ಮಾರುಕಟ್ಟೆಗೆ ಬಂತು ’ಅಪ್ಪು ರಾಖಿ’; ಅಪ್ಪು ನೀವು ಎಂದೆಂದಿಗೂ ನಮ್ಮೊಂದಿಗೆ!

ಸ್ಯಾಂಡಲ್ ವುಡ್ ನ ಲೆಜೆಂಡ್ ಆಕ್ಟರ್ ಆಗಿದ್ದ ಪುನೀತ್ ರಾಜಕುಮಾರ್ ನಮ್ಮೊಂದಿಗೆ ಇಲ್ಲ ಅನ್ನುವ ಸತ್ಯವನ್ನ ಯಾರು ಒಪ್ಪಿಕೊಳ್ಳೋಕೆ ಸಿದ್ದರಿಲ್ಲ. ನಮ್ಮ ಜೀವನದ ಪ್ರತಿ ಹಂತದಲ್ಲಿ ಪುನೀತ್ ಅವರನ್ನ ಜೊತೆಗೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಈಗಾಗಲೇ ಹಲವಾರು ಘಟನೆಗಳು ಸಾಕ್ಷಿಯಾಗಿವೆ. ಉದಾಹರಣೆಗೆ ಸಿನಿಮಾದ ಯಾವುದೇ ಪ್ರಮೋಷನ್ ಅಥವಾ ಇತರ ಯಾವುದೇ ಕಾರ್ಯಕ್ರಮ ನಡೆಯುವುದಾದರೂ ಮೊದಲು ದೇವರಿಗೆ ಹೇಗೆ ಪೂಜೆ ಮಾಡಿ ಕೆಲಸವನ್ನು ಆರಂಭಿಸುತ್ತೇವೆಯೋ ಹಾಗೆ ಅಪ್ಪುವನ್ನು ನೆನೆಸಿಕೊಂಡೆ ಮುಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತೆ. ಇದಕ್ಕೆಲ್ಲ ಕಾರಣ ಅಪ್ಪು ಅವರ ಸರಳ ಜೀವನ ಹಾಗೂ ಅವರ ಅದ್ಭುತ ಸ್ವಭಾವ!

ಪುನೀತ್ ರಾಜಕುಮಾರ್ ಅವರು ಎಲ್ಲರೊಂದಿಗೂ ಬಹಳ ಪ್ರೀತಿ ಹಾಗೂ ಬಾಂಧವ್ಯದಿಂದ ವರ್ತಿಸುತ್ತಿದ್ದರು ಅವರ ನಗುಮುಖವೇ ಎಲ್ಲರ ನೋವನ್ನು ಮರೆಸುವಷ್ಟು ಶಕ್ತಿಯನ್ನು ಹೊಂದಿತ್ತು. ಹಾಗಾಗಿ ಅಪ್ಪು ಅವರ ಅಭಿಮಾನಿಗಳ ಬಳಗ ಬಹಳ ದೊಡ್ಡದಿದೆ ಇಂದಿಗೂ ಅಪ್ಪುವನ್ನು ನೆನೆಸಿಕೊಂಡು ಅವರ ದಾರಿಯಲ್ಲಿಯೇ ನಡೆಯುತ್ತಾ ಅವರೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಹಲವು ಅಭಿಮಾನಿಗಳು ಇದ್ದಾರೆ. ಎಲ್ಲಾ ಸಂದರ್ಭದಲ್ಲಿಯೂ ಅಪ್ಪುವನ್ನ ನೆನಪಿಸಿಕೊಳ್ಳುವ ಹಾಗೆ ಈ ಬಾರಿಯ ರಕ್ಷಾಬಂಧನ ಹಬ್ಬದಲ್ಲಿಯು ಪುನೀತ್ ರಾಜಕುಮಾರ್ ರಾರಾಜಿಸುತ್ತಿದ್ದಾರೆ. ಹೇಗೆ ಗೊತ್ತಾ ?

ಅಣ್ಣ ತಂಗಿಯರ ನಡುವಿನ ಶ್ರೀ ರಕ್ಷೆಯಾಗಿ ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತೆ. ಸಹೋದರಿಯರು ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ಸಹೋದರನಾದವನು ಸಹೋದರಿಗೆ ನಾನು ನಿನಗೆ ಸದಾ ಶ್ರೀರಕ್ಷೆ ಕೊಡುತ್ತೇನೆ ಅಂತ ರಾಖಿಯನ್ನು ಕಟ್ಟಿಸಿಕೊಳ್ಳುತ್ತಾನೆ. ಇದೆ ರಾಖಿ ಹಬ್ಬದ ವಿಶೇಷ. ಈ ಬಾರಿ ಪುನೀತ್ ಅವರ ಫೋಟೋ ಇರುವ ಹಾಗೂ ಪುನೀತ್ ಅವರ ಹೆಸರಿರುವ ರಾಖಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ.

ಅಗಸ್ಟ್ 11 ಅಂದ್ರೆ ನಾಳೆ ರಾಕಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನೀವು ಈ ಹಬ್ಬವನ್ನ ಇನ್ನಷ್ಟು ವಿಶೇಷ ಮಾಡುವುದಕ್ಕೆ ಅಪ್ಪು ಫೋಟೋ ಇರುವ ರಾಖಿಯನ್ನು ನಿಮ್ಮ ಸಹೋದರನ ಕೈಗೆ ಕಟ್ಟಿ ಅವರ ಖುಷಿಯನ್ನ ದುಪ್ಪಟ್ಟು ಮಾಡಬಹುದು ಮಾರುಕಟ್ಟೆಯಲ್ಲಿ ಈಗ ಅಪ್ಪು ರಾಕಿ ಹೆಚ್ಚು ಗಮನಸೆಳೆಯುತ್ತಿದೆ. ಪುನೀತ್ ರಾಜಕುಮಾರ್ ಫೋಟೋ ಇರುವ ರಾಖಿಗಳನ್ನ ಖರೀದಿ ಮಾಡುತ್ತಿದ್ದಾರೆ ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಭಾವನಾತ್ಮಕ ವಿಷಯವು ಹೌದು. ಹಾಗಾಗಿ ಪುನೀತ್ ರಾಜಕುಮಾರ್ ಫೋಟೋ ಇರುವ ರಾಖಿ ತುಸು ಹೆಜ್ಜೆ ಸೇಲ್ ಆಗುತ್ತಿದೆ ಅಂದ್ರೆ ತಪ್ಪಲ್ಲ.

75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಲಾಲ್ಭಾಗ್ ನಲ್ಲಿ ಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ ಬಾರಿ ಪುನೀತ್ ರಾಜಕುಮಾರ್ ಹಾಗೂ ಡಾಕ್ಟರ್ ರಾಜಕುಮಾರ್ ಅವರ ಥೀಮ್ ನಲ್ಲಿ ಪುಷ್ಪಮೇಳ ಪ್ರದರ್ಶನ ನಡೆಯುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಅಪ್ಪು ಅಭಿಮಾನಿಗಳಿಗೆ ಡಬ್ಬಲ್ ಖುಷಿ ನೀಡುವ ಇನ್ನೊಂದು ಸಂಗತಿ ಎಂದರೆ ಗಂಧದಗುಡಿ ಸಿನಿಮಾ ಅಕ್ಟೋಬರ್ 28ರಂದು ತೆರೆ ಕಾಣಲಿದೆ.

Leave A Reply

Your email address will not be published.