ನನ್ನ ಸೆಕ್ಸ್ ಲೈಫು ಹೆಚ್ಚು ಆಸಕ್ತಿಕರವಾಗಿಲ್ಲ ಹಾಗಾಗಿ ಕಾಫಿ ವಿತ್ ಕರಣ್ ಶೋಗೆ ನನ್ನನ್ನು ಕರೆದಿಲ್ಲ; ತಾಪ್ಸಿ ಪನ್ನು ಹೀಗೆ ಹೇಳಿದ್ಯಾಕೆ ಗೊತ್ತಾ!?

ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ’ಕಾಫಿ ವಿತ್ ಕರಣ್’ ಶೋ ತುಂಬಾನೆ ಫೇಮಸ್ ಆಗಿದೆ. ಈಗಾಗಲೇ ಸಾಕಷ್ಟು ಸೀಸನ್ ಮುಗಿಸಿರುವ ಕರುಣ್ ಜೋಹರ್ ಇದೀಗ ಹೊಸ ಸೀಸನ್ನು ಕೈಯಲ್ಲಿ ಹಿಡಿದು ಜನರ ಎದುರು ಬಂದಿದ್ದಾರೆ. ಹಾಟ್ ಸ್ಟಾರ್ ನಲ್ಲಿ ಸೀಸನ್ 7 ಪ್ರಸಾರವಾಗುತ್ತಿದೆ.

ಈ ಬಾರಿಯ ಶೋನಲ್ಲಿಯೂ ಕೂಡ ಸಾಕಷ್ಟು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಈಗಾಗಲೇ ಕೆಲವು ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ ಇನ್ನು ಕಾಫಿ ವಿಥ್ ಕಾರಣ ಶೋ ಹೆಚ್ಚು ಫೇಮಸ್ ಆಗಿರೋದು ಅದರಲ್ಲಿ ಮಾತನಾಡುವ ವಿಷಯಗಳಿಂದಾಗಿ. ಕರಣ್ ಜೋಹರ್ ಒಬ್ಬ ಕಾಂಟ್ರವರ್ಶಿಯಲ್ ವ್ಯಕ್ತಿ. ಇವರ ಬಗ್ಗೆ ಇವರಿಗೆ ಸಾಕಷ್ಟು ವಿವಾದಗಳು ಎದ್ದಿವೆ. ಬಾಲಿವುಡ್ ನಲ್ಲಿ ನೆಪೋಟಿಸಂ ಅನ್ನು ಹೆಚ್ಚು ಪ್ರಚುರ ಪಡಿಸೋದೇ ಕಾರಣ ಜೋಹರ್ ಎನ್ನುವ ಮಾತು ಇದೆ. ಇದುವರೆಗೆ ಬಹುತೇಕ ಸ್ಟಾರ್ ನಟರ ಮಕ್ಕಳನ್ನು ಚಿತ್ರರಂಗಕ್ಕೆ ಕರೆದು ತಂದು ಅವರನ್ನು ಬೆಳೆಸಿದ್ದು ಕರಣ್ ಜೋಹರ್. ನೆಪೋಟಿಸಂ ಅನ್ನು ಹೆಚ್ಚಾಗಿ ಮೆಚ್ಚಿಕೊಂಡಿರುವ ಕರಣ್ ಜೋಹರ್ ನಟನೆಯ ಹಿನ್ನೆಲೆ ಇಲ್ಲದೆ ಬಂದಿರುವ ಯಾವ ಕಲಾವಿದರನ್ನು ಹೆಚ್ಚಾಗಿ ಗೌರವಿಸುವುದಿಲ್ಲ. ಈ ಕಾರಣಕ್ಕೆ ಕರಣ್ ಜೋಹರ್ ಅವರ ಮೇಲೆ ಸಾಕಷ್ಟು ಜನರಿಗೆ ಸಿಟ್ಟು ಕೂಡ ಇದೆ.

ಇನ್ನು ಕಾಫಿ ವಿತ್ ಕರಣ್ ಶೋ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಕಾರಣ ಇದರಲ್ಲಿ ಪಾಲ್ಗೊಳ್ಳುವ ಸೆಲಿಬ್ರೆಟಿಗಳಿಗೆ ಕರಣ್ ಜೋಹರ್ ಕೇಳುವ ಪ್ರಶ್ನೆಗಳು. ಕರಣ್ ಸ್ವಲ್ಪವೂ ಹಿಂಜರಿಕೆ ಇಲ್ಲದೆ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳ ಸೆಕ್ಸ್ ಲೈಫ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಅವರಲ್ಲಿ ಇರುತ್ತವೆ. ಈಗಾಗಲೇ ಬೇರೆಯವರ ಲೈಂಗಿಕ ಜೀವನದ ಬಗ್ಗೆ ನಿಮಗೆ ಇಷ್ಟೊಂದು ಆಸಕ್ತಿ ಯಾಕೆ ಅಂತ ಜನರು ಕೇಳಿದ್ದಾರೆ. ಆದರೆ ಇದಕ್ಕೆಲ್ಲ ತಲೆ ಕೊಡಿಸಿಕೊಳ್ಳದ ಕರಣ್ ಮಾತ್ರ ಈ ಶೋ ನಲ್ಲಿ ಬಂದಿರುವ ಸೆಲೆಬ್ರೆಟಿಗಳಿಗೆ ಒಂದಾದರೂ ಸೆಕ್ಸ್ ವಿಷಯದ ಬಗ್ಗೆ ಪ್ರಶ್ನೆಯನ್ನು ಇಡುತ್ತಾರೆ. ಕಳೆದ ವಾರ ಕರೀನಾ ಕಪೂರ್ ಹಾಗೂ ಅಮೀರ್ ಖಾನ್ ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ಆಗಲು ಕೂಡ ಇಂಥದೊಂದು ಪ್ರಶ್ನೆಯನ್ನು ಕರಣ್ ಜೋಹರ್ ಕರೀನಾ ಕಪೂರ್ ಅವರಿಗೆ ಕೇಳಿದರು. ’ಮಕ್ಕಳು ಆದಮೇಲೆ ಗುಣಮಟ್ಟದ ಸೆಕ್ಸ್ ಅನುಭವಿಸುವುದಕ್ಕೆ ಸಾಧ್ಯನಾ?’ ಅಂತ ಕೇಳಿದ್ರು. ಇದಕ್ಕೆ ಅಮೀರ್ ಖಾನ್ ಉತ್ತರಿಸಿ ’ನಿನ್ನ ಅಮ್ಮ ಕೂಡ ಈ ಶೋ ನೋಡುತ್ತಿರುತ್ತಾರೆ ಎಂದು ಹೇಳುತ್ತೀಯಾ ಅಂದಮೇಲೆ ಇಂತಹ ಪ್ರಶ್ನೆಯನ್ನು ಕೇಳುವುದು ಸರಿಯೇ?’ ಎಂದು ಚಾಟಿ ಏಟು ನೀಡಿದ್ದಾರೆ.

ಇನ್ನು ಸೌತ್ ಸುಂದರ ವಿಜಯ್ ದೇವರಕೊಂಡ ಅವರ ಬಳಿಯೂ ಸೆಕ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಲವು ಪ್ರಶ್ನೆಗಳನ್ನು ಕೇಳಿದರು ಕರಣ್ ಜೋಹರ್.   ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸದ್ಯ ಬಾಲಿವುಡ್ ನಟಿ ತಾಪ್ಸಿ ಪನ್ನು ಹೇಳಿರುವ ಹೇಳಿಕೆ ಸಿಕ್ಕಾಪಟ್ಟೆ ಗಾಸಿಪ್ ಮಾಡುತ್ತಿದೆ.

ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋನಲ್ಲಿ ತಾಪ್ಸಿ ಪನ್ನು ಇನ್ನೂ ಬಂದಿಲ್ಲ. ತಾಪ್ಸಿ ಅವರ ನಟನೆಯ ದೋಬಾರಾ ಸಿನಿಮಾ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದರ ಪ್ರಮೋಷನ್ ಸಮಯದಲ್ಲಿ ನೀವು ಯಾಕೆ ಕರಣ್ ಜೋಹರ್ ಅವರ ಶೋಗೆ ಇನ್ನೂ ಬಂದಿಲ್ಲ ಅಂತ ಮಾಧ್ಯಮದವರು ಕೇಳಿದ್ದಾರೆ. ಇದಕ್ಕೆ ಥಟ್ ಅಂತ ಉತ್ತರಿಸಿದತಾಪ್ಸಿ ಪನ್ನು ’ನನ್ನ ಸೆಕ್ಸ್ ಲೈಫು ಅಷ್ಟು ಆಸಕ್ತಿದಾಯಕವಾಗಿಲ್ಲ ಹಾಗಾಗಿ ಕರಣ್ ಜೋಹರ್ ನನ್ನನ್ನ ಕರೆಯೋದಿಲ್ಲ’ ಅಂತ ಉತ್ತರಿಸಿದ್ದಾರೆ. ತಾಪ್ಸಿ ಪನ್ನು ಬಾಲಿವುಡ್ ನಲ್ಲಿ ಬ್ಯುಸಿ ಇರುವ ನಟಿ. ಶಾರುಖಾನ್ ಜೊತೆಗೆ ’ಡಂಕಿ’ ಸಿನಿಮಾದಲ್ಲಿ ನಟಿಸಿದ್ದು, ಇದರ ಜೊತೆಗೆ ’ಬ್ಲರ್’ ’ಹಸೀನಾ ದಿಲ್ರುಬಾ 2’, ’ತಡ್ಕ’ ಮೊದಲಾದ ಸಿನಿಮಾಗಳು ಚಾಲ್ತಿಯಲ್ಲಿವೆ.

Leave A Reply

Your email address will not be published.