ಪ್ರೋ ಕಬ್ಬಡಿ: ಹರಾಜಿನಲ್ಲಿ ತಮಿಳ್ ತಲೈವಾಸ್ ಪಾಲಾದ ಪವನ್ ಸೆಹ್ರಾವತ್; ಕಣ್ಣೀರಿಟ್ಟ ಬೆಂಗಳೂರು ಕೋಚ್!

ಜನರು ನೋಡೋದಕ್ಕೆ ಕಾದು ಕುಳಿತಿರುವ ಪ್ರೊ ಕಬಡ್ಡಿ ಸೀಸನ್ 9 ಇದೇ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ. ಈಗಾಗಲೆ ಪ್ರೊ ಕಬಡ್ಡಿಯ ಮೊದಲ ದಿನದ ಹರಾಜ್ ಕೂಡ ಮುಗಿದಿದೆ. ಈ ಹರಾಜಿನಲ್ಲಿ ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ಆಟಗಾರ ಸೆಹ್ರಾವತ್ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ತಮಿಳ್ ತಲೈವಾಸ್ ತಂಡಕ್ಕೆ ಸೇರಿಕೊಂಡಿದ್ದಾರೆ.

ಇತ್ತ ಬೆಂಗಳೂರು ಬುಲ್ಸ್ ಸ್ಟ್ರಾಂಗ್ ಆಟಗಾರನೊಬ್ಬನನ್ನು ಕಳೆದುಕೊಂಡಿದ್ದರೆ ಅತ್ತ ತಮಿಳ್ ತಲೈವಸ್ ತಂಡ ಇನ್ನಷ್ಟು ಸ್ಟ್ರಾಂಗ್ ಆಗಿದೆ. ಯಾಕಂದ್ರೆ ಹೈ ಪ್ಲೈಯರ್ ಪವನ್ ಸೆಹ್ರಾವತ್ ರನ್ನು ತಮಿಳ್ ತಲೈವಾಸ್ ತಂಡ ಭಾರಿ ಮೊತ್ತಕ್ಕೆ ಕೊಂಡುಕೊಂಡಿದೆ. ಹೌದು, ಇದು ಪ್ರೊ ಕಬ್ಬಡ್ಡಿಯಲ್ಲಿ ದಾಖಲೆಯ ಮೊತ್ತವಾಗಿದೆ. ಈ ಬಾರಿ ತಂದಗಳು ಕೋಟಿ ಲೆಕ್ಕದಲ್ಲಿ ಆಟಗಾರರ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಎಲ್ಲಾ ಆಟಗಾಗರು ಲಕ್ಷದಿಂದ ಕೋಟಿ ಮೊತ್ತಕ್ಕೆ ಹರಾಜಿನಲ್ಲಿ ಸೇಲ್ ಆಗಿದ್ದಾರೆ.

ಈ ವರೆಗೆ ಕೋಟಿ ಮೊತ್ತಕ್ಕೆ ಹರಾಜಿನಲ್ಲಿ ಕೊಂಡುಕೊಂಡಿದ್ದು ಒಬ್ಬ ಆಟಗಾರರನನ್ನು ಮಾತ್ರ. ಕಳೆದ ಸೀಸನ್​ನಲ್ಲಿ ಪರ್ದೀಪ್ ನರ್ವಾಲ್​ರನ್ನು ಯುಪಿ ಯೋಧಾ ತಂಡ 1.65 ಕೋಟಿಗೆ ಖರೀದಿ ಮಾಡಿತ್ತು. ಅದಾದ ಬಳಿಕ ಈಗ ಪವನ್ ಸೆಹ್ರಾವತ್ 2 ಕೋಟಿ 26 ಲಕ್ಷಕ್ಕೆ ಹರಾಜಿನಲ್ಲಿ ತಮಿಳ್ ತಲೈವಾ ತಂದವನ್ನ ಸೇರಿದ್ದಾರೆ. ಬೆಂಗಳೂರು ಬುಲ್ಸ್ ತಂಡದ ಗೆಲುವಿಗೆ ಕಾರಣವಾಗಿದ್ದ ಪವನ್ ಸೆಹ್ರಾವತ್ ಅವರನ್ನು ತಂಡ ಕಳೆದುಕೊಂಡಿದೆ. ಇನ್ನು ಈ ಹರಾಜ್ ನಲ್ಲಿ ಪವನ್ ಅವರನ್ನು ಕೈಬಿಟ್ಟಿದ್ದು ಯಾಕೆ ಅಂತ ಬೆಂಗಳೂರು ಬುಲ್ಸ್ ತಂಡದ ಕೋಚ್ ರಣದೀರ್ ಸಿಂಗ್ ಹೇಳಿದ್ದಾರೆ.

ಮಾಧ್ಯಮದ ಎದುರು ಈ ಹರಾಜು ಪ್ರಕ್ರಿಯೆ ಬಗ್ಗೆ ಮಾತನಾಡುವಾಗ, ಪವನ್ ಶೆಹ್ರಾವತ್ ಅವರನ್ನ ಯಾಕೆ ತಂದದಿಂದ ಕೈಬಿಟ್ರಿ ಎಂದು ಕೇಳುವಷ್ಟರಲ್ಲಿಯೇ ಕೋಚ್ ಕಣ್ಣಂಚು ಒದ್ದೆಯಾಗಿತ್ತು. ವಿಕಾಸ್‌ ಖಂಡೋಲಾರನ್ನು ಖರೀಧಿಸುವುದು ನಮ್ಮ ಉದ್ದೇಶವಾಗಿತ್ತು. ಸರತಿಯಲ್ಲಿ ಅವರ ಹೆಸರೇ ಮೊದಲು ಇತ್ತು. ನಂತರ ಪವನ್ ಅವರ ಹೆಸರಿತ್ತು. ಈ ಸಮಯದಲ್ಲಿ ತಮಿಳ್ ತಂಡ ಎರಡು ಕೋಟಿಗೂ ಅಧಿಕ ಮೌಲ್ಯಕ್ಕೆ ಪವನ್ ಅವರನ್ನ ಖರೀದಿಸಿತು. ಈ ಬಾರಿ ಪವನ್ ಅವರನ್ನು ಕೋಟಿ ಮೊತ್ತಕ್ಕೆ ಕೊಳ್ಳುತ್ತಾರೆ ಎನ್ನುವ ಹಿಂಟ್ ಸಿಕ್ಕಿತ್ತು. ಆದರೆ ನಮಮ್ ಕೈತಪ್ಪಿ ಹೋಗಿದ್ದಕ್ಕೆ ಬಹಳ ಬೇಸರವಿದೆ ಎಂದಿದ್ದಾರೆ.

ಇನ್ನು ಪವನ್ ಅವರನ್ನು ಕೋಚ್ ಆಗಿ ಇಷ್ಟು ಬೆಳೆಸಿದ್ದೇನೆ. ಅವರು ಬೆಳೆಯುವುದಕ್ಕೆ ಬೆಂಗಳೂರು ಕೂಡ ಕಾರಣವಾಗಿದೆ. ಅವರು ಯಾವುದೇ ತಂದದಲ್ಲಿ ಇರಲಿ, ಚೆನ್ನಾಗಿ ಆಡಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ಬೆಂಗಳೂರು ಬುಲ್ಸ್ ತಂಡದ ಕೋಚ್ ರಣದೀರ್ ಸಿಂಗ್! ತಮಿಳ್‌ ತಲೈವಾಸ್ ತಂಡ ಒಟ್ಟು 4.04 ಕೋಟಿ ರೂಪಾಯಿ ಮೊತ್ತವನ್ನು ಹರಾಜಿಗೆ ಮೀಸಲಿಟ್ಟಿತ್ತು. ಅದರಲ್ಲಿ ಅರ್ಧಕ್ಕರ್ಧದಷ್ಟು ಹಣವನ್ನು ಪವನ್ ಶೆಹ್ರಾವತ್ ಅವರ ಮೇಲೆ ಸುರುದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ!

Leave A Reply

Your email address will not be published.