ಸಪ್ತರ್ಷಿಗಳು ಯಾರು ಗೊತ್ತಾ? ಅವರ ಹಿನ್ನೆಲೆ ತಿಳಿದುಕೊಂಡಿದ್ದೀರಾ? ಇಲ್ಲಿದೆ ನೋಡಿ 7 ಖುಷಿ ಮುನಿಗಳ ವಿವರಣೆ!

ಪುರಾಣ ಕಾಲದಿಂದಲೂ 7 ಋಷಿಗಳ ಉಲ್ಲೇಖಗಳನ್ನ ನೀವು ಕೇಳಿರುತ್ತೀರಿ ಸಪ್ತರ್ಷಿಗಳು ಅಂದ್ರೆ ಯಾರು ಅವರ ಹಿನ್ನೆಲೆ ಏನು? ಅವರನ್ನ ಯಾಕೆ ನಾವು ಪೂಜಿಸುತ್ತೇವೆ ಎಂಬಿತ್ಯಾದಿ ವಿಷಯಗಳು ಹಲವರಿಗೆ ತಿಳಿದಿಲ್ಲ ಕೇವಲ ಸಪ್ತರ್ಷಿಗಳು ಎನ್ನುವ ಹೆಸರನ್ನಷ್ಟೇ ಕೇಳಿರುತ್ತೀರಿ. ಈ ಏಳು ಋಷಿಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ತಮ್ಮ ಯೋಗದ ಶಕ್ತಿಯಿಂದ ದೀರ್ಘಾಯುಷ್ಯಗಳಾಗಿರುವ ಸಪ್ತ ಋಷಿಗಳು ಸಾವಿರದ ಅಮರರು ಎಂದು ಹೇಳಲಾಗುತ್ತೆ. ಮನುಷ್ಯನಿಗೆ ಮಾರ್ಗದರ್ಶನ ನೀಡುವುದಕ್ಕಾಗಿಯೇ ದೇವಾನುದೇವತೆಗಳು ಋಷಿಮುನಿಯರನ್ನ ಸೃಷ್ಟಿ ಮಾಡಿದ್ದಾರೆ ಎನ್ನುವ ನಂಬಿಕೆಯೂ ಇದೆ. ಉಪನಿಷತ್ತಿನಲ್ಲಿ ಸಪ್ತ ಋಷಿಗಳ ಬಗ್ಗೆ ಉಲ್ಲೇಖಗಳಿವೆ ಆ ಸಪ್ತ ಋಷಿಗಳು ಯಾರು ಎನ್ನುವುದನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ.

ವಿಶ್ವಮಿತ್ರ ಮುನಿ;

ಸಪ್ತ ಋಷಿಗಳಲ್ಲಿ ಬೇರೆ ಯಾರ ಹೆಸರು ಗೊತ್ತಿಲ್ಲದಿದ್ದರೂ ವಿಶ್ವಾಮಿತ್ರ ಮುನಿಯ ಬಗ್ಗೆ ಎಲ್ಲರಿಗೂ ಗೊತ್ತಿರುತ್ತೆ ಗಾಯತ್ರಿ ಮಂತ್ರವನ್ನ ಆರಂಭಿಸಿದ್ದೆ ವಿಶ್ವಮಿತ್ರ ಋಷಿಗಳು. ಬ್ರಹ್ಮರ್ಷಿಗಳಾಗಿರುವ ವಿಶ್ವಾಮಿತ್ರರು ತಮ್ಮ ಸ್ವ ಅರ್ಹತೆಯಿಂದಲೇ ಬ್ರಹ್ಮರ್ಷಿಗಳದವರು ವಿಶ್ವಾಮಿತ್ರರು ಬ್ರಾಹ್ಮಣರಲ್ಲ ಇವರು ಕ್ಷತ್ರಿಯ ಧರ್ಮದವರು. ಹಾಗಾಗಿ ಅವರು ಒಬ್ಬ ಮಹಾನ್ ಗುರು ಎನಿಸಿಕೊಂಡಿದ್ದು ಅವರ ಸ್ವ ಪ್ರಯತ್ನದಿಂದ. ವಿಶ್ವಮಿತ್ರ ಹಾಗೂ ವಶಿಷ್ಠರ ನಡುವೆ ಒಮ್ಮೆ ಯುದ್ಧವಾಗುತ್ತೆ ಆಗ ವಿಶ್ವಮಿತ್ರರು ಇಂದು ಮುನಿ ಆಗಿರಲಿಲ್ಲ. ಈ ಯುದ್ಧದಲ್ಲಿ ವಿಶ್ವಾಮಿತ್ರ ವಸಿಷ್ಟರಿಂದ ಸೋಲನ್ನ ಅನುಭವಿಸುತ್ತಾರೆ ಆಗ ಅವರಿಗೆ ದೈಹಿಕ ಶಕ್ತಿಗಿಂತ ತಪಸ್ಸಿನ ಶಕ್ತಿಯೇ ಮುಖ್ಯವಾದದ್ದು ಎನ್ನುವುದು ಅರಿವಾಗುತ್ತದೆ. ನಂತರ ತನ್ನ ರಾಜ್ಯವನ್ನೆಲ್ಲ ದಾನ ಮಾಡಿ ತಾನು ಋಷಿಯಾಗಲು ಹೊರಡುತ್ತಾರೆ ತನ್ನ ಮೂಲ ಹೆಸರಾದ ಕೌಶಿಕ ಎನ್ನುವುದನ್ನ ಬದಲಾಯಿಸಿಕೊಂಡು ವಿಶ್ವಾಮಿತ್ರರಾಗುತ್ತಾರೆ ವಸಿಷ್ಠರಿಂದಲೇ ಬ್ರಹ್ಮಶ್ರೀ ಎನ್ನುವ ಬಿರುದನ್ನು ಪಡೆದುಕೊಳ್ಳುತ್ತಾರೆ.

ಭರದ್ವಜ ಮುನಿ;

ವೈದಿಕ ಕಾಲದ ಶ್ರೇಷ್ಠ ಋಷಿಗಳಲ್ಲಿ ಒಬ್ಬರು ಭರಧ್ವಜ ಮನೆಗಳು ಅಂಗೀರಸ ಮುನಿಯ ವಂಶಸ್ಥರು ಎನ್ನಲಾದ ಭಾರದ್ವಾಜರು ಆಯುರ್ವೇದವನ್ನು ಪ್ರಚುರಪಡಿಸಿದವರು. ಭರದ್ವಜ ಹಾಗೂ ಅಪ್ಸರ ಅವರ ಮಗನೇ ದ್ರೋಣಾಚಾರ್ಯ. ಗಂಗಾ ನದಿಯ ತಟದಲ್ಲಿ ಬರತರಾಜನಿಗೆ ಸಿಕ್ಕ ಭರಧ್ವಜ ಋಷಿಯನ್ನು ದತ್ತು ಮಗನಾಗಿ ಭರತ ಸಾಕಿದನು ಎಂದು ಹೇಳಲಾಗುತ್ತೆ.

ವಸಿಷ್ಠ ಮುನಿ;

ಅರುಂಧತಿಯ ಪತಿ ವಸಿಷ್ಠ ಮುನಿ ಮನ್ವಂತರದಲ್ಲಿರುವ ಸಪ್ತ ಋಷಿಗಳಲ್ಲಿ ಒಬ್ಬರು ವಸಿಷ್ಟ ಮುನಿಯನ ಬ್ರಹ್ಮನ ಮಾನಸ ಪುತ್ರ ಎಂದು ಹೇಳಲಾಗಿದೆ. ವಶಿಷ್ಠರು ಜ್ಯೋತಿಷ್ಯದ ಕುರಿತ ಗ್ರಂಥವನ್ನು ವಸಿಷ್ಠ ಸಂಹಿತೆಯನ್ನು ಬರೆದವರು. ಸೂರ್ಯವಂಶದ ರಾಜಗುರು ಇವರು. ಋಗ್ವೇದ ದವರು ವಸಿಷ್ಠ ಋಷಿಯನ್ನು ಪೂಜಿಸುತ್ತಾರೆ. ಯೋಗವಶಿಷ್ಟ ಗ್ರಂಥದಲ್ಲಿ ರಾಮ ವಸಿಷ್ಟ ಮಹರ್ಷಿಗಳಿಗೆ ಕೇಳಿದ ಲೌಕಿಕ ಪ್ರಶ್ನೆಗಳು ಹಾಗೂ ಅದರ ಉತ್ತರವನ್ನು ಉಲ್ಲೇಖಿಸಲಾಗಿದೆ.

ಕಶ್ಯಪ ಮುನಿ:

ಎಲ್ಲಾ ಮಾನವೀಯತೆಯ ತಂದೆ ಕಶ್ಯಪ ಎಂದು ಹೇಳಲಾಗುತ್ತದೆ. ಅಸುರ, ನಾಗ, ಗರುಡ, ಅಗ್ನಿ, ಆದಿತ್ಯ, ಆರ್ಯವಾನ್, ವರುಣ, ಮಿತ್ರ ಎಲ್ಲರ ತಂದೆ ಕಶ್ಯಪ ಮುನಿಗಳು ಎಂಬುದು ಕಶ್ಯಪ ಸಂಹಿತೆಯಲ್ಲಿ ದಾಖಲಾಗಿದೆ. ಬ್ರಹ್ಮನು ಕಶ್ಯಪ ಮಹರ್ಷಿಯನ್ನ ಸೃಷ್ಟಿಸಿದ ಮೇಲೆ ತನ್ನ ಕರ್ತವ್ಯವನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸಿದ ಮಹರ್ಷಿ ಇವರು. ಋಷಿ ಮಾರಿಚಯ ಮಗ ಹಾಗೂ ಬ್ರಹ್ಮನ ಮೊಮ್ಮಗ ಕಶ್ಯಪ ಮಹರ್ಷಿ, ಸಪ್ತ ಋಷಿಗಳಲ್ಲಿ ಕಶ್ಯಪ ಮುನಿಗೆ ವಿಶೇಷವಾದ ಸ್ಥಾನವಿದೆ.

ಗೌತಮ ಮುನಿ;

ಅಂಗೀರಸ ವಂಶಕ್ಕೆ ಸೇರಿದ ಗೌತಮ ಮುನಿ ಗೌತಮ ಧರ್ಮದ ಸೂತ್ರವನ್ನು ಹಾಗೂ ಋಗ್ವೇದ ಮತ್ತು ಸಾಮವೇದದ ಮಂತ್ರಗಳನ್ನು ಬರೆದವರು. ಬ್ರಹ್ಮದೇವನ ಪುತ್ರಿ ಅಹಲ್ಯಾಳನ್ನು ವಿವಾಹವಾದ ಮಹರ್ಷಿ ಗೌತಮರು ಬ್ರಹ್ಮನು ಹಾಕಿದ ಒಂದು ಪಂದ್ಯವನ್ನು ಗೆಲ್ಲುತ್ತಾರೆ. ಸೂಕ್ತ ಸಮಯದಲ್ಲಿ ಯಾರೋ ಭೂಮಿಯನ್ನು ಸುತ್ತುತ್ತಾರೋ ಅವರಿಗೆ ತನ್ನ ಮಕ್ಕಳನ್ನು ಕೊಟ್ಟು ಮದುವೆ ಮಾಡುತ್ತೇನೆ ಅಂತ ಬ್ರಹ್ಮ ಘೋಷಿಸುತ್ತಾನೆ. ಆಗ ಎಲ್ಲಾ ಋಷಿಮುನಿಗಳು ಈ ಶರತ್ತನ್ನ ಗೆಲ್ಲಲು ಸಾಕಷ್ಟು ಪ್ರಯತ್ನಿಸುತ್ತಾರೆ ಆದರೆ ಗೌತಮ ಮಹರ್ಷಿಗಳು ತಮ್ಮ ಚಾಣಾಕ್ಷತನದಿಂದ ಈ ಸವಾಲನ ಗೆಲ್ಲುತ್ತಾರೆ ಹಸುವಿನ ಸುತ್ತಲೂ ಸುತ್ತುತ್ತಾರೆ ಮಹರ್ಷಿ ಗೌತಮರು. ಆ ದೈವಿಕ ಹಸು ಸುತ್ತಿದ್ದು ಭೂಮಿಯನ್ನು ಸುತ್ತಿದಂತೆ ಆಗುತ್ತದೆ. ಹೀಗೆ ತನ್ನ ಬುದ್ಧಿವಂತಿಕೆಯಿಂದ ಗೌತಮ ಋಷಿ ಬ್ರಹ್ಮನ ಮಗಳನ್ನುವರಿಸುತ್ತಾರೆ.

ಅತ್ರಿ ಮುನಿ;

ಬ್ರಹ್ಮದೇವನ ಮಗ ಅತ್ರಿ ಮುನಿ ಪವಿತ್ರ ದಾರಗಳನ್ನು ಪ್ರತಿಪಾದಿಸಿ ಅವುಗಳ ಮಹತ್ವವನ್ನು ಹೇಳಿದ ಋಷಿ ಇವರು. ಅತ್ರಿ ಮುನಿಗಳ ಪತ್ನಿ ಅನಸೂಯ. ಇನ್ನು ಅತ್ರೀ ಮಹರ್ಷಿಗಳಿಂದ ಶ್ರೀರಾಮನಿಗೆ ವನವಾಸದಲ್ಲಿದ್ದಾಗ ಅನೇಕ ಧರ್ಮ ರಹಸ್ಯಗಳನ್ನ ತಮ್ಮ ಆಶ್ರಮದಲ್ಲಿ ಬೋಧಿಸಿದ್ದಾರೆ ಎಂದು ರಾಮಾಯಣದಲ್ಲಿಯೂ ಉಲ್ಲೇಖಿಸಲಾಗಿದೆ. ಪುರಾಣ ಪವಿತ್ರ ಅತ್ರಿ ಸಂಹಿತ ಮತ್ತು ಅತ್ರಿಸ್ಮೃತಿ ಎನ್ನುವ ಮಹಾನ್ ಕೃತಿಯನ್ನು ಬರೆದವರು ಅತ್ರಿಮುನಿಗಳು.

ಜಮದಗ್ನಿ;

ಕೋಪಕ್ಕೆ ಇನ್ನೊಂದು ಹೆಸರೇ ಜಮದಗ್ನಿ. ಹಾಗಾಗಿ ಈಗಲೂ ಯಾರಿಗಾದರೂ ಸಿಟ್ಟು ಬಂದರೆ ಜಮದಗ್ನಿಯ ಅವತಾರ ಎಂದೇ ಹೇಳುತ್ತಾರೆ. ವಿಷ್ಣುವಿನ ಅವತಾರವಾದ ಪರಶುರಾಮನ ತಂದೆ. ಭ್ರಗು ಋಷಿಯ ವಂಶಸ್ಥರಾದ ಜಮದಗ್ನಿಯ ಪತ್ನಿ ರೇಣುಕಾ. ಆಕೆಯ ಪವಿತ್ರತೆಯ ಕುರಿತಂತೆ ಕಥೆಯೇ ಇದೆ. ಕೈಯಲ್ಲಿ ಮಣ್ಣಿನ ಮಡಿಕೆಯನ್ನು ಮಾಡಿ ನೀರು ತರುತ್ತಿದ್ದ ರೇಣುಕಾ ಒಂದು ದಿನ ಕೊಳದ ಬಳಿ ಗಂಧರ್ವರನ್ನು ನೋಡಿ ನೋಡಿ ಆಕರ್ಷಿತವಾಗುತ್ತಾಳೆ. ಇದನ್ನ ಅರಿತ ಜಮದಗ್ನಿ ರೇಣುಕಾಳನ್ನು ಕೊಲ್ಲಲು ತನ್ನ ಮಕ್ಕಳಿಗೆ ಹೇಳುತ್ತಾನೆ. ಆದರೆ ಆತನ ಯಾವ ಮಕ್ಕಳು ಈ ಕೃ’ತ್ಯವನ್ನು ಮಾಡಲು ಒಪ್ಪುವುದಿಲ್ಲ. ಆಗ ಜಮದಗ್ನಿಯ ಮಗ ಪರಶುರಾಮ ಮಾತ್ರ ತಂದೆಯ ಮಾತಿನಂತೆ ತಾಯಿಯ ಶಿರಶ್ಚೇಧನ ಮಾಡುತ್ತಾನೆ .ಜಮದಗ್ನಿ ಮುನಿ ತನ್ನ ಮಾತನ್ನು ನಿರಾಕರಿಸಿದ ಉಳಿದ ಮಕ್ಕಳನ್ನು ಕೊಲ್ಲುತ್ತಾನೆ. ಹೀಗೆ ತನ್ನ ಸಿಟ್ಟಿನಿಂದ ಹೆಂಡತಿಯನ್ನೇ ಶಿರಶ್ಚೇಧನ ಮಾಡಿಸಿದ ಮುನಿ ಜಮದಗ್ನಿ.

Leave A Reply

Your email address will not be published.