ಕಿರುತೆರೆಯ ವೀಕ್ಷಕರಿಗೆ ಸಿಹಿ ಸುದ್ದಿ: ಮತ್ತೆ ಬರುತ್ತಿದೆ ವೀಕೆಂಡ್ ವಿಥ್ ರಮೇಶ್ ಈ ಬಾರಿಯ ಸಾಧಕರು ಯಾರು ಗೊತ್ತಾ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕ್ ಎಂಡ್ ವಿಥ್ ರಮೇಶ್ ಬಹಳ ಫೇಮಸ್ ಆಗಿರುವ ರಿಯಾಲಿಟಿ ಶೋ. ಇದರಲ್ಲಿ ಜೀವನದಲ್ಲಿ ಸಾಧನೆ ಮಾಡಿದ ಸಾಕಷ್ಟು ರಿಯಲ್ ಹೀರೋ ಹಾಗೂ ಹೀರೋಯಿನ್ ಗಳನ್ನು ಪರಿಚಯಿಸಲಾಗುತ್ತೆ. ಅವರೇ ಅವರ ಸಾಧನೆಯನ್ನ ಸಿಂಹಾವಲೋಕನ ಮಾಡಿಕೊಳ್ಳುವಂತಹ ಶೋ ಇದು. ಸಾಕಷ್ಟು ಬಾರಿ ನಾವು ಯಾವುದೇ ಸಾಧನೆಯನ್ನು ಮಾಡಿದ್ರು ಅದನ್ನ ಎಲ್ಲರೂ ಗುರುತಿಸುವುದಿಲ್ಲ ಅಥವಾ ಎಲ್ಲರಿಗೂ ನಮ್ಮ ಸಾಧನೆಯ ಬಗ್ಗೆ ಗೊತ್ತಿರುವುದಿಲ್ಲ ಆದರೆ ಜೀವನದಲ್ಲಿ ಮಾಡಿದಂತಹ ಸಾಧನೆಗಳನ್ನು ಇತರರಿಗೂ ತೋರಿಸುವಂತಹ ಅತ್ಯುತ್ತಮ ಪ್ರಯತ್ನವೇ ವೀಕೆಂಡ್ ವಿತ್ ರಮೇಶ್.

ಈ ಕಾರ್ಯಕ್ರಮದ ಮುಖ್ಯ ಹೈಲೈಟ್ ಅಂದ್ರೆ ರಮೇಶ್ ಅರವಿಂದ್. ಅತ್ಯದ್ಭುತವಾಗಿ ಕಾರ್ಯಕ್ರಮವನ್ನು ನಡೆಸಿಕೊಡುವ ನಟ ರಮೇಶ್ ಅವರು ಇಲ್ಲಿ ಬರುವ ಸಾಧಕರಿಗೆ ಇನ್ನಷ್ಟು ಹೆಮ್ಮೆಯಾಗುವ ರೀತಿಯಲ್ಲಿ ಅವರ ಸಾಧನೆಯನ್ನ ಅವರಿಗೆ ತಿಳಿಸುತ್ತಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಸಾಧಕರ ಹಳೆಯ ನೆನಪುಗಳನ್ನು ಮತ್ತೆ ಮರುಕಳಿಸಲಾಗುತ್ತೆ. ಅವರ ಸ್ನೇಹಿತರು ಬಂಧು ಮಿತ್ರರು ಕಷ್ಟದಲ್ಲಿರುವಾಗ ಸಹಾಯ ಮಾಡಿದವರು ಗುರುಗಳು ಹೀಗೆ ಎಲ್ಲರನ್ನ ವೇದಿಕೆಯ ಮೇಲೆ ಕರೆಸಿ ಅವರಿಗೆ ಸರ್ಪ್ರೈಸ್ ನೀಡಲಾಗುತ್ತೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಕೆಂಪು ಸಿಂಹಾಸನದಲ್ಲಿ ಕುಳಿತುಕೊಳ್ಳುವುದೇ ನಿಜಕ್ಕೂ ಒಂದು ಸಾಧನೆ. ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ ಹಲವರನ್ನ ಈ ಚೇರ್ ಮೇಲೆ ಕೂರಿಸಿ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತೆ. ಈ ವೇದಿಕೆ ಕೇವಲ ಸಾಧನೆ ಮಾಡಿದವರನ್ನು ಸಂಭ್ರಮಿಸುವುದು ಮಾತ್ರವಲ್ಲ ಇತರರಿಗೂ ತಾವು ಇಂತಹ ಸಾಧನೆಯನ್ನು ಮಾಡಬಹುದು ಅಂತ ತೋರಿಸುವ ವೇದಿಕೆ. ಇಲ್ಲಿಗೆ ಬರುವ ಹಲವರು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಪ್ರತಿಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮುಗಿದಾಗ ಜನರಿಗೆ ಇಷ್ಟು ಬೇಗ ಈ ಸೀಸನ್ ಮುಗಿತಾ ಅಂತ ಬೇಸರವಾಗುತ್ತದೆ. ಆದರೆ ಇದೀಗ ನಿಮಗೊಂದು ಸಿಹಿ ಸುದ್ದಿ ಇದೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಶುರುವಾಗಲಿದೆ. ಹೌದು, ಹೊಸ ಸಾಧಕರನ್ನು ಹೊತ್ತು ತರಲಿದೆ ವೀಕೆಂಡ್ ವಿತ್ ರಮೇಶ್. ವಿಶಿಷ್ಟವಾದ ರೀತಿಯಲ್ಲಿ ಈ ಸೀಸನ್ ಮೂಡಿ ಬರಲಿದ್ದು ಈ ಬಾರಿ ಬರುವ ಸಾಧಕರ ಬಗ್ಗೆ ಜನರಲ್ಲಿ ಕುತೂಹಲವು ಮೂಡಿದೆ. ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ಈಗಾಗಲೇ ಈ ರಿಯಾಲಿಟಿ ಶೋ ಆರಂಭವಾಗುವುದರ ಬಗ್ಗೆ ಹಿಂಟ್ ನೀಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಯಾವಾಗ ನಮ್ಮನ್ನ ರಂಜಿಸಲು ಹೊಸ ಸೀಸನೊಂದಿಗೆ ಬರಲಿದೆ ಎನ್ನುವ ದಿನಾಂಕ ಇನ್ನು ಪ್ರಸಾರವಾಗಲಿಲ್ಲವಾದರೂ ಹೊಸ ಸಾಧಕರನ ಹೊತ್ತು ಈ ರಿಯಾಲಿಟಿ ಶೋ ಮತ್ತೆ ಬರಲಿದೆ ಅನ್ನೋದು ಮಾತ್ರ ಖಚಿತವಾಗಿದೆ.

ರಾಘವೇಂದ್ರ ಹುಣಸೂರು ಅವರು ನನ್ನ ನೆಚ್ಚಿನ ರಿಯಾಲಿಟಿ ಶೋ ಪ್ರಸಾರವಾಗಿ ಇಂದಿಗೆ ಎಂಟು ವರ್ಷಗಳು ಕಳೆದಿದೆ. ಮತ್ತೆ ಹೊಸ ಸೀಸನ್ ನೋಡಲು ಬಯಸುತ್ತೀರಾ ಅಂತ ಜನರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದರಿಂದ  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಪ್ರಸಾರವಾಗಲಿದೆ ಅನ್ನೋದು ಖಚಿತವಾಗಿದೆ. ಆದರೆ ಕಲರ್ಸ್ ಕನ್ನಡದ ಬಿಗ್ ಬಾಸ್ ನಂತೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವು ಕೂಡ ಕೇವಲ ಓಟಿಟಿ ಯಲ್ಲಿ ಮಾತ್ರ ಪ್ರಸಾರವಾಗಬಹುದಾ ಅನ್ನುವ ಪ್ರಶ್ನೆ ಜನರಲ್ಲಿ ಎದ್ದಿದೆ. ಇದೆಲ್ಲದಕ್ಕೂ ಉತ್ತರ ಸಿಗಬೇಕು ಅಂದ್ರೆ ಇನ್ನು ಸ್ವಲ್ಪ ದಿನ ನೀವು ಕಾಯಬೇಕು.

Leave A Reply

Your email address will not be published.