ಅಕ್ಕಿಯಲ್ಲಿ ಹುಳವಾದರೆ ಹೆಂಗಸರಿಗೆ ತಲೆನೋವು ತಪ್ಪಿದ್ದಲ್ಲ; ಚಿಂತೆ ಬೇಡ ನಾವು ಹೇಳ್ತಿವಿ ಹುಳ ಓಡಿಸುವ ಸುಲಭ ಟ್ರಿಕ್ಸ್!

ಹೆಂಗಸರಿಗೆ ಅಡುಗೆ ಮನೆಯಲ್ಲಿ ದವಸ ಧಾನ್ಯಗಳನ್ನು ಹಾಳಾಗದಂತೆ, ಯಾವುದೇ ಕೀಟ ಬರದಂತೆ ಕಾಪಾಡಿಕೊಳ್ಳುವುದು ಬಹಳ ತಲೆನೋವಿನ ವಿಷಯ. ಯಾಕಂದ್ರೆ ಧಾನ್ಯಗಳನ್ನಾಗಲಿ ಅಥವಾ ಅಕ್ಕಿಯನ್ನು  ಹೆಚ್ಚು ಸಮಯ ಇಟ್ಟರೆ ಅವುಗಳಲ್ಲಿ ಹುಳ ಆಗುತ್ತದೆ. ಹಾಗಾಗಿ ಇತ್ತೀಚಿಗೆ ಜನರು ಹೆಚ್ಚಾಗಿ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಮನೆಗೆ ತರುತ್ತಾರೆ. ಆದ್ರೆ ಹೀಗೆ ಎಲ್ಲಾ ಸಮಯದಲ್ಲೂ ಸ್ವಲ್ಪೇ ಸ್ವಲ್ಪ ಅಕ್ಕಿ ತಂದುಕೊಳ್ಳಲು ಸಾಧ್ಯವಲ್ಲ .ಯಾಕಂದ್ರೆ ಕೆಲವೊಮ್ಮೆ ಧಿಡೀರ್ ಅಂತ ಅಕ್ಕಿ ಖಾಲಿ ಆಗಬಹುದು ಅಂತ ಸಂದರ್ಭದಲ್ಲಿ ಸಮಸ್ಯೆ ಆಗುತ್ತೆ ಹಾಗಾಗಿ ಚಿಂತೆ ಬೇಡ ನಿಮ್ಮ ಮನೆಯಲ್ಲಿ ಮೂಟೆ ಅಕ್ಕಿ ಇದ್ದರೂ ಅದರಲ್ಲಿ ಹುಳ ಆಗದಂತೆ ಹೇಗೆ ಕಾಪಾಡಿಕೊಳ್ಳಬಹುದು ಅನ್ನುವ ಸಿಂಪಲ್ ಟ್ರಿಕ್ಸ್ ಅನ್ನು ನಾವು ನಿಮಗೆ ಹೇಳಿಕೊಡ್ತೀವಿ.

ಬೇವಿನ ಎಲೆ; ಸುಮಾರು 15 ರಿಂದ 20 ಬೇವಿನ ಎಲೆಗಳನ್ನು ಅಕ್ಕಿ ಮೂಟೆ ಅಥವಾ ಡಬ್ಬದಲ್ಲಿ ಹಾಕಿಡಿ ಹೇಗೆ ಮಾಡುವುದರಿಂದ ಹುಳ ಬೇವಿನ ಕಹಿ ವಾಸನೆಗೆ ಹತ್ತಿರವು ಸುಳಿಯುವುದಿಲ್ಲ. ಇನ್ನು ಅಕ್ಕಿಯನ್ನು ಅಥವಾ ಯಾವುದೇ ಧಾನ್ಯವನ್ನು ಗಾಳಿಯ ಆಡದ ಕಂಟೇನರ್ ನಲ್ಲಿ ಇಡುವುದು ಅತ್ಯಂತ ಅಗತ್ಯ ಗಟ್ಟಿಯಾದ ಮುಚ್ಚಳಿರುವ ಡಬ್ಬಿ ಅಥವಾ ದಪ್ಪವಾದ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದನ್ನು ಭದ್ರವಾಗಿ ಮುಚ್ಚಿಡಬೇಕು ಹೀಗೆ ಮಾಡಿದ್ರೆ ಹುಳ ಆಗುವುದಿಲ್ಲ. ಜೊತೆಗೆ ಗಾಳಿಯು ಒಳಗಡೆ ಹೋಗುವುದಿಲ್ಲ.

ಲವಂಗ; ಲವಂಗದ ವಾಸನೆ ಕೀಟಗಳಿಗೆ ಬಹಳ ಅಲರ್ಜಿ ನೋಡಿ. ಹೀಗಾಗಿ 10ರಿಂದ 15 ಲವಂಗವನ್ನು ಅಕ್ಕಿ ಪಾತ್ರೆಯಲ್ಲಿ ಹಾಕಿಡಿ. ಅಖಿಲ ಬದಲಿ ಲವಂಗ ಹಾಕಿ ಇಡುವುದರಿಂದ ಇದು ಹುಳ ಬರುವುದನ್ನು ತಡೆಯುತ್ತದೆ ಜೊತೆಗೆ ಅಕ್ಕಿಯಲ್ಲಿ ಹುಳ ಆಗಿದ್ದರೆ ಅದನ್ನು ಓಡಿಸಲು ಕೂಡ ಸಹಾಯ ಮಾಡುತ್ತೆ.

ಬೆಂಕಿ ಪೊಟ್ಟಣ; ಅಕ್ಕಿಯ ಡಬ್ಬಿಯ ಬಳಿ ಅಥವಾ ಅಕ್ಕಿ ಚೀಲದ ಬಳಿ ಬೆಂಕಿ ಪೊಟ್ಟಣವನ್ನು ಇಡಿ. ಬೆಂಕಿ ಕಡ್ಡಿಯಲ್ಲಿ ಸಲ್ಫರ್ ಅಂಶ ಇರುವುದರಿಂದ ಇದು ಕೀಟಗಳ ಬರುವುವಿಕೆಯನ್ನು ತಡೆಗಟ್ಟುತ್ತದೆ. ಅಕ್ಕಿಯ ಜೊತೆಗೆ ಇತರ ಧಾನ್ಯಗಳನ್ನ ರಕ್ಷಿಸಲು ಕೂಡ ನೀವು ಹೀಗೆ ಮಾಡಬಹುದು.

ಒಣ ಮೆಣಸು ಮತ್ತು ಬೆಳ್ಳುಳ್ಳಿ; ಈ ವಿಧಾನವನ್ನು ಪೂರ್ವ ಕಾಲದಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಮೂಟೆ ಮೂಟೆ ಅಕ್ಕಿ ಇದ್ದರೂ ಅದರಲ್ಲಿ ಹುಳ ಆಗದಂತೆ ಕಾಪಾಡಲು ಇದೊಂದೇ ಮಾರ್ಗವೇ ಸಾಕು. ಒಣಮೆಣಸಿನ ಕಾಯಿ ಹಾಗೂ ಸಿಪ್ಪೆ ತೆಗೆಯದ ಬೆಳ್ಳುಳ್ಳಿಯನ್ನು ಅಕ್ಕಿ ಡಬ್ಬಿ ಅಥವಾ ಅಕ್ಕಿ ಚೀಲದಲ್ಲಿ ಹಾಕಿಡಿ. ಹೀಗೆ ಮಾಡುವುದರಿಂದ ಹುಳವು ಆಗುವುದಿಲ್ಲ ಅಥವಾ ಈಗಾಗಲೇ ಹುಳ ಆಗಿದ್ರೆ ಅದು ಓಡಿ ಹೋಗುತ್ತದೆ. ಅನ್ನ ಮಾಡುವಾಗ ಅಕ್ಕಿಯನ್ನು ಚೆನ್ನಾಗಿ ತೊಳೆದು ಬಳಸಿ.

ಸೂರ್ಯನ ಶಾಖ; ಇನ್ನು ಅಕ್ಕಿಯಲ್ಲಿ ಈಗಾಗಲೇ ಹುಳು ಕಾಣಿಸಿಕೊಂಡರೆ ಅಕ್ಕಿಯನ್ನು ಹಾಗೆ ಬಿಸಾಡಬೇಡಿ ಅದನ್ನ ಬಿಸಿಲಿನ ಶಾಖಕ್ಕೆ ಹರಡಿ ಸೂರ್ಯನ ಶಾಖಕ್ಕೆ ಹುಳಗಳು ಸಾಯುತ್ತವೆ ಅಥವಾ ಓಡಿ ಹೋಗುತ್ತವೆ ಆಗಾಗ ಬಿಸಿಲಿಗೆ ಒಣಗಿಸಿ ತೆಗೆದರೆ ಅದರಲ್ಲಿರುವ ತೇವಾಂಶ ಹೋಗಿ ಧಾನ್ಯಗಳು ಚೆನ್ನಾಗಿ ಒಣಗಿರುತ್ತದೆ ಆಗ ಹುಳದ ಬಾಧೆಯು ಕಡಿಮೆ.

ಇನ್ನು ಅಕ್ಕಿ ಅಥವಾ ಇತರ ಧಾನ್ಯಗಳನ್ನ ಗಾಳಿ ಆಡದ ಕಂಟೇನರ್ ಅಥವಾ ಕವರ್ ನಲ್ಲಿ ಹಾಕಿ ಪ್ರಿಡ್ಜ್ ನಲ್ಲಿಯೂ ಇಡಬಹುದು. ಫ್ರಿಜ್ಜಿನಲ್ಲಿ ಧಾನ್ಯಗಳನ್ನ ಇಟ್ಟರೆ ಅದೆಷ್ಟೇ ಸಮಯವಾದರೂ ಸರಿ ಹುಳ ಆಗುವುದಿಲ್ಲ.

Leave A Reply

Your email address will not be published.