ಮನೆಯಲ್ಲಿರುವ ಕಬ್ಬಿಣದ ಪಾತ್ರೆ ತುಕ್ಕು ಹಿಡಿದಿದೆಯಾ? ಅದನ್ನು ಸ್ವಚ್ಛಗೊಳಿಸುವುದು ಹೇಗೆ! ಇಲ್ಲಿದೆ ನೋಡಿ ಸರಳ ಟ್ರಿಕ್ಸ್!

ಕಬ್ಬಿಣದ ಪಾತ್ರೆಯಲ್ಲಿ ಆಹಾರವನ್ನು ತಯಾರಿಸಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯ. ದೇಹಕ್ಕೆ ಕಬ್ಬಿಣದ ಅಂಶ ಅಗತ್ಯವಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ  ಈತರದ ಪಾತ್ರೆಯಲ್ಲಿ ಆಹಾರವನ್ನು ತಯಾರಿಸಿ ಸೇವಿಸಿದರೆ ಅದು ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತೆ. ಆದರೆ ಈ ವಿಷಯದಲ್ಲಿ ತುಂಬಾ ಜಾಗರೂಕರಾಗಿ ಇರಬೇಕು. ಯಾಕೆ ಗೊತ್ತಾ?

ಕಬ್ಬಿಣದ ಪಾತ್ರೆಗಳು ಬಹಳ ಬೇಗ ತುಕ್ಕು ಹಿಡಿಯುತ್ತವೆ. ಅದನ್ನ ಸ್ವಚ್ಛವಾಗಿಟ್ಟುಕೊಳ್ಳದೇ ಇದ್ರೆ ಆ ಕಲೆಗಳು ಶಾಶ್ವತವಾಗಿ ಉಳಿದುಬಿಡುತ್ತವೆ. ನಂತರ ಅದನ್ನು ಸ್ವಚ್ಛಗೊಳಿಸಲು ಸಾಧ್ಯವೇ ಇಲ್ಲ. ಹಾಗಂತ ಈ ತುಕ್ಕು ಹಿಡಿದ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿ ತಿನ್ನುವುದು ಕೂಡ ಬಹಳ ಅಪಾಯಕಾರಿ. ಹಾಗಾಗಿ ಇಂಥ ಪಾತ್ರೆಗಳನ್ನ ಬೇಗ ಸ್ವಚ್ಛಗೊಳಿಸಿಕೊಳ್ಳಬೇಕು. ನಾವು ಇಂದು ಬಳಸುವ ಕೆಲವು ರಾಸಾಯನಿಕ ಡಿಟರ್ಜೆಂಟ್ ಗಳು ಯಾವ ಕಲೆಯನ್ನು ಹೋಗಿಸುವ ಸಾಮರ್ಥ್ಯವನ್ನೇ ಹೊಂದಿರುವುದಿಲ್ಲ. ಅಂತಹ ಸಮಯದಲ್ಲಿ ನಾವು ಈಗ ಹೇಳುವ ಕೆಲವು ಟ್ರಿಕ್ಸ್ ಗಳನ್ನು ನೀವು ಮಾಡಿದರೆ ಬಹಳ ಬೇಗ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಹಾಗಾದ್ರೆ ಬನ್ನಿ ಆ ಟ್ರಿಕ್ಸ್ ಗಳು ಯಾವುದು ನೋಡೋಣ.

ವಿನೆಗರ್ ಉಪಯೋಗ; ಪಾತ್ರೆಗಳನ್ನ ಸ್ವಚ್ಛಗೊಳಿಸಲು ನೀವು ವಿನೆಗರನ್ನು ಬಳಸಬಹುದು ಇದು ಪಾತ್ರೆಯಲ್ಲಿರುವ ಕೊಳೆಯನ್ನು ಸಹ ಸುಲಭವಾಗಿ ತೆಗೆದುಹಾಕುತ್ತದೆ. ಅಲ್ಲದೆ ಪಾತ್ರೆಯಲ್ಲಿ ಯಾವುದೇ ಬ್ಯಾಕ್ಟೀರಿಯಾ ಉಳಿಯದಂತೆ ಸೋಂಕುರಹಿತಗೊಳಿಸುತ್ತೆ ಪಾತ್ರೆಗಳು ಹೊಳೆಯುವಂತೆ ಮಾಡಲು ವಿನೆಗರ್ ಅನ್ನು ಅಡುಗೆ ಸೋಡಾ ಜೊತೆಗೆ ಬೆರೆಸಿ ಪಾತ್ರೆಯ ಮೇಲ್ಮೈ ಮೇಲೆ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ಉಜ್ಜಿ ಸ್ವಚ್ಛಗೊಳಿಸಿದರೆ ಪಾತ್ರೆ ಪಳಪಳ ಎಂದು ಹೊಳೆಯುತ್ತದೆ.

ಅಡುಗೆ ಸೋಡಾ ಮತ್ತು ನಿಂಬೆರಸ; ಇದು ಯಾವುದೇ ಪಾತ್ರೆ ಗೊಳಿಸಲು ಅತ್ಯುತ್ತಮ ಮಾರ್ಗವಾಗಿದೆ. ಮೊದಲಿಗೆ ಎರಡು ಲೋಟ ನೀರನ್ನು ಬಿಸಿ ಮಾಡಿಕೊಳ್ಳಬೇಕು. ಈ ಬಿಸಿ ನೀರಿಗೆ ಎರಡು ಚಮಚ ಅಡುಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಒಂದು ಚಮಚ ನಿಂಬೆರಸವನ್ನು ಇದಕ್ಕೆ ಸೇರಿಸಿ. ನಂತರ ಯಾವುದೇ ಬ್ರಷ್ ಸಹಾಯದಿಂದ ಕಬ್ಬಿಣ ಪಾತ್ರೆಯಲ್ಲಿ ತುಕ್ಕು ಹಿಡಿದಿರುವ ಜಾಗದ ಮೇಲೆ ಈ ದ್ರಾವಣವನ್ನು ಹಾಕಿ ಉಜ್ಜಿ. ಹೀಗೆ ಮಾಡಿದ್ರೆ ಕಬ್ಬಿಣ ಪಾತ್ರದಲ್ಲಿರುವ ಯಾವುದೇ ಕಲೆ ತಕ್ಷಣವೇ ಹೋಗಿ ಪಾತ್ರೆ ಕ್ಲೀನ್ ಆಗುತ್ತದೆ. ಜೊತೆಗೆ ಈ ದ್ರಾವಣವನ್ನು ತುಕ್ಕು ಹಿಡಿದ ಜಾಗದಲ್ಲಿ ಹಚ್ಚಿ ಸ್ವಲ್ಪ ಸಮಯ ಹಾಗೆಯೇ ಬಿಡಿ ನಂತರ ಶುದ್ಧ ನೀರಿನಿಂದ ತೊಳೆದರೆ ಪಾತ್ರ ಎಷ್ಟು ಸ್ವಚ್ಚವಾಗಿರುತ್ತೆ ನೀವೇ ಗಮನಿಸಿ.

ಅಡುಗೆ ಸೋಡಾ ಹಾಗೂ ಸುಣ್ಣದ ಮಿಶ್ರಣ; ಅಡುಗೆ ಸೋಡಾದಲ್ಲಿ ಕಠಿಣ ಕಲೆಗಳನ್ನು ತೆಗೆಯುವ ಶಕ್ತಿ ಇದೆ ಅದರ ಜೊತೆಗೆ ಸ್ವಲ್ಪ ಸುಣ್ಣ ಬೆರೆತರಂತು ಪಾತ್ರೆ ಚಕಚಕ ಎಂದು ಹೊಳೆಯುವಂತೆ ಮಾಡಬಹುದು. ತುಕ್ಕು ಹಿಡಿದಿರುವ ಕಲೆ ಎಷ್ಟೇ ಗಟ್ಟಿಯಾಗಿದ್ರೂ ಸುಣ್ಣ ಅದನ್ನು ಮೃದುಗೊಳಿಸುತ್ತೆ. ಅಡುಗೆ ಸೋಡಾ ತುಕ್ಕನ ಸ್ವಚ್ಛಗೊಳಿಸುತ್ತೆ. ಮೊದಲಿಗೆ ಎರಡು ಚಮಚ ಸುಣ್ಣ ಹಾಗೂ ಒಂದು ಚಮಚ ಅಡುಗೆ ಸೋಡಾವನ್ನು ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಇದನ್ನ ಪೇಸ್ಟ್ ಅದಕ್ಕೆ ತಯಾರಿಸಿಕೊಂಡು ತುಕ್ಕು ಹಿಡಿದ ಪಾತ್ರೆಗೆ ಹಚ್ಚಿ. ಸ್ವಲ್ಪ ಸಮಯ ಬಿಟ್ಟು ನಂತರ ಉಜ್ಜಿ, ಶುದ್ಧವಾದ ನೀರಿನಲ್ಲಿ ತೊಳೆದರೆ ತುಕ್ಕು ಹಿಡಿದ ಪಾತ್ರೆ ಬಹಳ ಸ್ವಚ್ಛವಾಗಿರುವುದನ್ನು ನೀವು ಕಾಣಬಹುದು. ಸ್ನೇಹಿತರೆ ನಿಮಗೆ ಈ ಟಿಪ್ಸ್ ಇಷ್ಟವಾಗಿದ್ದರೆ ಖಂಡಿತ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.