ಹೌದು ನನಗೆ ಮೂಡ್ ಇಲ್ಲ ಎಂದರೆ ಮೂರು ದಿನ ಆಗಲಿ ಸ್ನಾನನೇ ಮಾಡುವುದಿಲ್ಲ ಎಂದ ಸೋನು ಗೌಡ: ಎಲ್ಲರೆದುರು ಸತ್ಯ ಬಯಲು

ಬಿಗ್ ಬಾಸ್ ಓಟಿಟಿ ಗೆ ಕನ್ನಡ ಶೋ ಗೆ ಒಂದು ವಾರ ಕಳೆದಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಕನ್ನಡದಲ್ಲಿ ಇತರ ಎಲ್ಲಾ ರಿಯಾಲಿಟಿ ಶೋ ಗಿಂತಲೂ ದೊಡ್ಡ ಶೋ ಎನಿಸಿಕೊಂಡಿದೆ. ಈ ಬಾರಿಯ ಬಿಗ್ ಬಾಸ್ ಶೋ ಆರಂಭವಾದಾಗಿನಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವು ಸ್ಪರ್ಧಿಗಳ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವೂ ಇಲ್ಲ. ಬಿಗ್ ಬಾಸ್ ಮನೆಯ ಒಳಗೆ ಇರುವ ಸ್ಪರ್ಧಿಗಳು ಒಂದು ವಾರ ಮುಗಿಸಿದ್ದು, ವಾರಾಂತ್ಯದಲ್ಲಿ ವಾರದ ಕಥೆ ಕಿಚ್ಚನ ಜೊತೆ ಕೂಡ ರೋಮಾಂಚನ ಎಪಿಸೋಡ್ ಆಗಿತ್ತು!

ಹೌದು ಬಿಗ್ ಬಾಸ್ ನಲ್ಲಿ ಇನ್ನೊಂದು ಅಟ್ರಾಕ್ಷನ್ ಅಂದ್ರೆ ಕಿಚ್ಚ ಸುದೀಪ್ ಅವರ ನಿರೂಪಣೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಪಂಚಾಯ್ತಿ ಜನರಿಗೆ ಇಷ್ಟವಾಗುತ್ತೆ. ಅದರಲ್ಲೂ ಸ್ಪರ್ಧಿಗಳ ಸರಿ ತಪ್ಪುಗಳನ್ನು ತಿಳಿಸಿಕೊಡುವ ಕಿಚ್ಚ ಸುದೀಪ್ ಅವರ ಮಾತುಗಳೇ ಅತ್ಯಂತ ಎಫೆಕ್ಟಿವ್ ಆಗಿರುತ್ತೆ!  ಈ ಬಾರಿಯೂ ಕೂಡ ನಿರೀಕ್ಷೆಯಂತೆ ಕಿಚ್ಚ ಸುದೀಪ್ ಅಗತ್ಯ ಇದ್ದವರಿಗೆ ಮಾತಿನ ಛಾಟಿ ಏಟು ನೀಡಿದ್ದಾರೆ. ಎಲ್ಲರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಸೋನು ಗೌಡ ಈಘಾಗಲೇ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ಡಾರೆ. ಈ ಹಿಂದೆಯೂ ಒಂದಲ್ಲಾ ಒಂದು ಕಾರಣಗಳಿಗೆ ಟ್ರೋಲ್ ಆಗಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಅವರು ಕೊಡುವ ಒಂದೊಂದು ಸ್ಟೆಟ್ ಮೆಂಟ್ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಜನ ಯಾರೇ ಬೈದರೂ ಅವರನ್ನ ನೋಡಲು ಇಷ್ಟಪಡುವ ಜನರಿಗೂ ಕೊರತೆಯಿಲ್ಲ. ಈ ಬಾರಿ ಅತಿ ಹೆಚ್ಚು ಮತ ಗಳಿಸಿ, ಎಲಿಮಿನೇಷನ್ ಭಯದಿಂದ ತಪ್ಪಿಸಿಕೊಂಡು ಮನೆಯಲ್ಲಿಯೇ ಉಳಿಸಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಸ್ನಾನ ಮಾಡುವುದಿಲ್ಲ ಎನ್ನುವ ವಿಚಾರ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಹೌದು, ಸೋನು ಸ್ನಾನ ಮಾಡಲ್ಲ ಅಂತ ಸಾನ್ಯಾ ಅಯ್ಯರ್ ಕಿಚ್ಚ ಸುದೀಪ್ ಅವರ ಬಳಿಯೂ ಹೇಳಿದ್ಡಾರೆ. ಇದನ್ನ ಒಪ್ಪಿಕೊಂದ ಸೋನು ಸರ್, ನಾನು ಇವತ್ತೂ ಸ್ನಾನ ಮಾಡಿಲ್ಲ, ಮನೆಯಲ್ಲಿ ಇರುವಾಗ ಮೂಡ್ ಇರಲ್ಲ ಅಂದ್ರೆ ಮೂರು ದಿನವಾದರೂ ಸ್ನಾನ ಮಾಡಲ್ಲ ಎಂದಿದ್ದಾರೆ. ಇದಕ್ಕೆಲ್ಲಾ ಅಲ್ಲಿದ್ದ ಸ್ಪರ್ಧಿಗಳು ಬಿದ್ದು ಬಿದ್ದು ನಕ್ಕಿದ್ದಾರೆ!

Leave A Reply

Your email address will not be published.