ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗ ರಿಶಬ್ ಪಂತ್ ಸುತ್ತ ಸುತ್ತಿಕೊಂಡಿದ್ಯಾ ವಿವಾದ!

ಭಾರತೀಯ ಕ್ರಿಕೇಟ್ ತಂಡದ ಆಟಗಾರರಿಗೂ ಬಾಲಿವುಡ್ ಗೂ ನಿಕಟವಾದ ಸಂಬಂಧವಿದೆ. ಅನೇಕ ಜನ ಕ್ರಿಕೇಟಿಗರು ಬಾಲಿವುಡ್ ನಟಿಯರನ್ನು ವರಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಅದೇ ರೀತಿ ಕ್ರಿಕೇಟಿಗ ಹರ್ಬಜನ್ ಸಿಂಗ್ ಅವರು ಗೀತಾ ಎನ್ನುವ ಬಾಲಿವುಡ್ ನಟಿಯನ್ನು ವಿವಾಹವಾಗಿದ್ದಾರೆ. ಹೀಗೆ ಬಾಲಿವುಡ್ ಗೂ ಕ್ರಿಕೆಟ್  ಬಿಡಿಸಲಾರದ ನಂಟು. ಈಗ ಮತ್ತೆ ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗರೊಬ್ಬರು ಸುದ್ದಿಯಲ್ಲಿದ್ದಾರೆ.

ಬಾಲಿವುಡ್ ನಟಿ, ಪಡ್ಡೆ ಹುಡುಗರ ಹಾಟ್ ಫೆವರೇಟ್ ಊರ್ವಶಿ ರೌಟೇಲಾ ಹಾಗೂ ಕ್ರಿಕೇಟಿಗ ರಿಶಬ್ ಪಂತ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ರಿಶಬ್ ಪಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾದ ಒಂದು ಪೋಸ್ಟ್. ಇತ್ತಿಚೆಗೆ ರಿಶಬ್ ಪಂತ್ ಅವರು ಊರ್ವಶಿ ಅವರ ಕುರಿತು ನನ್ನ ಬಿಟ್ಟು ಬಿಡು ಅಕ್ಕಾ ಎಂದು ಪೋಸ್ಟ್ ಮಾಡಿದ್ದರು. ನಂತರ ಅದನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ. ಹಾಗಾದರೆ ರಿಶಬ್ ಪಂತ್ ಹೀಗೆ ಹೇಳಲು ಕಾರಣವೇನು ಎಂದು ಹುಡುಕುತ್ತಾ ಹೋದಾಗ ಊರ್ವಶಿ ರೌಟೇಲಾ ಅವರು ಸಂದರ್ಶನವೊಂದರಲ್ಲಿ ರಿಶಬ್ ಪಂತ್ ಕುರಿತು ಮಾತನಾಡಿದ್ದರು. ಅದಕ್ಕೆ ಅವರು ರೀತಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ನಟಿ ಊರ್ವಶಿ ರೌಟೇಲ್ ಅವರು ಸಂದರ್ಶನವೊಂದರಲ್ಲಿ ’ನಾನು ವಾರಣಾಸಿಯಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನಂತರ ನನಗೆ ದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಹಾಜರಾಗಬೇಕಿತ್ತು. ಹಾಗಾಗಿ ನಾನು ವಾರಣಾಸಿಯಿಂದ ನೇರವಾಗಿ ದೆಹಲಿಗೆ ಬಂದೆ. ದೆಹಲಿಯಲ್ಲಿಯೂ ಒಂದು ದಿನ ಪೂರ್ತಿ ಚಿತ್ರೀಕರಣ ಇತ್ತು. ಮತ್ತೆ ನಾನು ವಾಪಾಸು ವಾರಣಾಸಿಗೆ ಬಂದು ಚಿತ್ರೀಕರಣದಲ್ಲಿ ಭಾಗವಹಿಸಬೇಕಾಗಿತ್ತು. ಸುಮಾರು ಹತ್ತು ತಾಸುಗಳ ಕಾಲ ಪ್ರಯಾಣ ಮಾಡಿ ದಣಿದಿದ್ದೆ. ಅಲ್ಲದೆ ಮಹಿಳೆಯರು ಸಹಜವಾಗಿ ತಯಾರಾಗಲು ಸಮಯ ತೆಗೆದುಕೊಳ್ಳುತ್ತಾರೆ. ನನಗೂ ಹಾಗೆ ಆಗಿದೆ. ಈ ವೇಳೆಗಾಗಲೇ ಮಿಸ್ಟರ್ ಆರ್ಪಿ ಅವರು ನನ್ನ ಭೇಟಿಗೆ ಬಂದಿದ್ದರು. ನನಗೆ ಸಿಕ್ಕಾಪಟ್ಟೆ ಸುಸ್ತಾಗಿದ್ದರಿಂದ ನಾನು ನಿದ್ರೆ ಮಾಡಿದ್ದೆ. ನಿದ್ರೆ ಮಾಡಿದ್ದ ಸಂದರ್ಭದಲ್ಲಿ ನನಗೆ ತುಂಬಾ ಕರೆಗಳು ಬಂದಿದ್ದವು. ನಂತರ ಎದ್ದು ನೋಡಿದಾಗ ಆರ್ಪಿ ಕರೆ ಮಾಡಿರುವುದು ತಿಳಿಯಿತು. ಅವರು ನನಗೋಸ್ಕರ ತುಂಬಾ ಸಮಯ ಕಾದಿದ್ದು ತಿಳಿದು ಬೇಸರವಾಯಿತು. ಯಾರನ್ನೇ ಆದರೂ ಹುಡುಗಿಯರು ಕಾಯಿಸಲು ಇಷ್ಟಪಡುವುದಿಲ್ಲ. ಹಾಗಾಗಿ ನಾನೇ ಕರೆ ಮಾಡಿ ಮುಂಬೈಗೆ ಬಂದಾಗ ಭೇಟಿ ಆಗುತ್ತೇನೆ’ ಎಂದು ಹೇಳಿದ್ದೆ ಎಂದು ಊರ್ವಶಿ ತಿಳಿಸಿದ್ದರು.

ಇದಕ್ಕೆ ಪ್ರತಿಯಾಗಿ ರಿಶಬ್ ಪಂತ್ ಅವರು ಸಂದರ್ಶನದಲ್ಲಿ ಜನರು ಸುಳ್ಳು ಹೇಳುವುದನ್ನು ನೋಡಿದರೆ ನನಗೆ ಬಹಳ ತಮಾಷೆಯಾಗಿ ಕಾಣಿಸುತ್ತದೆ. ಪುಕ್ಕಟೆ ಪ್ರಚಾರ ಹಾಗೂ ಹೆಸರು, ಕೀರ್ತಿಗಾಗಿ ಜನರು ಈ ರೀತಿ ಮಾಡುವುದನ್ನು ನೋಡಿ ನನಗೆ ತುಂಬಾನೇ ಬೇಜಾರಾಯಿತು. ನನ್ನನ್ನು ಬಿಟ್ಟು ಬಿಡು ಅಕ್ಕಾ. . ಸುಳ್ಳು ಹೇಳಲು ಒಂದು ಮಿತಿಯಿದೆ ಎಂದು ಬರೆದುಕೊಂಡಿದ್ದರು. ಅಲ್ಲದೆ ಇದನ್ನು ಕೆಲವೇ ನಿಮಿಷಗಳಲ್ಲಿ ಡೀಲಿಟ್ ಕೂಡ ಮಾಡಿದ್ದರು.

ಅಂದಹಾಗೆ ನಟಿ ಊರ್ವಶಿ ಅವರು ಸಂದರ್ಶನದಲ್ಲಿ ರಿಶಬ್ ಪಂತ್ ಹೆಸರು ಬಳಸಿಕೊಂಡಿರಲಿಲ್ಲ. ಮಿಸ್ಟರ್ ಆರ್ಪಿ ಎಂದಷ್ಟೇ ಹೇಳಿದ್ದರು. ಇದನ್ನು ನೋಡಿದ ನೆಟ್ಟಿಗರು ಇದು ರಿಶಬ್ ಪಂತ್ ಅವರ ಕುರಿತಾಗಿಯೇ ಊರ್ವಶಿ ಅವರು ಮಾತನಾಡಿದ್ದು ಎನ್ನುವುದನ್ನು ದೃಢಪಡಿಸಿಕೊಂಡಿದ್ದಾರೆ.

Leave A Reply

Your email address will not be published.