ಹೆಂಗಸರು ಎಂದಿಗೂ ಈ ಗುಟ್ಟುಗಳನ್ನು ಮಾತ್ರ ಗಂಡನೊಂದಿಗೆ ಶೇರ್ ಮಾಡುವುದೇ ಇಲ್ಲ ಯಾವ ವಿಷಯಗಳು ಗೊತ್ತಾ?

ಗಂಡ ಹೆಂಡತಿ ಸಂಬಂಧ ಬಹಳ ಪವಿತ್ರವಾದದ್ದು. ಅದರಲ್ಲೂ ಭಾರತದಲ್ಲಿ ದಂಪತಿಗಳ ಸಂಬಂಧ ಬಹಳ ವಿಶೇಷವಾದದ್ದು. ಗಂಡು ಹಾಗೂ ಹೆಣ್ಣಿನ ಮನೆಯವರು ಒಪ್ಪಿ ಮದುವೆ ಮಾಡುತ್ತಾರೆ ಸಂಪ್ರದಾಯಬದ್ಧವಾಗಿ ಮದುವೆ ನೆರವೇರಿದ ಮೇಲೆ ಯಾವುದೇ ಕಷ್ಟ- ಸುಖ ನೋವು -ನಲಿವು ಇದ್ದರು ಗಂಡ ಹೆಂಡತಿ ಸಮಾನವಾಗಿ ಹಂಚಿಕೊಂಡು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಜೀವನ ಪರ್ಯಂತ ಜೊತೆಯಾಗಿ ಇರುವುದೇ ಸಂಸಾರ.

ಗಂಡ ಹೆಂಡತಿ ಎನ್ನುವ ವಿಷಯದ ಬಗ್ಗೆ ಆಚಾರ್ಯ ಚಾಣಕ್ಯ ಅವರ ನೀತಿಯಲ್ಲಿಯೂ ಕೂಡ ಪ್ರಸ್ತಾಪಗಳಿವೆ. ಚಾಣಕ್ಯರ ನೀತಿ ಪಾಠಗಳು ಇಂದಿಗೂ ನಮ್ಮ ಜೀವನಕ್ಕೆ ಅನ್ವಯವಾಗುವಂತವು ಸಂಸಾರದಲ್ಲಿ ಗಂಡ ಆದವನು ಹೇಗಿರಬೇಕು ಪತ್ನಿ ಗಂಡನ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆಯೂ ಕೂಡ ಚಾಣಕ್ಯ ವಿವರಿಸಿದ್ದಾನೆ. ಸಾಮಾಜಿಕವಾಗಿ ಆರ್ಥಿಕವಾಗಿ ಯಾವ ರೀತಿ ಇನ್ನೊಬ್ಬರೊಂದಿಗೆ ಸಹಕರಿಸಿಕೊಂಡು ಬದುಕಬೇಕು ಎನ್ನುವುದು ಚಾಣಕ್ಯ ನೀತಿಯಲ್ಲಿ ಬಹಳ ಅರ್ಥವತ್ತಾಗಿ ವಿವರಿಸಲಾಗಿದೆ. ನಮ್ಮ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಂಡರೆ ಸಂಸಾರ ಎಷ್ಟು ಸುಖಮಯವಾಗಿ ಇರುತ್ತದೆ ಎಂಬುದನ್ನು ಕೂಡ ವಿವರಿಸಿದ್ದಾರೆ.

ಒಂದು ಸಂಸಾರದಲ್ಲಿ ಸುಖ ನೆಮ್ಮದಿ ಶಾಂತಿ ಇರಬೇಕಾದರೆ ಅಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ ಹಾಗೂ ಪ್ರೀತಿ. ಗಂಡ ಹೆಂಡತಿ ಪರಸ್ಪರ ಯಾವ ವಿಷಯವನ್ನು ಮುಚ್ಚು ಮರೆ ಮಾಡದೆ ಎಲ್ಲವನ್ನು ಬಹಿರಂಗವಾಗಿ ಹೇಳಿಕೊಂಡಾಗ ಮಾತ್ರ ಆ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಆದರೆ ಕೆಲವು ಗುಟ್ಟುಗಳನ್ನು ಇಟ್ಟುಕೊಳ್ಳುವುದೇ ಒಳ್ಳೆಯದು ಇಂದು ಚಾಣಕ್ಯ ನೀತಿಯಲ್ಲಿಯೂ ಹೇಳಲಾಗಿದೆ. ಹಾಗಾದ್ರೆ ಹೆಂಡತಿ ಗಂಡನ ಬಳಿ ಹೇಳದೆ ಇರುವಂತಹ ವಿಷಯಗಳು ಯಾವುದು ಗೊತ್ತಾ ಬನ್ನಿ ನೋಡೋಣ.

ಹೆಂಡತಿಯಾದವಳು ತನ್ನ ಕ್ರಷ್ ಬಗ್ಗೆ ಎಂದಿಗೂ ಹೇಳುವುದಿಲ್ಲ. ಮೋಹ ಎನ್ನುವುದು ಯಾರನ್ನು ಬಿಡುವುದಿಲ್ಲ ಹುಡುಗರು ಮಾತ್ರ ಹುಡುಗಿಯರನ್ನ ನೋಡುತ್ತಾರೆ ಅನ್ನೋದು ತಪ್ಪು. ಮಹಿಳೆಯರು ಕೂಡ ಹುಡುಗರನ್ನ ನೋಡಿ ಇಷ್ಟ ಪಡುತ್ತಾರೆ. ಮದುವೆಯಾದ ನಂತರ ಈ ವಿಷಯದ ಬಗ್ಗೆ ಪತಿಯೊಂದಿಗೆ ಎಂದಿಗೂ ಆಕೆ ಚರ್ಚೆ ಮಾಡುವುದಿಲ್ಲ.

ಗಂಡನ ನಿರ್ಧಾರವನ್ನು ಒಪ್ಪಿಕೊಳ್ಳುವ ಸ್ತ್ರೀ; ಗಂಡ ಹೆಂಡತಿ ಹೊಂದಾಣಿಕೆಯಿಂದ ಜೀವನ ನಡೆಸಿಕೊಂಡು ಹೋಗುತ್ತಿದ್ದರೆ ಮಾತ್ರ ಆ ಜೀವನದಲ್ಲಿ ಸಾರ ಉಳಿಯಲು ಸಾಧ್ಯ ಎನ್ನುವುದು ಮಹಿಳೆಗೆ ಚೆನ್ನಾಗಿ ಗೊತ್ತು. ಹಾಗಾಗಿ ಗಂಡನ ನಿರ್ಧಾರ ಕೆಲವು ಆಕೆಗೆ ಸರಿ ಬರದೇ ಇದ್ದರೂ ಕೂಡ ಯಾವುದೇ ಕಲಹ ಏರ್ಪಡಬಾರದು ಎನ್ನುವ ಕಾರಣಕ್ಕೆ ಗಂಡನ ನಿರ್ಧಾರವನ್ನು ಪತ್ನಿ ಬೆಂಬಲಿಸುತ್ತಾಳೆ.

ಅನಾರೋಗ್ಯವನ್ನು ಹೇಳಿಕೊಳ್ಳುವುದಿಲ್ಲ; ದೊಡ್ಡ ಕಾಯಿಲೆ ಬಂದ್ರೆ ಎಲ್ಲರಿಗೂ ಅರ್ಥವಾಗಬಹುದು. ಆದರೆ ಸಣ್ಣ ಪುಟ್ಟ ನೋವು ಅಥವಾ ದೈಹಿಕ ಬದಲಾವಣೆಗಳನ್ನು ಹೆಂಡತಿ ಯಾವಾಗಲೂ ಮುಚ್ಚಿಡುತ್ತಾಳೆ. ತನಗೆ ತಲೆನೋವು, ಕಾಲು ನೋವು, ಸೊಂಟ ನೋವು ಇಂತಹ ವಿಷಯಗಳನ್ನು ಎಂದಿಗೂ ಗಂಡನ ಮುಂದೆ ತೋರಿಸಿಕೊಳ್ಳದೆ ಆಕೆ ಕೆಲಸದಲ್ಲಿಯೇ ನಿರತಳಾಗಿರುತ್ತಾಳೆ. ತನ್ನ ನೋವು ಗಂಡನಿಗೆ ತಿಳಿಯಬಾರದು ಎನ್ನುವುದು ಆಕೆಯ ಉದ್ದೇಶ.

ಕುಟುಂಬದ ರಹಸ್ಯ ಮುಚ್ಚಿಡುತ್ತಾಳೆ; ಗಂಡ ಆಫೀಸ್ ಗೆ ಹೋದ ನಂತರ ಮನೆಯಲ್ಲಿ ಸಾಕಷ್ಟು ಘಟನೆಗಳು ನಡೆಯಬಹುದು. ಅತ್ತೆ, ಮಾವ, ನಾದಿನಿ, ಮೈದುನ ಇವರೆಲ್ಲ ಇರುವ ಕುಟುಂಬವಾದರೆ ಅಲ್ಲಿ ಕೆಲವು ಮಾತುಗಳು ಬರಬಹುದು. ಆದರೆ ಗಂಡ ಬರುತ್ತಿದ್ದಂತೆ ಈ ಎಲ್ಲಾ ವಿಷಯವನ್ನು ಆತನಿಗೆ ಹೇಳುವುದಿಲ್ಲ ಇರುವ ತಲೆನೋವಿನ ಜೊತೆ ಸಂಸಾರದ ವಿಷಯವನ್ನು ಕೂಡ ಹೇಳಿ ಅವರಿಗೆ ತೊಂದರೆ ಕೊಡಬಾರದು ಎನ್ನುವ ಕಾರಣಕ್ಕೆ ಮನೆಯಲ್ಲಿ ನಡೆದ ಘಟನೆಗಳನ್ನೆಲ್ಲ ವಿವರಿಸುವುದಿಲ್ಲ ಆಕೆ.

ತವರಿನ ಗುಟ್ಟು ರಟ್ಟು ಮಾಡಿದ ಸ್ತ್ರೀ; ಹೌದು ಮಹಿಳೆಗೆ ತಾನು ಹುಟ್ಟಿ ಬೆಳೆದ ಮನೆಯನ್ನ ಬಿಟ್ಟು ಗಂಡನ ಮನೆ ಸೇರಿದ ಮೇಲೆ ತವರಿನ ಬಗ್ಗೆ ಸಾಕಷ್ಟು ಭಾವನೆಗಳು ಇರುತ್ತವೆ ಆದರೆ ಯಾವುದೇ ಕಾರಣಕ್ಕೂ ತವರಿನ ಗುಟ್ಟನ್ನ ಗಂಡನ ಮುಂದೆ ಹೇಳಿಕೊಳ್ಳುವುದಿಲ್ಲ ಹೆಂಡತಿ. ಸಣ್ಣ ಪುಟ್ಟ ಸಮಸ್ಯೆಗಳನ್ನೆಲ್ಲ ತಾನೇ ನಿವಾರಿಸಲು ಪ್ರಯತ್ನ ಪಡುತ್ತಾಳೆ, ಹೊರತು ತನ್ನ ಮನೆಯ ವಿಷಯಗಳನ್ನೆಲ್ಲ ಗಂಡನೊಂದಿಗೆ ಹಂಚಿಕೊಳ್ಳುವುದಿಲ್ಲ. ಒಬ್ಬ ಮಹಿಳೆ ಈ ಎಲ್ಲವನ್ನು ಮಾಡುವುದು ಕೇವಲ ತನ್ನ ಸಂಸಾರ ಸುಖವಾಗಿರಬೇಕು ಸಂತೋಷದಿಂದ ಇರಬೇಕು ಎನ್ನುವ ಉದ್ದೇಶಕ್ಕೆ ಹೊರತು ಯಾವುದೇ ಸ್ವಾರ್ಥದಿಂದಲ್ಲ.

Leave A Reply

Your email address will not be published.