ನಟಿ ತಾರಾ ಅವರ ಹೊಸ ಫೋಟೊ ಶೂಟ್ ನೋಡಿದ್ರಾ ! ಸ್ವಾತಂತ್ರ್ಯ ಮಹೋತ್ಸವಕ್ಕೆ ತಾರಾ ಕೊಡುಗೆ

ಕನ್ನಡ ಚಿತ್ರರಂಗ ಎನ್ನುವುದು ಸಮುದ್ರ ಇದ್ದ ಹಾಗೆ. ಸಿನೆಮಾ ರಂಗ ಆರಂಭವಾದಾಗಿನಿಂದ ಇಲ್ಲಿವರೆಗೆ ಎಲ್ಲಿಯೂ ಯಾವ ಪಾತ್ರಕ್ಕೂ ಕಲಾವಿದರ ಕೊರತೆ ಉಂಟಾಗಿಲ್ಲ. ಪ್ರತಿಭಾನ್ವಿತ ಕಲಾವಿದರ ತವರೂರು ನಮ್ಮ ಕರುನಾಡು. ಕನ್ನಡ ಚಿತ್ರರಂಗದಲ್ಲಿ ಎಲ್ಲ ಪಾತ್ರಗಳಿಗೂ ಅಂದರೆ ಸಹೋದರಿ, ತಾಯಿ, ಅತ್ತಿಗೆ, ಅತ್ತೆ, ನಾಯಕನಟಿಯ ಸ್ನೇಹಿತೆ ಹೀಗೆ ಎಲ್ಲ ರೀತಿಯ ಪೋಷಕ ಪಾತ್ರಗಳಲ್ಲಿ ಮಿಂಚಿದ ನಟಿಯರಲ್ಲಿ ತಾರಾ ಅನುರಾಧಾ ಅವರು ಒಬ್ಬರು. ಇವರು ತಮ್ಮ ಮನೋಜ್ಞ ಅಭಿನಯದಿಂದಲೇ ೩ ದಶಕಕ್ಕೂ ಹೆಚ್ಚಿನ ಸಮಯದಿಂದ ಕನ್ನಡಿಗರನ್ನು ಮನರಂಜಿಸುತ್ತಿದ್ದಾರೆ.

ತಾರಾ ಅನುರಾಧಾ ಅವರು ಜನಿಸಿದ್ದು ೪ ಮಾರ್ಚ್ ೧೯೭೩ರಲ್ಲಿ. ಇವರು ಮೊದಲು ಅಭಿನಯಿಸಿದ್ದು ತಮಿಳು ಸಿನೆಮಾದಲ್ಲಿ. ಆ ಸಿನೆಮಾ ಹೆಸರು ಇಂಗೆಯುಂ ಒರು ಗಂಗಾಯ್. ಈ ಸಿನೆಮಾ ೧೯೮೫ರಲ್ಲಿ ತೆರೆ ಕಂಡಿತು. ತಾರಾ ಅವರು ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದು ತುಳಸಿದಳ ಸಿನೆಮಾ ಮೂಲಕ. ಆದರೆ ಇವರ ವೃತ್ತಿ ಜೀವನಕ್ಕೆ ತಿರುವು ನೀಡಿದ್ದು ಗುರಿ ಸಿನೆಮಾ. ಈ ಸಿನೆಮಾದಲ್ಲಿ ತಾರಾ ಅವರು ನಮ್ಮ ವರನಟ, ನಟಸಾರ್ವಭೌಮ, ಅಣ್ಣಾವ್ರು ಡಾ. ರಾಜ್ ಕುಮಾರ್ ಅವರ ತಂಗಿಯ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಅಲ್ಲಿಂದ ತಾರಾ ಅವರಿಗೆ ಅವಕಾಶಗಳ ಬಾಗಿಲು ತೆರೆಯಿತು. ನಂತರ ತಾರಾ ಅವರು ಕನ್ನಡದ ಎಲ್ಲ ಸ್ಟಾರ್ ನಟರ ಸಿನೆಮಾಗಳಲ್ಲಿ ಅಭಿನಯಿಸಿದರು. ವರನಟ, ಅಪ್ಪಾಜಿ, ಡಾ. ರಾಜ್ ಕುಮಾರ್, ರೆಬೆಲ್ ಸ್ಟಾರ್ ಅಂಬರೀಷ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ಕರಾಟೆಕಿಂಗ್ ಶಂಕರ್ ನಾಗ್, ಅನಂತ ನಾಗ್, ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್, ರಮೇಶ್, ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶಶಿಕುಮಾರ್, ಟೈಗರ್ ಪ್ರಭಾಕರ್, ದೇವರಾಜ್ ಸೇರಿದಂತೆ ಕನ್ನಡ ಘಟಾನುಘಟಿ ನಾಯಕರ ಸಿನೆಮಾಗಳಲ್ಲಿ ಅಭಿನಯಸಿದ್ದಾರೆ. ಪ್ರಸ್ತುತ ಅವರು ಗೋಲ್ಡನ್ ಸ್ಟಾರ್ ಗಣೇಶ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಚಿರಂಜಿವಿ ಸರ್ಜಾ, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಸಿಂಪಲ್ ಸ್ಟಾರ್ ಶ್ರೀಮುರಳಿ ಸೇರಿದಂತೆ ಹಲವಾರು ಸ್ಟಾರ್ ನಟರ ತಾಯಿ, ಸಹೋದರಿಯ ಪಾತ್ರದಲ್ಲಿ ನಟಿಸಿದ್ದಾರೆ.

ನಟಿ ತಾರಾ ಅವರ ಅಭಿನಯಕ್ಕೆ ಹಲವಾರು ರಾಷ್ಟ್ರ ಪ್ರಶಸ್ತಿಗಳು, ರಾಜ್ಯ ಪ್ರಶಸ್ತಿಗಳು, ಫಿಲಂ ಫೇರ್ ಪ್ರಶಸ್ತಿಗಳು ಸಂದಿವೆ.ಹಸಿನಾ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಇನ್ನು ಕರಿಮಲೆಯ ಕಗ್ಗತ್ತಲು, ಕಾನೂರು ಹೆಗ್ಗಡತಿ ಸಿನೆಮಾದಲ್ಲಿ ಅಭಿನಯಿಸಿದ್ದಕ್ಕಾಗಿ ಉತ್ತಮ ನಟಿ ರಾಜ್ಯ ಪ್ರಶಸ್ತಿ, ಮುಂಜಾನೆಯ ಮಂಜು ಸಿನೆಮಾಕ್ಕೆ ಅತ್ಯುತ್ತಮ ಪೋಷಕನಟಿ, ನಿನಗಾಗಿ ಸಿನೆಮಾಕ್ಕೆ ಅತ್ಯುತ್ತಮ ಹಾಸ್ಯನಟಿ ಪ್ರಶಸ್ತಿಗಳು ಸಂದಿವೆ. ನಟಿ ತಾರಾ ಅವರು ರಾಜಕಾರಣದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರು ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಇವರು ೨೦೧೨ರಿಂದ ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಭಾರತದಲ್ಲಿ ಈ ವರ್ಷ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರಧಾನಿ ಮೋದಿಯವರು ಕರೆ ನೀಡಿದಂತೆ ಪ್ರತಿ ಮನೆಯಲ್ಲೂ ಧ್ವಜಾರೋಹಣ ನಡೆಸಲಾಗಿದೆ. ಅಲ್ಲದೆ ಎಲ್ಲಡೆ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ಸ್ವಾತಂತ್ರ್ಯ ದಿನದ ಅಂಗವಾಗಿ ನಟಿ ತಾರಾ ಅವರು ವಿಶೇಷ ಫೋಟೋ ಶೂಟ್ ಮಾಡಿಸಿದ್ದಾರೆ. ಅದರಲ್ಲಿ ಅವರು ತಿರಂಗಾದ ಬಣ್ಣದಲ್ಲಿ ಅವರು ಮಿಂಚಿದ್ದಾರೆ.

ಈ ಫೋಟೊ ಶೂಟ್ ಕುರಿತು ಮಾತನಾಡಿರುವ ತಾರಾ, ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶವೇ ತಿರಂಗಾ ಬಣ್ಣದಲ್ಲಿ ಮಿಂದೆಳುವಂತೆ ಮಾಡಿದ್ದಾರೆ. ಪ್ರತಿ ಮನೆಯಲ್ಲೂ ಸ್ವಾತಂತ್ರ್ಯದ ಸಂಭ್ರಮ ಮನೆ ಮಾಡುವಂತೆ ಮಾಡಿದ್ದಾರೆ. ಇಂತಹ ವಿಶೇಷ ಸಂದರ್ಭದಲ್ಲಿ ನಾನು ಸಹ ವಿಶೇಷವಾದುದನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಈ ರೀತಿ ಕೆಸರಿ,ಬಿಳಿ, ಹಸಿರು ಬಣ್ಣದ ಬಟ್ಟೆ ತೊಟ್ಟು ಫೋಟೊ ಶೂಟ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

Leave A Reply

Your email address will not be published.