ಏರ್ಟೆಲ್ ಗ್ರಾಹಕರೇ, ನೀವು ಇನ್ನು ಮುಂದೆ ರೀಚಾರ್ಜ್ ಮಾಡಿಸುವ ಮುನ್ನ ಈ ಕಡಿಮೆ ಬೆಳೆಯ ಪ್ಲಾನ್ ತಿಳಿದುಕೊಳ್ಳಿ. ಏನೆಲ್ಲಾ ನಿಮಗೆ ಸಿಗಲಿದೆ ಗೊತ್ತೇ?

ಪ್ರಸಕ್ತ ವರ್ಷದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿವೆ. ಅದರಲ್ಲೂ ಭಾರ್ತಿ ಏರ್ಟೆಲ್ ಹಾಗೂ ಜಿಯೋ ಟೆಲಿಕಾಂ ಕಂಪನಿಗಳು ನೇರಾ ನೇರ ಪೈಪೋಟಿ ನಡೆಸುತ್ತಿವೆ. ಒಬ್ಬರಾದ ಮೇಲೆ ಒಬ್ಬರಂತೆ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತಾರೆ. ಹೆಚ್ಚು ಡೇಟಾ, ಕರೆ ಹಾಗೂ ಎಸ್ ಎಂ ಎಸ್ ಸೌಲಭ್ಯಗಳು ನಿಮಗೆ ಬೇಕಾದಲ್ಲಿ ನೀವು ತಪ್ಪದೇ ಎರ್ಟೇಲ್ ನ ಈ ಪ್ಲ್ಯಾನ್ ಗಳ ಪ್ರಯೋಜನ ಪಡೆದುಕೊಳ್ಳಬಹುದು.

ಎರ್ಟೇಲ್ ದಿರ್ಘಾವಧಿಯ ಹಾಗೂ ಅಲ್ಪಾವಧಿಯ ಪ್ಲ್ಯಾನ್ ಗಳನ್ನು ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಈಗಂತೂ ಒಂದು ತಿಂಗಳ ಸಂಪೂರ್ಣ ವ್ಯಾಲಿಟಿಡಿ ನೀಡಬೇಕು ಎಂದು ಸರ್ಕಾರ ಮಂಡಿಸಿದ ಹಿನ್ನೆಲೆಯಲ್ಲಿ ಎರ್ಟೆಲ್ ಸಂಪೂರ್ಣ ಒಂದು ತಿಂಗಳ ವ್ಯಾಲಿಡಿಟಿ ಇರುವ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ.

ಏರ್‌ಟೆಲ್‌ ನ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್‌:

ಈ ಯೋಜನೆಯಲ್ಲಿ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಇರುತ್ತದೆ. ಈ ಯೋಜನೆಯ ಅಡಿಯಲ್ಲಿ  ಪ್ರತಿದಿನ 1.5 ಜಿಬಿ ಡೇಟಾ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳುವಿದೆ. ಜೊತೆಗೆ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಕೂಡ ಲಭ್ಯ ಇನ್ನು ಹೆಚ್ಚುವರಿಯಾಗಿ ಗ್ರಾಹಕರಿಗೆ ಈ ಯೊಜನೆಯಲ್ಲಿ ಸಿಗುವ ಇನ್ನೊಂದು ಪ್ರಮುಖ ವಿಷಯ ಏರ್‌ಟೆಲ್ ಎಕ್ಸ್ಟ್ರೀಮ್, ವಿಂಕ್ ಮ್ಯೂಸಿಕ್, ಫಾಸ್ಟ್‌ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ದೊರೆಯುತ್ತವೆ.

ಏರ್‌ಟೆಲ್‌ ಟೆಲಿಕಾಂನ 549ರೂ. ಪ್ರೀಪೇಯ್ಡ್‌ ಪ್ಲ್ಯಾನ್:

 ದಿನಕ್ಕೆ 2 ಜಿಬಿ ಡಾಟಾ ನಿಮಗೆ ಸಿಗುತ್ತದೆ. ಉಚಿತ 100 ಎಸ್ ಎಂ ಎಸ್ ಗಳೂ ಇವೆ. ಅಲ್ಲದೇ ಅನಿಯಮಿತ ವಾಯಿಸ್ ಕರೆಯ ಪ್ರಯೋಜನ ಸಹ ಈ ಯೋಜನೆ ಒಳಗೊಂಡಿದೆ. ನ್ನು ಈ ಯೋಜನೆಯ ವ್ಯಾಲಿಡಿಟಿ ಒಟ್ಟು 56 ದಿನಗಳು ವಿಂಕ್ ಮ್ಯೂಸಿಕ್, ಉಚಿತ ಹೆಲೋ ಟ್ಯೂನ್ ಪ್ರಯೋಜನಗಳ ಜೊತೆಗೆ ಫಾಸ್ಟ್‌ಟ್ಯಾಗ್ ನಲ್ಲಿ 100ರೂ. ಕ್ಯಾಶ್‌ಬ್ಯಾಕ್ ಹೆಚ್ಚುವರಿಯಾಗಿ ಸಿಗಲಿದೆ.

ಏರ್‌ಟೆಲ್‌ ಟೆಲಿಕಾಂನ 666 ರೂ. ಪ್ರೀಪೇಯ್ಡ್‌ ಪ್ಲ್ಯಾನ್:

ಆಘಾಗ ರಿಚಾರ್ಜ್ ಮಾಡುವುದು ಕಷ್ಟವಾಗುವವರಿಗೆ ಈ ಯೋಜನೆ ಸಹಾಯಕವಾಗಲಿದೆ. ಯಾಕೆಂದರೆ ಈ ಯೋಜನೆಯಲ್ಲಿ ರಿಚಾರ್ಜ್ ವ್ಯಾಲಿಡಿಟಿ ಬರೊಬ್ಬರಿ ಒಟ್ಟು 77 ದಿನಗಳು. ದಿನಕ್ಕೆ  1.5 ಜಿಬಿ ಡೇಟಾ ಹಾಗೂ 100 ಉಚಿತ ಎಸ್ಎಮ್ಎಸ್ ಸೌಲಭ್ಯ  ಯೋಜನೆಯೂ ಒಳಗೊಂಡಿದೆ. ಅನಿಯಮಿತ ವಾಯಿಸ್ ಕರೆಗಳು ಇತರ ಎಲ್ಲಾ ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಇರುವಂತೆಯೇ ಲಭ್ಯ. ಇದರಲ್ಲಿ ಒಟ್ಟು ವ್ಯಾಲಿಡಿಟಿ ಮುಗಿಯುವವರೆಗೆ 126 ಜಿಬಿ ಡೇಟಾ ಲಭ್ಯವಿದೆ. ಇನ್ನು ಇತರ ಯೋಜನೆಗಳಂತೆ ಏರ್‌ಟೆಲ್‌ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್‌ ಸೌಲಭ್ಯಗಳನ್ನು ಈ ಯೋಜನೆಯೂ ಒಳಗೊಂಡಿದೆ.

ಏರ್‌ಟೆಲ್‌ ಟೆಲಿಕಾಂನ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್:

 ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ವ್ಯಾಲಿಡಿಟಿ ಕಡಿಮೆ ಇದ್ದರೂ ದಿನವೂ ಉಳಿದೆಲ್ಲಾ ಯೋಜನೆಗಳಿಗಿಂತ ಹೆಚ್ಚಿನ ಡಾಟಾವನ್ನು ಪಡೆಯಬಹುದು.  ಪ್ರತಿದಿನ 3 ಜಿಬಿ ಡೇಟಾ ಈ ಯೋಜನೆಯಲ್ಲಿ ಸಿಗಲಿದೆ. 100 ಎಸ್‌ಎಮ್‌ಎಸ್‌ ಹಾಗೂ ವಾಯಿಸ್ ಕರೆಗಳ ಸೌಲಭ್ಯಗಳೂ ಇವೆ. ಅಷ್ಟೇ ಅಲ್ಲ, ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್ ಪ್ರಯೋಜನ ಪಡೆದುಕೊಳ್ಳಬಹುದು. ಇನ್ನು ಇತರ ಯೋಜನೆಗಳಲಿ ಇರುವ ಫಾಸ್ಟ್‌ಟ್ಯಾಗ್‌ ರೀಚಾರ್ಜ್‌ನಲ್ಲಿ 100ರೂ. ಕ್ಯಾಶ್‌ಬ್ಯಾಕ್‌, ಹೆಲೋ ಟ್ಯೂನ್ ಹಾಗೂ ವಿಂಕ್ ಮ್ಯೂಸಿಕ್ ಸೌಲಭ್ಯ ಈ ಯೋಜನೆಯಲ್ಲಿಯೂ ನಿಡಲಾಗುತ್ತದೆ.

Leave A Reply

Your email address will not be published.