ಕನ್ನಡತಿ: ಮತ್ತೆ ಬಂದರು ಅಮ್ಮಮ್ಮ ಮನೆಯವರಿಗಿಂತ ಪ್ರೇಕ್ಷಕರಿಗೆ ಹೆಚ್ಚು ಖುಷಿ ನೋಡಿ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿ ಕಿರುತೆರೆ ಲೋಕದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದಕ್ಕೆ ಇರುವ ಅಭಿಮಾನಿಗಳು ಸಾಕಷ್ಟು. ಈ ಧಾರಾವಾಹಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿವೆ.

ಹರ್ಷ, ಭುವಿ, ಅಮ್ಮಮ್ಮ, ಸಾನಿಯಾ ಈ ಎಲ್ಲಾ ಪಾತ್ರಗಳಿಗೂ ಜನ ಫಿದಾ ಆಗಿದ್ದಾರೆ. ಅದರಲ್ಲೂ ಅಮ್ಮಮ್ಮ ಪಾತ್ರವನ್ನುಂತೂ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಹರ್ಷ ಹಾಗೂ ಭೂಮಿ ಪ್ರೀತಿಸುತ್ತಿದ್ದರು. ಮೊದಲು ಒಬ್ಬರಿಗೆ ಒಬ್ಬರು ಹೇಳಿಕೊಂಡಿರಲಿಲ್ಲ. ನಂತರ ಹರ್ಷ ಪ್ರೇಮ ನಿವೇದನೆ ಮಾಡಿದರೂ ಭೂಮಿ ತನ್ನದೇ ಆದ ಕಾರಣಗಳಿಗೆ ಹರ್ಷನನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಪ್ರೀತಿಯನ್ನು ಎಷ್ಟು ದಿನ ತಾನೇ ಮುಚ್ಚಿಡಲಾದೀತು? ಕೊನೆಗೂ ಭೂಮಿ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ಪ್ರೀತಿಸುತ್ತಾ ಇದ್ರು ಅವರಿಬ್ಬರ ಮದುವೆಗೆ ನೂರೆಂಟು ವಿಘ್ನಗಳು ಬಂದವು.

ಇನ್ನು ಅವರಿಬ್ಬರ ಮದುವೆಯನ್ನ ಮಾಡಿಸಿ ಅಂತ ವೀಕ್ಷಕರು ನಿರ್ದೇಶಕರಿಗೆ ಪದೇಪದೇ ಕಮೆಂಟ್ ಮಾಡಿ ಹೇಳುತ್ತಿದ್ದರು. ಕೊನೆಗೂ ಇವರಿಬ್ಬರ ವಿವಾಹ ಸಾಂಗವಾಗಿ ನೆರವೇರಿದೆ. ಆದರೆ ಅಮ್ಮಮ್ಮ ಮಾತ್ರ ದೂರದ ಅಮೆರಿಕಾದ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಅಮ್ಮಮ್ಮ ಪಾತ್ರ ಮುಗೀತು ಮತ್ತೆ ಅವರು ಪುನಃ ಬರುವುದಿಲ್ಲ ಅಂತ ಜನ ಸಿಕ್ಕಾಪಟ್ಟೆ ಬೇಸರಗೊಂಡಿದ್ದರು. ಇವತ್ತಿನವರೆಗೂ ಅಮ್ಮಮ್ಮ ಪಾತ್ರವನ್ನು ಮತ್ತೆ ಕನ್ನಡತಿಯಲ್ಲಿ ತೆಗೆದುಕೊಂಡು ಬನ್ನಿ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಕಮೆಂಟ್ ಮಾಡುತ್ತಿದ್ದರು. ಅಲ್ಲದೆ ನಿರ್ದೇಶಕರಿಗೆ ಅಮ್ಮಮ್ಮ ಪಾತ್ರ ಸಾ’ಯಿಸಬಾರದು ಅಂತ ಎಚ್ಚರಿಕೆಯನ್ನು ಕೂಡ ಕೊಡುತ್ತಿದ್ದರು. ಆದರೆ ಇದೀಗ ಪ್ರೇಕ್ಷಕರ ಮಾತಿಗೆ ಮಣಿದ ನಿರ್ದೇಶಕರು ಅಮ್ಮಮ್ಮ ಗುಣಮುಖರಾಗಿ ಮತ್ತೆ ಮನೆಗೆ ಹಿಂದಿರುಗುವಂತೆ ಮಾಡಿದ್ದಾರೆ.

ಹೌದು ಇಂದಿನ ಎಪಿಸೋಡ್ ನಲ್ಲಿ ನೀವು ಅಮ್ಮಮ್ಮ ಬರುವಿಕೆಯನ್ನು ನೋಡಬಹುದು. ಆದರೆ ಇತ್ತ ಮನೆ ರಣರಂಗವಾಗಿದೆ ಹರ್ಷನ ಚಿಕ್ಕಪ್ಪ ಇಲ್ಲಸಲ್ಲದ ಕಾರಣಗಳನ್ನ ಹೇಳಿ ಭುವಿಯ ಮೇಲೆ ಕೈ ಎತ್ತಲು ಮುಂದಾಗಿದ್ದಾರೆ. ಅಲ್ಲದೆ ತನಗೆ ಅರ್ಧ ರಾಜ್ಯ ಕೊಡಬೇಕು ಅಂತ ಮಹಾಭಾರತದ ಕಥೆಯನ್ನ ಕೂಡ ಹೇಳಿದ್ದಾರೆ. ಈ ಹಿಂದೆ ಅಮೆರಿಕದಿಂದ ವೈದ್ಯರು ಕರೆ ಮಾಡಿ ಅಮ್ಮಮ್ಮಾಳ ನೆನಪಿನ ಶಕ್ತಿ ಕುಂಠಿತವಾಗುತ್ತಿದೆ ಅಂತ ಹೇಳಿದ್ರು. ಈ ಮಾತನ್ನು ಕೇಳಿ ಸಾನಿಯಾ ಗೆ ಸಿಕ್ಕಾಪಟ್ಟೆ ಸಂತೋಷವಾಗಿತ್ತು. ಆದರೆ ಈಗ ಮತ್ತೆ ಅಮ್ಮಮ್ಮಾಳನ್ನು ಮನೆಯಲ್ಲಿ ನೋಡಿ ಸಾನಿಯಾ ಶಾಕ್ ಆಗಿದ್ದಾಳೆ. ತನ್ನ ಎಂ ಡಿ ಪೋಸ್ಟ್ ಗೆ ಕುತ್ತು ಬಂತು ಅಂತ ಭಯಗೊಂಡಿದ್ದಾಳೆ.

ಅಂತೂ ಲೇಡಿ ಡಾನ್ ರತ್ನಮ್ಮ ಮನೆಗೆ ಬಂದಾಯ್ತು. ಇನ್ನು ಮನೆಯಲ್ಲಿ ಬಾಲ ಬಿಚ್ಚಿಕೊಂಡಿದ್ದ ಎಲ್ಲರೂ ಬಾಲ ಮುದುರಿಕೊಳ್ಳಲೇಬೇಕು. ಇನ್ನು ಮುಂದೆಯಾದರೂ ಅಮ್ಮಮ್ಮ ಹಾಗೂ ಭುವಿ ಇಬ್ಬರು ಸೇರಿ ಮನೆಯಲ್ಲಿ ಇದ್ದುಕೊಂಡೇ ಕತ್ತಿ ಮಸಿಯುತ್ತಾ ಇರುವವರಿಗೆ ಬುದ್ಧಿ ಕಲಿಸುತ್ತಾರಾ! ಕಾದು ನೋಡಬೇಕು.

Leave A Reply

Your email address will not be published.