ಅಭಿಮಾನಿಯ ಎದೆಮೇಲೆ ಮೂಡಿದ ತನ್ನ ಹೆಸರಿನ ಹಚ್ಚೆ ನೋಡಿ ಭಾವುಕರಾದ ಗಣಿ!

ಸ್ಯಾಂಡಲ್ ವುಡ್ ನ ಹೆಸರಾಂತ ನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಒಬ್ಬರು ಇವರಿಗೆ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಗಣಿ ಅವರಿಗೆ ಇರುವ ಅಭಿಮಾನಿಗಳಿಗೆ ಲೆಕ್ಕವಿಲ್ಲ. ಟಿವಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾಗಿನಿಂದಲೂ ಗಣಿ ಅವರು ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ಇನ್ನು ಸಿನಿಮಾಕ್ಕೆ ಪ್ರವೇಶ ಮಾಡಿದ ಮೇಲಂತೂ ಕನ್ನಡಿಗರ ಮೆಚ್ಚಿನ ನಟ ಎನಿಸಿದ್ದಾರೆ.

ಗಣಿ ಅಭಿನಯದ ಮುಂಗಾರು ಮಳೆ ಸಿನಿಮಾ ವನ್ನ ಇವತ್ತಿಗೂ ಯಾರು ಮರೆಯೋದಕ್ಕೆ ಸಾಧ್ಯವೇ ಇಲ್ಲ ಈ ಸಿನಿಮಾದ ಮೂಲಕವೇ ಇನ್ನಷ್ಟು ಹೆಸರು ಗಳಿಸಿಕೊಂಡ ಗಣೇಶ್ ಹಲವು ಪ್ರಾಜೆಕ್ಟ್ ನಲ್ಲಿ ಈಗಲೂ ಬ್ಯುಸಿ ಇದ್ದಾರೆ. ಇತ್ತೀಚೆಗೆ ಗಣೇಶ್ ಅಭಿನಯದ ಗಾಳಿಪಟ 2 ಸಿನಿಮಾ ರಿಲೀಸ್ ಆಗಿದೆ. ಈಗಾಗಲೇ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿರುವ ಗಾಳಿಪಟ 2 ಇನ್ನಷ್ಟು ದಿನ ಓಡುವ ನಿರೀಕ್ಷೆ ಇದೆ.

ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಅವರ ಕಾಂಬಿನೇಷನ್ ನಲ್ಲಿ ಯಾವುದೇ ಸಿನಿಮಾ ಮೂಡಿಬಂದ್ರೆ ಅದರ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿರುತ್ತವೆ, ಅದರಂತೆ ಗಾಳಿಪಟ ಟು ಕೂಡ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಮೂರು ಯುವಕರ ಸುತ್ತ ನಡೆಯುವ ಕಥೆಯನ್ನು ಆಧರಿಸಿ ಗಾಳಿಪಟ ಸಿನಿಮಾ ನಿರ್ಮಾಣವಾಗಿತ್ತು. ಅದರಲ್ಲಿ ನಟ ಗಣೇಶ್ ನಟ ದಿಗಂತ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಅಭಿನಯಿಸಿದ್ರು. ಇದೀಗ ರಾಜೇಶ್ ಕೃಷ್ಣನ್ ಅವರ ಜಾಗದಲ್ಲಿ ಪವನ್ ಕುಮಾರ್ ನಟಿಸಿದ್ದಾರೆ ಉಳಿದಂತೆ ಗಣೇಶ ಹಾಗೂ ದಿಗಂತ್ ಗಾಳಿಪಟ 2 ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಬಹಳ ದಿನಗಳಿಂದ ಕಾಯುತ್ತಿದ್ದ ಗಣೇಶ ಅಭಿಮಾನಿಗಳಿಗೆ ಗಾಳಿಪಟ 2 ಚಿತ್ರ ಸಂತಸವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಜೊತೆ ನಿಂತು ಗಣೇಶ್ ಮಾಧ್ಯಮಕ್ಕೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ನಟ ಗಣೇಶ್ ಭಾವುಕರಾದರು ಇದಕ್ಕೆ ಕಾರಣ ಅವರ ಅಭಿಮಾನಿಗಳು.

ಹೌದು, ಈಗಾಗಲೇ ಹೇಳಿದಂತೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಅವರು ತಮ್ಮ ಅಭಿಮಾನಕ್ಕೆ ಸಾಕ್ಷಿಯಾಗಿ ಗಣೇಶ್ ಅವರ ಹೆಸರನ್ನು ಕೈ ಮೇಲೆ, ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹೀಗೆ ಅಭಿಮಾನಿಗಳ ಮೈಮೇಲೆ ತನ್ನ ಹೆಸರಿನ ಟ್ಯಾಟೂವನ್ನು ನೋಡಿ ನಟ ಗಣೇಶ್ ಭಾವುಕರಾದರು ‘ಇವರ ಈ ಅಭಿಮಾನಕ್ಕೆ ಪ್ರೀತಿಗೆ ನನ್ನ ಬಾಯಿಂದ ಮಾತುಗಳೇ ಬರುತ್ತಿಲ್ಲ ನಾನು ಇನ್ನಷ್ಟು ಉತ್ತಮ ಚಿತ್ರ ಕೊಡುತ್ತೇನೆ ಎಂದು ಹೇಳಬಹುದು ಅಷ್ಟೇ ಅದನ್ನು ಬಿಟ್ಟು ಬೇರೇನು ಮಾಡಲು ಸಾಧ್ಯವಿಲ್ಲ. ನನಗೆ ಸ್ನೇಹಿತರು, ಬಂದು ಬಳಗ ಎಲ್ಲರೂ ನನ್ನ ಅಭಿಮಾನಿಗಳೇ’ ಎಂದು ಬಹಳ ಭಾವಕರಾಗಿ ನಟ ಗಣೇಶ್ ಹೇಳಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಒಬ್ಬ ಅಭಿಮಾನಿ ನನಗೆ ಗಣೇಶ್ ಅಂದರೆ ಪ್ರಾಣಕ್ಕಿಂತ ಹೆಚ್ಚು ಎಂದು ತನ್ನ ಅಭಿಮಾನವನ್ನ ತೋರಿಸಿಕೊಂಡಿದ್ದಾನೆ. ಆತ ಗಣೇಶ್ ಅವರ ಹೆಸರನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದು ಗಣೇಶ್ ಅವರ ಮೇಲಿನ ಪ್ರೀತಿಯನ್ನು ಅಭಿಮಾನವನ್ನು ಮೆರೆದಿದ್ದಾನೆ. ಅಭಿಮಾನಿಗಳ ಜೊತೆಗೆ ಅತ್ಯಂತ ಸರಳವಾಗಿ ಬೆರೆಯುವ ನಟ ಗಣಿ ತನಗೆ ಅಭಿಮಾನಿಗಳ ಪ್ರೀತಿ ಇದ್ರೆ ಸಿನಿಮಾದಲ್ಲಿ ದುಡಿಯುವ ಹಣ ಯಾವ ಲೆಕ್ಕಕ್ಕೂ ಇಲ್ಲ ಅಂತ ಹೇಳಿದ್ದಾರೆ.

Leave A Reply

Your email address will not be published.