ಶುರುವಾಯ್ತು ಬಿಗ್ ಬಾಸ್ ಕಿರಿಕ್; ನನಗೆ ಏಜ್ ಆಗಿರ್ಬಹುದು, ದಪ್ಪಇರ್ಬಹುದು ನಾನು ಯಾವುದರಲ್ಲೂ ಕಮ್ಮಿ ಇಲ್ಲ;  ವಾಯ್ಸ್ ರೈಸ್ ಮಾಡಿದ ಆರ್ಯವರ್ಧನ್!

ಬಿಗ್ ಬಾಸ್ ಮನೆಯಲ್ಲಿ ಆಗಲೇ ಕಿರಿಕ್, ಫೈಟಿಂಗ್, ಗುದ್ದಾಟ ಶುರುವಾಗಿದೆ. ಇವೆಲ್ಲವೂ ಟಾಸ್ಕ್ ನಲ್ಲಿ ನಡೆಯುವ ಸಾಮಾನ್ಯವಾಗಿ ವಿಷಯ. ಆದರೆ ಕೆಲವರು ವಯಕ್ತಿಕವಾಗಿ ದ್ವೇಷ ಸಾಧಿಸುತ್ತಾರೆ. ಇದೀಗ ಬಿಗ್ ಬಾಸ್ ಕೊಟ್ಟಿರುವ ಒಂದು ಟಾಸ್ಕ್ ನಲ್ಲಿ ಕೋಟಿ ಆಸ್ತಿಯ ಸರದಾರ ಆರ್ಯವರ್ಧನ್ ಹಾಗೂ ಮತ್ತೋರ್ವ ಸ್ಪರ್ದಿ ಉದಯ ಸೂರ್ಯ ಅವರ ನಡುವೆ ಕಿತ್ತಾಟ ಶುರುವಾಗಿದೆ.

ಬಿಗ್ ಬಾಸ್ ಓಟಿಟಿ ಶೋ ನಲ್ಲಿ ಇರುವ ಸ್ಪರ್ಧಿಗಳು ಎಲ್ರೂ ತಾವು ಟ್ರೋಫಿ ಗೆಲ್ಬೇಕು ಅಂತಲೇ ಮನೆಯೊಳಗೆ ಬಂದಿರುತ್ತಾ.ರೆ ಹಾಗಾಗಿ ಪ್ರತಿಯೊಂದು ಟಾಸ್ಕ್ ನಲ್ಲಿ ತಾವೇ ಗೆಲ್ಲಬೇಕು ಅನ್ನೋದು ಪ್ರತಿಯೊಬ್ಬರ ಇಂಗಿತವಾಗಿರುತ್ತೆ. ಬಿಗ್ ಬಾಸ್ ಈ ದಿನ ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರ ಅನ್ವಯ ಸ್ಟೂಲ್ ಮೇಲೆ ನಿಂತು ತಿರುಗುವ ಕಂಬಿಯಿಂದ ಸ್ಪರ್ಧಿ ಪಾರಾಗಬೇಕು. ಉಳಿದವರು ವ್ಯಕ್ತಿಯನ್ನು ಸ್ಟೂಲ್ ನಿಂದ ಬೀಳಿಸಲು ಪ್ರಯತ್ನಿಸಬೇಕು. ಇಲ್ಲಿ ಪ್ರತಿ ತಂಡದ ಸದಸ್ಯರೂ ಕಂಬಿಯಿಂದ ಪಾರಾಗುವ ಹವಣಿಕೆಯಲ್ಲಿ ಇದ್ದಾರೆ. ಟಾಸ್ಕ್ ಮಾಡುವ ಸಂದರ್ಭದಲ್ಲಿ ಗುರೂಜಿ, ಉದಯ ಸೂರ್ಯ ಅವರನ್ನ ತಳ್ಳಿದ್ದಾರೆ ಎಂದು ಉದಯ್ ಆರೋಪ ಮಾಡಿದ್ದಾರೆ. ಮೊದಮೊದಲು ಕೇವಲ ಸಣ್ಣದಾಗಿ ಆರಂಭವಾದ ಮಾತುಕತೆ ನಂತರ ದೊಡ್ಡ ಜಗಳಕ್ಕೆ ತಿರುಗಿದೆ. ಉದಯ ಸೂರ್ಯ ಹಾಗೂ ಗುರೂಜಿ ಕಿತ್ತಾಡಿಕೊಂಡಿದ್ದಾರೆ.

ಆರ್ಯವರ್ಧನ್ ಗುರೂಜಿ ಕೋಪಗೊಂಡಿದ್ದು ‘ನಾನು ಉದಯ ಸೂರ್ಯ ಅವರನ್ನ ತಳ್ಳಿಲ್ಲ’ ಅಂತ ಹೇಳಿದ್ದಾರೆ ಆದರೆ ಉದಯ ಸೂರ್ಯ ಇನ್ನಷ್ಟು ವಾಯ್ಸ್ ರೈಸ್ ಮಾಡಿದ್ದಾರೆ. ಗುರುಜಿ ತಳ್ಳಿದ್ದಾಗಿ ಕಿರುಚಾಡಿದ್ದಾರೆ. ಇದಕ್ಕೆ ಗುರೂಜಿ ’ನಾನು ತಳ್ಳಿದ್ರೆ ನೀನು 25 ಅಡಿ ದೂರ ಹೋಗಿ ಬೀಳ್ತಿಯಾ’ ಅಂತ ಉದಯ ಸೂರ್ಯ ಅವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಅಲ್ಲದೆ ‘ನನಗೆ ಏಜ್ ಆಗಿರಬಹುದು ದಪ್ಪವಿರಬಹುದು ಆದರೆ ನಾನು ಯಾವುದರಲ್ಲೂ ಕಮ್ಮಿ ಇಲ್ಲ ‘ ಅಂತ ಗುರೂಜಿ ಆವಾಜ್ ಹಾಕಿದ್ದಾರೆ. ಒಟ್ಟಿನಲ್ಲಿ ಈ ಎಲ್ಲಾ ಕಿರಿಕ್ ಗಳ ನಡುವೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಯಾರು? ಇಂದಿನ ಎಪಿಸೋಡ್ ನೋಡಿದ್ರೆ ಇದಕ್ಕೆ ಉತ್ತರ ಸಿಗುತ್ತೆ.

Leave A Reply

Your email address will not be published.