಇದೆ. ಇದಕ್ಕೆ ಮುಖ್ಯವಾದ ಕಾರಣ ನಟ ಹಾಗೂ ನಿರ್ದೇಶಕರು ಕೇಳಿರುವ ಭಾರಿ ದೊಡ್ಡ ಮೊತ್ತದ ಸಂಭಾವನೆ.

ಪುಷ್ಪ ದಿ ರೈಸ್ 2 ಚಿತ್ರೀಕರಣ ಅಗಸ್ಟ್ ನಲ್ಲಿಯೇ ಆರಂಭವಾಗಲಿದೆ. ಆದರೆ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರಶ್ಮಿಕ ಮಂದಣ್ಣ ಸಾಕಷ್ಟು ಸಂಭಾವನೆಯ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅದರ ಹಿನ್ನೆಲೆಯಲ್ಲಿಯೇ ನಟ ಅಲ್ಲು ಅರ್ಜುನ್ ಕೂಡ ತನ್ನ ಸಂಭಾವನೆಯನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದ್ದಾರಂತೆ. ಜೊತೆಗೆ ನಿರ್ದೇಶಕ ಸುಕುಮಾರ್ ಅವರು ಕೂಡ ಹೆಚ್ಚಿನ ಮೊತ್ತದ ಸಂಭಾವನೆಯನ್ನು ನಿರೀಕ್ಷೆ ಮಾಡಿದ್ದಾರೆ.

ಪುಷ್ಪ ಸಿನಿಮಾದ ಮೊದಲನೆಯ ಭಾಗ ಬ್ಲಾಕ್ ಬಸ್ಟರ್ ಮೂವಿ ಆಗಿ ಹೊರಬಂದಿದ್ದು ಸುಮಾರು 355 ರಿಂದ 365 ಕೋಟಿ ಹಣವನ್ನು ಸಂಪಾದನೆ ಮಾಡಿದೆ. ಆದರೆ ಇದರಲ್ಲಿ ಕಲಾವಿದರ ಸಂಭಾವನೆಯ ಹೆಚ್ಚಿಗೆ ಇರುವುದರಿಂದ ನಿರ್ಮಾಪಕರಿಗೆ ಉಳಿತಾಯವಾಗಿದ್ದು ಬಹಳ ಕಡಿಮೆ. ಇದೀಗ ಎರಡನೇ ಭಾಗದ ಚಿತ್ರೀಕರಣಕ್ಕೆ ನಟ ಅಲ್ಲೂ ಅರ್ಜುನ್ ಅವರು 175 ಕೋಟಿ ರೂಪಾಯಿ ಹಾಗೂ ನಿರ್ದೇಶಕ ಸುಕುಮಾರ್ ಅವರು 75 ಕೋಟಿ ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. ಅಲ್ಲಿಗೆ ಇಬ್ಬರ ಸಂಭವನೀಯತೆ 200 ಕೋಟಿಯ ಮೇಲಾಯಿತು. ಇನ್ನು ಚಿತ್ರೀಕರಣಕ್ಕೆ ಸುಮಾರು 200 ಕೋಟಿ ವೆಚ್ಚ ಮಾಡುವ ಸಾಧ್ಯತೆ ಇದೆ. ಸದ್ಯ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾನ ಬಹಳ ಬೇಗ ಮುಗಿಸುವ ನಿರೀಕ್ಷೆಯಲ್ಲಿದ್ದಾರೆ ಯಾಕಂದ್ರೆ ಇನ್ನಷ್ಟು ದಿನ ತಡವಾದರೆ ವೆಚ್ಚವು ಅಧಿಕವಾಗುವ ಸಾಧ್ಯತೆ ಇದೆ.

ಪುಷ್ಪ ಚಿತ್ರ ಮತ್ತೊಮ್ಮೆ ಗೆಲುವನ್ನು ಕಂಡರು ಕೂಡ ಹೆಚ್ಚಿನ ಪ್ರಮಾಣದ ಹಣ ಗಳಿಸುವ ಸಾಧ್ಯತೆ ಕಡಿಮೆ. 300 ರಿಂದ 400 ಕೋಟಿ ಸಂಪಾದನೆ ಮಾಡಿದರು, ಖರ್ಚು ವೆಚ್ಚಗಳನ್ನು ಹೋಗಲಾಡಿಸಿ ನಿರ್ಮಾಣ ಸಂಸ್ಥೆಗೆ ಉಳಿಯುವ ಹಣ ಅತ್ಯಂತ ಕಡಿಮೆ. ಇನ್ನು ಪುಷ್ಪ ಸಿನಿಮಾದ ಎರಡನೇ ಭಾಗ ಪ್ಲಾಪ್ ಆದ್ರಂತೂ ಪ್ರೊಡಕ್ಷನ್ ಹೌಸ್ ಮೇಲೆ ಭಾರಿ ಪ್ರಮಾಣದ ಹಣದ ಒತ್ತಡ ಬೀಳಲಿದೆ. ಇನ್ನು ಈ ಚಿತ್ರದ ಓಟಿಟಿ ಹಾಗೂ ಟೆಲಿಕಾಸ್ಟಿಂಗ್ ವಿಚಾರಕ್ಕೆ ಸಂಬಂಧಪಟ್ಟಹಾಗೆ ಯಾವುದೇ ವಿಷಯವನ್ನು ಲೀಕ್ ಮಾಡಿದ ರೀತಿಯಲ್ಲಿ ಚಿತ್ರತಂಡ ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಈ ಸಿನಿಮಾ ಬಿಡುಗಡೆಗೆ ಮೊದಲು ಓಟಿಟಿ ಒಪ್ಪಂದವನ್ನು ಫೈನಲೈಸ್ ಮಾಡಲಿದ್ದಾರೆ.  ಇನ್ನು ಈ ಚಿತ್ರ ಹಿಟ್ ಆದ್ರೆ ಶೇಕಡಾ 40% ಪ್ರೋಫಿಟ್ ನ್ನು ಇವರಿಗೆ ನೀಡಬೇಕು. 20 ಪರ್ಸೆಂಟ್ ಪ್ರಾಫಿಟ್ ಇಟ್ಟುಕೊಳ್ಳುವ ಮೈತ್ರಿ ಮೂವಿ ಮೇಕರ್ಸ್ ಎಷ್ಟು ಹಣ ತನ್ನದಾಗಿಸಿಕೊಳ್ಳಬಹುದು ಎನ್ನುವ ಬಗ್ಗೆ ಟಾಲಿವುಡ್ ನಲ್ಲಿ ಚರ್ಚೆ ನಡೆದಿದೆ. ಒಟ್ಟಿನಲ್ಲಿ ಪುಷ್ಪಾ ದಿ ರೈಸ್ ಸಿನಿಮಾ ಜನರ ಮುಂದೆ ಬ್ಲಾಕ್ ಬಸ್ಟರ್ ಮೂವಿ ಎನಿಸಿಕೊಂಡರು ನಿರ್ಮಾಪಕರ ಜೇಬು ತುಂಬುವುದು ಅಷ್ಟರಲ್ಲಿಯೇ ಇದೆ!

Leave A Reply

Your email address will not be published.