ನಮಗೆ ಸೋನು ಬಿಟ್ಟರೆ ಬೇರೆ ಯಾರು ಗೊತ್ತಿಲ್ಲ ಎಂದ ಪ್ರೇಕ್ಷಕರು: ಬಿಗ್ ಬಾಸ್ ನೋಡಿದವರ ಪ್ರತಿಕ್ರಿಯೆ ಹೇಗಿದೆ ಗೊತ್ತೇ?

ದಿನ ಕಳೆದಂತೆ ಬಿಗ್ ಬಾಸ್ ಹೆಚ್ಚು ಹೆಚ್ಚು ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕುತ್ತಿದೆ.  ’ನಾನು ಯಾರು?’ ಎನ್ನುವ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮನ್ನ ತಾವು ಪರಿಚಯ ಮಾಡಿಕೊಳ್ಳುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳ ಆಟ ಶುರುವಾಗಿದೆ. ಇನ್ನು 24 ಗಂಟೆಗಳ ಪ್ರಸಾರವಾಗುವ ಬಿಗ್ ಬಾಸ್ ಶೋವನ್ನು ವೂಟ್ ಸೆಲೆಕ್ಟ್ ನಲ್ಲಿ ನೋಡಬಹುದು 16 ಜನ ಬೇರೆ ಬೇರೆ ಕ್ಷೇತ್ರದ ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ನಲ್ಲಿ ಇದ್ದಾರೆ.

ಇನ್ನು ಈ ಬಾರಿ ಬಿಗ್ ಬಾಸ್ ನಲ್ಲಿ ಸೆಲೆಕ್ಟ್ ಆದ ಸ್ಪರ್ಧಿಗಳು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡವರೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಿನಿಮಾ ಅಥವಾ ಇತರ ಮನೋರಂಜನ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಪ್ರೇಕ್ಷಕರು ಅವರದೇ ಆದ ಒಪೀನಿಯನ್ ನೀಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಅನಿಸಿಕೆಗಳನ್ನು ಹೇಳಿದ್ದಾರೆ. ಇನ್ನು ಈ ಬಾರಿ ಪ್ರಸಾರವಾಗುತ್ತಿರುವ ಓಟಿಟಿ ವರ್ಷನ್ ಎಲ್ಲರಿಗೂ ನೋಡಲು ಲಭ್ಯವಾಗುವುದಿಲ್ಲ. ಹಾಗಾಗಿ ಕೆಲವರಿಗೆ ಈ ವಿಷಯದ ಬಗ್ಗೆ ಬೇಸರವೂ ಇದೆ.

ಸೋನು ಗೌಡ ಮಾತ್ರ ಗೊತ್ತು!

ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಹೋಗಿರುವವರಲ್ಲಿ ಸಾಕಷ್ಟು ಜನರಿಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ ಮಾತ್ರ ಚಿರಪರಿಚಿತ. ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಒಂದು ವೈರಲ್ ಆಗಿ ಅವರು ಸಾಕಷ್ಟು ಟ್ರೋಲ್ ಗಳಿಗೆ ಗುರಿಯಾಗಿದ್ರು. ಆ ಕಾರಣದಿಂದಾಗಿಯೂ ಸೋನು ಶ್ರೀನಿವಾಸ್ ಗೌಡ ಸಾಕಷ್ಟು ಜನರಿಗೆ ಪರಿಚಯವಾಗಿದ್ದಾರೆ. ಆದರೆ ಹಲವರಿಗೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಹೋಗಿರುವುದಕ್ಕೆ ಬೇಸರವಿದೆ. ಬೇರೆ ಯಾವ ಸ್ಪರ್ದಿಯು ಸಿಗಲಿಲ್ವಾ? ಅವರನ್ನು ಯಾಕೆ ಕರೆದುಕೊಂಡು ಹೋಗಬೇಕಿತ್ತು ಅವರು ಬಿಗ್ ಬಾಸ್ ಗೆ ಹೋಗುವ ಅರ್ಹತೆಯನ್ನು ಹೊಂದಿಲ್ಲ ಅಂತ ಹಲವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಇನ್ನು ಕೆಲವು ವಿದ್ಯಾರ್ಥಿಗಳು ಕೂಡ ಈ ಬಗ್ಗೆ ಮಾತನಾಡಿದ್ದು ನಮಗೂ ಅವಕಾಶಗಳನ್ನು ಕೊಡಬೇಕು. ಅಲ್ಲದೆ ಬಿಗ್ ಬಾಸ್ ನಲ್ಲಿ ಸೃಜನ್ ಲೋಕೇಶ್ ರಂತ ಸೆಲೆಬ್ರಿಟಿಗಳು ಇದ್ದರೆ ಶೋ ಹೆಚ್ಚು ಮನರಂಜನೆಯಿಂದ ಕೂಡಿರುತ್ತೆ ಈ ಬಾರಿ ಅಷ್ಟು ಇಂಟರೆಸ್ಟಿಂಗ್ ಆಗಿ ಇಲ್ಲ ಅಂತ ಹೇಳಿದ್ದಾರೆ.

ಇನ್ನು ಟಿವಿಯಲ್ಲಿ ಬಿಗ್ ಬಾಸ್ ಪ್ರಸಾರವಾಗದೆ ಇರೋದಕ್ಕೆ ಹಲವರಿಗೆ ಬೇಸರವೂ ಇದೆ. ನಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ, ಇಂಟರ್ನೆಟ್ ಇಲ್ಲ. ಹಾಗಾಗಿ ವೂಟ್ ಚಂದಾದಾರಿಕೆಯನ್ನು ತೆಗೆದುಕೊಳ್ಳುವುದಕ್ಕೂ ಆಗೋಲ್ಲ ಟಿವಿಯಲ್ಲಿ ಈ ಶೋ ಪ್ರಸಾರವಾಗಿದ್ದರೆ ಚೆನ್ನಾಗಿತ್ತು ಅಂತ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಶಿವರಾಜ್ ಕುಮಾರ್ ಹಾಗೂ ಪುನೀತ್ ಅವರ ಅಪ್ಪಟ ಅಭಿಮಾನಿ ಕಾಫಿ ನಾಡ ಚಂದು ತಮ್ಮ ಬರ್ತಡೇ ಸಾಂಗ್ ಮೂಲಕ ಹಿಟ್ ಆದವರು. ಒಬ್ಬಆಟೋ ಡ್ರೈವರ್ ಆಗಿರುವ ಚಂದು ಇಂದು ಸೋಶಿಯಲ್ ಮೀಡಿಯಾ ವೈರಲ್ ಸ್ಟಾರ್ ಎನಿಸಿದ್ದಾರೆ. ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಅವರು ಇದ್ದರೆ ಬಿಗ್ ಬಾಸ್ ಶೋ ಸಾಕಷ್ಟು ಮನೋರಂಜನೆಯಿಂದ ಕೂಡಿರುತ್ತಿತ್ತು ಎನ್ನುತ್ತಾರೆ ಪ್ರೇಕ್ಷಕರು. ಅಲ್ಲದೆ ಕಿಚ್ಚ ಸುದೀಪ್ ಅವರನ್ನು ನೋಡೋದಕ್ಕಾಗಿಯೇ ಬಿಗ್ ಬಾಸ್ ಶೋವನ್ನ ನೋಡುವವರು ಸಾಕಷ್ಟು ಜನ ಇದ್ದಾರೆ. ಈ ಶೋ ವನ್ನು ಅದ್ಭುತವಾಗಿ ಹೋಸ್ಟ್ ಮಾಡುತ್ತಾರೆ ಹಾಗಾಗಿ ಎಲ್ಲರೂ ಕಿಚ್ಚ ಸುದೀಪ್ ಅವರ ಬರುವಿಕೆಗಾಗಿ ಕಾಯ್ತಾ ಇದ್ದಾರೆ.

Leave A Reply

Your email address will not be published.