ಈ ಊರಲ್ಲಿ ಒಂದು ರಾತ್ರಿಗಾಗಿ ನಡೆಯುವ ಅದ್ಧೂರಿ ಮದುವೆ; ಮರುದಿನ ಬೇರೆಯಾಗುವ ದಂಪತಿ ಯಾವ ಊರದು?

ಭಾರತೀಯ ಸಂಪ್ರದಾಯದಲ್ಲಿ, ಜೀವನ ಪದ್ಧತಿಯಲ್ಲಿ ವಿವಾಹಕ್ಕೆ ವಿಶೇಷವಾದ ಪ್ರಾಶಸ್ತ್ಯವಿದೆ. ಇದನ್ನು ಜೀವನದ ಒಂದು ಮಹತ್ವದ ಘಟ್ಟ ಎಂದೇ ಪರಿಗಣಿಸಲಾಗುತ್ತದೆ. ಭಾರತೀಯ ಪದ್ಧತಿಯಲ್ಲಿ ಒಂದು ಒಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ವಿವಾಹವಾಗುತ್ತಾರೆ. ಆದರೆ ವಿವಾಹವಾದ ತರುವಾಯ ಜೀವನಪೂರ್ತಿ ಒಟ್ಟಿಗೆ ಬಾಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಆದರೆ ಚೀನಾ ದೇಶದ ಈ ಊರಿನಲ್ಲಿ ಮಾತ್ರ ಒಂದು ರಾತ್ರಿಗಾಗಿ ಮದ್ವೆ ಆಗುತ್ತಾರೆ ಹುಡುಗಿಯರು!

ಹೌದು.  ಇದು ವಿಚಿತ್ರ ಎನಿಸಿದರೂ ಸತ್ಯ. ಇದು ನಡೆಯುವುದು ನಮ್ಮ ನೆರೆಯ ದೇಶವಾದ ಚೀನಾದ ಶಿಲ್ಲಾಂಘ್ ಕಣಿವೆ ಪ್ರದೇಶದಲ್ಲಿ. ಈ ಪ್ರದೇಶಕ್ಕೆ ಪ್ರವಾಸಿಗರು ಪ್ರತಿನಿತ್ಯವೂ ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮವೇ ಇಲ್ಲಿನ ಜನರ ಜೀವನಕ್ಕೆ ಆಧಾರವಾಗಿದೆ. ಹಾಗಾಗಿ ಇಲ್ಲಿಗೆ ಬಂದ ಪ್ರವಾಸಿಗರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡು ಇಲ್ಲಿನ ಹುಡುಗಿಯರು ಮದುವೆ ಆಗುತ್ತಾರೆ. ಅದು ಕೇವಲ ಒಂದು ರಾತ್ರಿಗೋಸ್ಕರ ಮಾತ್ರ. ಮರುದಿನ ಆಕೆಗೂ ಆತನಿಗೂ ಯಾವುದೇ ಸಂಬಂಧವಿರುವುದಿಲ್ಲ.

ಇಲ್ಲಿ ವಾಸಿಸುವ ಜನರು ವಿವಾಹದ ವಿಚಾರದಲ್ಲಿ ತೀರಾ ವಿಭಿನ್ನ ಸಂಪ್ರದಾಯವನ್ನು ಹೊಂದಿದ್ದಾರೆ. ಇಲ್ಲಿ ವರಾನ್ವೇಷಣೆಯೂ ಸಹ ವಿಭಿನ್ನವಾಗಿದೆ. ಹುಡುಗಿಯು ತನಗೆ ಪರಿಚಯ ಇರುವ ಹುಡುಗನನ್ನು ಮದುವೆ ಆಗುವುದಿಲ್ಲ. ಬದಲಿಗೆ ತನಗೆ ಪರಿಚಯವೇ ಇಲ್ಲದ ಅಲ್ಲಿಗೆ ಪ್ರವಾಸಕ್ಕೆಂದು ಬಂದಿರುವವರಲ್ಲಿ ಒಬ್ಬರನ್ನು ಮದುವೆ ಆಗುತ್ತಾಳೆ. ಈ ವರಾನ್ವೇಷಣೆ ವಿಚಾರದಲ್ಲೂ ಅಲ್ಲಿ ಒಂದು ಪದ್ಧತಿ ಇದೆ. ಶಿಲ್ಲಿಂಗ್ ಕಣಿವೆಗೆ ಪ್ರವಾಸಿಗರು ಬರುವ ವೇಳೆಗೆ ಹುಡುಗಿಯರು ತುಂಬಾ ಸುಂದರವಾಗಿ ತಯಾರಾಗಿ ಛತ್ರಿ ಹಿಡಿದು ನಿಂತಿರುತ್ತಾರೆ. ಪ್ರವಾಸಿಗರು ಅಲ್ಲಿಗೆ ಬಂದಾಗ ಅವರನ್ನು ಪ್ರೀತಿಯಿಂದ ಸ್ವಾಗತಿಸಿ ಮನೆಗೆ ಕರೆದುಕೊಂಡು ಹೋಗಲಾಗುತ್ತದೆ. ನಂತರ ಅವರನ್ನು ಚೆನ್ನಾಗಿ ಉಪಚರಿಸಲಾಗುತ್ತದೆ. ನಂತರ ಮದುವೆಯ ವಿಧಿವಿಧಾನಗಳು ಆರಂಭಗೊಳ್ಳುತ್ತದೆ. ವಧುವಿನ ಕೈಯ್ಯಿಗೆ ಒಂದು ಕೆಂಪು ಬಟ್ಟೆಯನ್ನು ನೀಡಲಾಗುತ್ತದೆ. ಆ ಬಟ್ಟೆಯನ್ನು ಆಕೆ ಮೇಲಿಂದ ಹಾರಿಸಬೇಕು. ಆ ಬಟ್ಟೆ ಹೋಗಿ ಯಾವ ಹುಡುಗನ ಮೇಲೆ ಬೀಳುತ್ತದೋ ಆತನನ್ನು ಆ ವಧು ವರಿಸುತ್ತಾಳೆ. ನಂತರ ಆತನನ್ನು ಬಹಳ ವಿಜೃಂಭಣೆಯಿಂದ ವಿವಾಹವಾಗುತ್ತಾರೆ. ಆದರೆ ಇದೆಲ್ಲ ನಡೆಯುವುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತ.

ಇದಕ್ಕೆ ಕಾರಣ ಏನೆಂದರೆ ಶಿಲ್ಲಿಂಗ್ ಕಣಿವೆಯಲ್ಲಿ ಬುಡಕಟ್ಟು ಜನಾಂಗದ ಜನರು ಹೆಚ್ಚಾಗಿ ವಾಸಿಸುತ್ತಾರೆ. ಅವರ ಜೀವನ ಪದ್ಧತಿ ಅರಿತುಕೊಳ್ಳಲು ಇತರರಿಗೆ ವಿವರಿಸಲು ಈ ರೀತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೂ ಕೇವಲ ಒಂದು ದಿನಕ್ಕಾಗಿ ವಿವಾಹವಾಗುವುದು ಎಂತವರಿಗಾದರೂ ಅಚ್ಚರಿ ತರದೆ ಇರದು.

Leave A Reply

Your email address will not be published.