ಮೊದಲ ದಿನವೇ ಹೊರ ಹೋಗೋ ಮಾತು: ಬಿಗ್ ಬಾಸ್ ಮನೆಯಿಂದ ಓಡಿ ಹೋಗೋ ಸ್ಪರ್ದಿ ಇವರೇನಾ?? ಯಾರು ಗೊತ್ತೇ??

ಬಿಗ್ ಬಾಸ್ ಮನೆಯಲ್ಲಿ ಯಾರು ಯಾರ ಜೊತೆ ಬಾಂಡಿಂಗ್ ಬೆಳೆಸಿಕೊಳ್ಳುತ್ತಾರೆ? ಯಾವ ರೀತಿ ಟಾಸ್ಕ್ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಹಾಗಾಗಿ ಈ ಬಾರಿ ಬಿಗ್ ಬಾಸ್ ಓಟಿಟಿ ದಿನದ 24 ಗಂಟೆಯೂ ಪ್ರಸಾರವಾಗುತ್ತಿದೆ. ಸಂಜೆ ಏಳುಗಂಟೆಗೆ ದಿನದ ಎಲ್ಲಾ ಘಟನೆಗಳ ಮಿಶ್ರಿತ ಎಪಿಸೋಡ್ ಪ್ರಸಾರವಾಗುತ್ತದೆ.

ಬಿಗ್ ಬಾಸ್ ಓಟಿಟಿ ವರ್ಷನ್ ಆರಂಭವಾಗಿ ಎರಡು ದಿನಗಳಾಯ್ತು. ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. 16 ಸ್ಪರ್ಧಿಗಳಲ್ಲಿ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ ಸೇರಿದಂತೆ ಒಟ್ಟು ಎಂಟು ಜನ ಈ ಬಾರಿ ಮನೆಯಿಂದ ಹೊರ ಹೋಗುವುದಕ್ಕೆ ನಾಮಿನೇಟ್ ಆಗಿರುವ ಸ್ಪರ್ಧಿಗಳು.

ಬಿಗ್ ಬಾಸ್ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು ಸ್ಪೂರ್ತಿ ಗೌಡ. ಶಿವಮೊಗ್ಗದ ಸ್ಪೂರ್ತಿ ಗೌಡ ತಮ್ಮ ಕೈಯಲ್ಲಿ ಈ ಕೆಲಸ ಆಗುವುದಿಲ್ಲ ಅಂತ ಎನಿಸಿದರೆ ಅರ್ಧದಲ್ಲಿಯೇ ಬಿಟ್ಟು ಬರುವ ಸ್ವಭಾವ ಹೊಂದಿರುವವರು. ಆದರೆ ಬಿಗ್ ಬಾಸ್ ಇಟಿಟಿ ವರ್ಷನ್ ನಲ್ಲಿ ಮಾತ್ರ ತಾನು ಗೆದ್ದು ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸಿಸನ್ ಗೂ ಎಂಟ್ರಿ ಪಡೆದುಕೊಳ್ಳಬೇಕು ಎನ್ನುವ ಹಠ ಹೊತ್ತಿದ್ದಾರೆ ಸ್ಪೂರ್ತಿಗೌಡ.

ಸ್ಪೂರ್ತಿ ಗೌಡ ಅವರು ಸೀತಾ ವಲ್ಲಭ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ನಿಭಾಯಿಸಿದ್ರು. ಇನ್ನು ಮಾಡೆಲ್ ಕೂಡ ಆಗಿರುವ ನಟಿ ಸ್ಪೂರ್ತಿಗೌಡ, ಮಿಸ್ ಪಾಪ್ಯುಲರ್ ಫೇಸ್, ಮಿಸ್ ಮಲ್ನಾಡ್ ಸ್ಪರ್ಧೆಗಳಲ್ಲಿ ರನ್ನರ್ ಅಪ್ ಆಗಿದ್ದಾರೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋನಲ್ಲಿಯೂ ಕೂಡ ಭಾಗವಹಿಸಿದ ಸ್ಪೂರ್ತಿ ಗೌಡ ಅಲ್ಲಿಂದ ಬೇಗ ಹೊರ ಬಂದಿದ್ದರು.

ಇನ್ನು ಸ್ಪೂರ್ತಿಗೌಡ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಧಾರಾವಾಹಿಯಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಆದರೆ ತೆಲುಗು ಸೀರಿಯಲ್ ಒಂದನ್ನ ಅರ್ಧದಲ್ಲಿಯೇ ಬಿಟ್ಟು ಬಂದವರು ಸ್ಪೂರ್ತಿ ಗೌಡ. ಹೀಗೆ ಎಲ್ಲಾ ಕೆಲಸವನ್ನು ಅರ್ಧಂಬರ್ಧ ಮಾಡುವ ಸ್ಪೂರ್ತಿಗೌಡ ಬಿಗ್ ಬಾಸ್ ಮನೆಯಲ್ಲಿ ಮಾತ್ರ ಹೆಚ್ಚು ಸಮಯ ಉಳಿಯುತ್ತಾರಾ? ಮುಂದಿನ ಬಿಗ್ ಬಾಸ್ ಸೀಸನ್ ಗೂ ಪ್ರವೇಶ ಪಡೆಯುತ್ತಾರಾ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

Leave A Reply

Your email address will not be published.