ಕೇವಲ ಎರಡೇ ವಸ್ತು ಬಳಸಿ ತಯಾರಿಸಿ ವಿಶೇಷವಾದ ರವಾ ದೋಸೆ; ಕೇವಲ ಹದಿನೈದು ನಿಮಿಷಗಳಲ್ಲಿ ಸಿದ್ಧಪಡಿಸಬಹುದು ನೋಡಿ!

ಬೆಳಗಿನ ಉಪಹಾರಕ್ಕೆ ಭಾರತದಲ್ಲಿ ಹೆಚ್ಚಾಗಿ ದೋಸೆಯನ್ನ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ತರಾವರಿ ದೋಸೆ ರೆಸಿಪಿಗಳು ಚಾಲ್ತಿಯಲ್ಲಿವೆ. ಕೆಲವು ದೋಸೆಗಳನ್ನು ದಿಢೀರ್ ಅಂತ ಸಿದ್ಧಪಡಿಸಿಬಿಡಬಹುದು. ನೀವೇನಾದರೂ ಅರ್ಜಂಟ್ ನಲ್ಲಿದ್ರೆ, ಸಿಕ್ಕಾಪಟ್ಟೆ ಹಸಿವಾಗುತ್ತಿದ್ರೆ, ಸ್ವಿಗ್ಗಿ ಗಿಗ್ಗಿ ಏನು ಬೇಡ, ಮನೆಯಲ್ಲಿಯೇ ರುಚಿಕರವಾದ ಒಂದು ಈ ದೋಸೆಯನ್ನು ತಯಾರಿಸಿಕೊಳ್ಳಬಹುದು. ಬನ್ನಿ ರವಾ ಸ್ಪೆಷಲ್ ದೋಸೆ ರೆಸಿಪಿಯನ್ನ ನಾವಿವತ್ತು ನಿಮಗೆ ಹೇಳಿಕೊಡ್ತೀವಿ!

ರವಾ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು:

ಸೋಜಿ ರವಾ ಅಥವಾ ಸಣ್ಣ ರವೆ – ಒಂದು ಕಪ್ ನಷ್ಟು (ಎಷ್ಟು ಜನರಿಗೆ ಮಾಡುತ್ತಿತ್ತೀರಿ ಎನ್ನುವುದನ್ನು ನೋಡಿ ರವಾ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು​
ಮೊಸರು- ಒಂದು ಬೌಲ್

ಉಪ್ಪು ರುಚಿಗೆ

ರವೆ ದೋಸೆ ಮಾಡುವ ವಿಧಾನ:

ಮೊದಲಿಗೆ ಅಗತ್ಯಕೆ ತಕ್ಕಷ್ಟು ರವೆಯನ್ನು ತೆಗೆದುಕೊಂಡು ಒಂದು ಅಗಲವಾದ ಪಾತ್ರೆಗೆ ಹಾಕಿ. ಅದಕ್ಕೆ ಮೊಸರನ್ನು ಸೇರಿಸಿ ೧೦ ನಿಮಿಷಗಳ ಕಾಲ ನೆನೆಯಲು ಬಿಡಿ. ನೀವು ಇನ್ನೂ ಹೆಚ್ಚು ಸಮಯ ನೆನೆಸಿಟ್ತರೆ ದೋಸೆ ಇನ್ನೂ ಚೆನ್ಣಾಗಿ ಬರುತ್ತದೆ.  ನಂತರ ನೆನೆಸಿಟ್ಟ ರವೆಯನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ರುಬ್ಬಿಕೊಳ್ಳಿ. ಇನ್ನು ಇದಕ್ಕೆ ಸ್ವಲ್ಪ ಅವಲಕ್ಕಿಯನ್ನೂ ಬೇಕಾದರೂ ಹಾಕಿಕೊಳ್ಳಬಹುದು. ರುಬ್ಬಿದ ಮಿಶ್ರಣವನ್ನು ಪಾತ್ರೆಗೆ ತೆಗೆದು ನೀರನ್ನು ಬೆರೆಸಿ ದೋಸೆಯ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಬಳಿಕ ರಿಚಿಗೆ ಬೇಕಾದಷ್ಟು ಉಪ್ಪನ್ನ ಹಾಕಿ ಕಲಸಿಕೊಳ್ಳಿ.

ಈ ದೋಸೆಯನ್ನು ನೀವು ನಾನ್ ಸ್ಟಿಕ್ ದೋಸೆ ತವಾ ಮೇಲೆ ಮಾಡಿದರೆ ಒಳ್ಳೆಯದು. ಆಗ ಎಣ್ಣೆ ಹಾಕುವ ಅಗತ್ಯವೂ ಇರುವುದಿಲ್ಲ. ಅಥವಾ ಮಾಮೂಲಿ ತವಾ ಆದರೆ ಅದನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆಯನ್ನು ಸವರಿ. ಬಳಿಕ ದೋಸೆ ಹಿಟ್ತನ್ನು ಹುಟ್ಟಿನ ಸಹಾಯದಿಂದ ತವಾ ಮೇಲೆ ಹರಡಿ. ಮೆಲ್ಗಡೆಯೂ ಸ್ವಲ್ಪ ಎಣ್ಣೆಯನ್ನು ಹಾಕಿ ಮುಚ್ಚಳ ಮುಚ್ಚಿ. ಒಂದು ನಿಮಿಷದ ನಂತರ ಮುಚ್ಚಳ ತೆಗೆದು ದೋಸೆಯನ್ನು ಮೊಗಚಿ ಹಾಕಿ, ದೋಸೆಯನ್ನು ಪ್ಲೇಟ್ ಗೆ ತೆಗೆಯಿರಿ. ಈ ದೋಸೆಯನ್ನು ನಿಮಗಿಷ್ಟವಾದ ಚಟ್ನಿ ಜೊತೆ ಸವಿಯಬಹುದು.

ಇನ್ನು ಈ ದೋಸೆ ಹಿಟ್ಟಿಗೆ ಸಾಸಿವೆ ಹಾಗೂ ಎಣ್ಣೆಯನ್ನು ಹಾಕಿ ಒಗ್ಗರಣೆ ಮಾಡಿ ಸೇರಿಸಬಹುದು. ಅದೂ ಉತ್ತಮ ರುಚಿಯನ್ನು ಕೊಡುತ್ತದೆ. ತಪ್ಪದೇ ಈ ರೆಸಿಪಿಯನ್ನು ಮಾಡಿ ನೋಡಿ. ಹೇಗಿತ್ತು ಅಂತ ನಮಗೆ ಕಮೆಂಟ್ ಮಾಡಿ ತಿಳಿಸಿ!

Leave A Reply

Your email address will not be published.