ಅಮೇರಿಕಾ ವರ ಆಂಧ್ರ ವಧು: ತಿರುಪತಿಯಲ್ಲಿ ನಡೆಯಿತು ಒಂದು ಅಪರೂಪದ ಮದುವೆ!

ಭಾರತೀಯ ಜೀವನದ ಪದ್ಧತಿಯಲ್ಲಿ ವಿವಾಹಕ್ಕೂ ಪ್ರಾಶಸ್ತ್ಯವಿದೆ. ಪ್ರೀತಿಗಾಗಲಿ, ವಿವಾಹಕ್ಕೆ ಯಾವುದೇ ಜಾತಿ, ಕುಲ ಗೋತ್ರ, ಬಣ್ಣದ ಹಂಗಿಲ್ಲ. ಪ್ರೀತಿಸಿದ ಎರಡು ಜೀವಗಳು ಮದುವೆಯ ಬಂಧದಲ್ಲಿ ಒಂದಾಗುತ್ತಾರೆ. ಈ ಪ್ರೀತಿ ಯಾರ ನಡುವೆ ಬೇಕಾದರೂ ಆಗಬಹುದು. ಇದಕ್ಕೆ ಉದಾಹರಣೆ ಎಂದರೆ ಆಂಧ್ರಪ್ರದೇಶ ರಾಜ್ಯದ ಟಿ. ಹರ್ಷವಿ ಹಾಗೂ ಅಮೆರಿಕಾ ದೇಶದ ದಮಿಯನ್ ಫ್ರ್ಯಾಂಕ್ ವಿವಾಹ. ನಿಮಗೆ ಎಲ್ಲಿ ಆಂಧ್ರದ ಹುಡುಗಿ. ಎಲ್ಲಿಯ ಅಮೆರಿಕದ ವರ ಎನಿಸಬಹುದು. ಆದರೆ ಇದು ಸತ್ಯ.

ಟಿ. ಹರ್ಷವಿ ಅವರು ತಿರುಪತಿಯಲ್ಲಿ ನೆಲೆಸಿರುವ ಜಯಚಂದ್ರ ರೆಡ್ಡಿ ಹಾಗೂ ರಾಜೇಶ್ವರಿ ಅವರ ಮಗಳು. ಇವರು ಬಿ. ಟೆಕ್ ಅಧ್ಯಯನ ಮಾಡಿದ್ದಾರೆ. ಅಧ್ಯಯನದ ನಂತರ ಹರ್ಷವಿ ಅವರಿಗೆ ಅಮೆರಿಕ ಬೋಸ್ಟನ್ನಲ್ಲಿರುವ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದೆ. ಉದ್ಯೋಗದ ಸಲುವಾಗಿ ಹರ್ಷವಿ ಅಮೆರಿಕಕ್ಕೆ ತೆರಳಿದ್ದಾಳೆ. ಅಲ್ಲಿ ಕಂಪನಿಯ ಮ್ಯಾನೇಜರ್ ಆಗಿದ್ದವರು ದಮಿಯನ್ ಫ್ರ್ಯಾಂಕ್.

ಅಲ್ಲಿ ಇಬ್ಬರಿಗೂ ಮೊದಲ ಭೇಟಿಯಾಗಿದೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದಿರಿಂದ ನಂತರ ಸ್ನೇಹಿತರಾಗಿದ್ದಾರೆ. ಸ್ನೇಹದಿಂದ ಅದು ಪ್ರೀತಿಗೆ ತಿರುಗಿದೆ. ಪ್ರೀತಿ ಆದ ನಂತರ ಇಬ್ಬರು ಮನೆಯವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಹರ್ಷವಿ ಹಾಗೂ ಫ್ರ್ಯಾಂಕ್ ಅಮೆರಿಕದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಆದರೆ ಹರ್ಷವಿ ಅವರ ಮನೆಯವರ ಒತ್ತಾಯಕ್ಕೆ ಮಣಿದು ಇವರು ಕಳೆದ ವಾರ ತಿರುಪತಿಯಲ್ಲಿ ಮತ್ತೊಮ್ಮೆ ಹಿಂದೂ ಧರ್ಮದ ಪ್ರಕಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಿರುಪತಿಯ ಹೋಟೆಲ್ ಒಂದರಲ್ಲಿ ಹರ್ಷವಿ- ದಮಿಯನ್ ಫ್ರ್ಯಾಂಕ್ ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಇದಕ್ಕೆ ಹರ್ಷವಿ ಅವರ ಕುಟುಂಬದವರು, ಸ್ನೇಹಿತರು, ಬಂಧುಗಳು ಸಾಕ್ಷಿಯಾದರು. ಹಿಂದೂ ಧರ್ಮದ ಆಚರಣೆಗಳನ್ನು ನೋಡಿ ಫ್ರ್ಯಾಂಕ್ ಅವರ ಕುಟುಂಬದವರು ಕೂಡ ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೆ ಈ ರೀತಿ ವಿವಾಹ ನಡೆದಿರುವುದಕ್ಕೆ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.