ನಟ ದರ್ಶನ್ ಅವರ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ; ಕಡೆಗೂ ಬಹಿರಂಗಗೊಂಡ ಡಿ ಬಾಸ್ ಆಸ್ತಿ ವಿವರ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅವರ ಅಭಿಮಾನಿಗಳು ಸೆಲಿಬ್ರೇಟ್ ಮಾಡುತ್ತಾರೆ. ಅವರ ಸಿನಿಮಾ ಅಂದ್ರೆ ಅವರ ಅಭಿಮಾನಿಗಳೇ ಹಬ್ಬವೋ ಹಬ್ಬ. ದರ್ಶನವರ ಸಿನಿಮಾ ಬಿಡುಗಡೆಯಾಗುವುದಕ್ಕೂ ಮೊದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿರುತ್ತೆ. ಅಲ್ಲದೆ ಅವರ ಸಿನಿಮಾಗಳಿಗೆ ನಿರೀಕ್ಷೆಯು ಹೆಚ್ಚು. ಸ್ಯಾಂಡಲ್ ವುಡ್ ನಲ್ಲಿ ಕಲಾ ಸೇವೆಯಲ್ಲಿ ತೊಡಗಿಕೊಂಡಿರುವ ದರ್ಶನ್ ಇದುವರೆಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇನ್ನು ದರ್ಶನ್ ಅಂದ್ರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಅಭಿಮಾನ ಇದಕ್ಕೆ ಕಾರಣ ಅವರು ಕೇವಲ ಹೀರೋ ಎನ್ನುವ ಕಾರಣಕ್ಕೆ ಅಲ್ಲ ಹೀರೋ ಎನ್ನುವುದನ್ನು ಹೊರತುಪಡಿಸಿ ನಿಜ ಜೀವನದಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿರುವವರು ದರ್ಶನ್.

ಹೌದು ದರ್ಶನ್ ಅವರು ಸುಮ್ಮನೆ ಡಿ ಬಾಸ್ ಎಂದು ಕರೆಸಿಕೊಳ್ಳುವುದಿಲ್ಲ ಅವರ ಸರಳ ವ್ಯಕ್ತಿತ್ವವು ಕೂಡ ಇದಕ್ಕೆ ಒಂದು ಕಾರಣ ಸಿನಿಮಾರಂಗವನ್ನ ಹೊರತುಪಡಿಸಿ ಸಾಕಷ್ಟು ಉತ್ತಮ ಹವ್ಯಾಸಗಳನ್ನು ಇಟ್ಟುಕೊಂಡಿರುವ ಡಿ ಬಾಸ್ ಇದೇ ಕಾರಣಕ್ಕೆ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗುತ್ತಾರೆ. ತನ್ನ ಪ್ರೀತಿಯ ಸ್ನೇಹಿತರಾದ ಪುನೀತ್ ರಾಜಕುಮಾರ್ ಅಗಲುವಿಕೆಯ ಕಾರಣದಿಂದ ಬಹಳ ಸಿಂಪಲ್ ಆಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ದರ್ಶನ್ ಇಷ್ಟು ದೊಡ್ಡ ಸ್ಟಾರ್ ಇಷ್ಟು ಸಿಂಪಲ್ ಆಗಿ ಬರ್ತಡೇ ಆಚರಿಸಿಕೊಳ್ಳುತ್ತಾರೆ ಅಂದ್ರೆ ಅಲ್ಲಿ ನೀವು ಅವರ ಸರಳ ವ್ಯಕ್ತಿತ್ವವನ್ನು ನೋಡಬಹುದು.

ನಟ ದರ್ಶನ್ ಪ್ರಾಣಿ ಪ್ರಿಯರು ಹೌದು, ಪರಿಸರ ಪ್ರೇಮಿಯೂ ಹೌದು ತಮ್ಮದೇ ಆದ ಫಾರ್ಮ್ ಹೌಸ್ ನಲ್ಲಿ ಬೇರೆ ಬೇರೆ ಪ್ರಾಣಿಗಳನ್ನು ದತ್ತು ಪಡೆದು ಅವುಗಳನ್ನು ಸಾಕಿ ಸಲಹುತ್ತಿದ್ದಾರೆ ತಮ್ಮ ಶೂಟಿಂಗ್ ಬಿಡುವಿನ ಸಮಯದಲ್ಲಿ ದರ್ಶನ್ ಅವರು ಈ ಪ್ರಾಣಿಗಳ ಜೊತೆ ಕಾಲ ಕಳೆಯುತ್ತಾರೆ ಅಲ್ಲದೆ ಅತ್ಯುತ್ತಮ ವನ್ಯಜೀವಿ ಫೋಟೋಗ್ರಾಫರ್ ಕೂಡ ಆಗಿರುವ ದರ್ಶನ್ ಅವರು ಇವರಿಗೆ ಸಾಕಷ್ಟು ಪ್ರಾಣಿಗಳ ಫೋಟೋ ತೆಗೆದು ಆ ಫೋಟೋಗಳ ಪ್ರದರ್ಶನಗಳು ಕೂಡ ನಡೆದಿದೆ. ಇನ್ನು ದರ್ಶನ್ ತಾನು ಸ್ಟಾರ್ ನಟ ಎನಿಸಿಕೊಳ್ಳುವುದರ ಹಿಂದೆ ಸಾಕಷ್ಟು ಕಷ್ಟಪಟ್ಟಿದ್ದಾರೆ ಅವರ ಪರಿಶ್ರಮದ ಫಲವಾಗಿ ಇಂದು ಚಿತ್ರರಂಗದಲ್ಲಿ ಆಳವಾಗಿ ಬೇರೂರು ಇದ್ದಾರೆ. ನಟನೆಯನ್ನು ಶುರುಮಾಡಿದ್ದು 1990ರಲ್ಲಿ ಆದರೆ 2001ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ಡಿ ಬಾಸ್ ಗೆ ದೊಡ್ಡ ಬ್ರೇಕ್ ಸಿಕ್ತು. ಅದಾದ ಬಳಿಕ ಕರಿಯ ಕಲಾಸಿಪಾಳ್ಯ ಸಾರಥಿ ಬುಲ್ ಬುಲ್ ರಾಬರ್ಟ್ ಹಾಗೂ ಇನ್ನೇನು ಬಿಡುಗಡೆಯಾಗಲಿರುವ ಕ್ರಾಂತಿ ಸಿನಿಮಾದ ವರೆಗೆ ಡಿ ಬಾಸ್ ಜರ್ನಿ ಸಾಕಷ್ಟು ಕಷ್ಟ ನೋವುಗಳಿಂದ ಕೂಡಿತ್ತು. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಇಂದು ಕರ್ನಾಟಕ ಜನತೆ ಪೂಜಿಸುವ ಮಟ್ಟಿಗೆ ದರ್ಶನ ಬೆಳೆದಿದ್ದಾರೆ ಅಂದ್ರೆ ನಿಜಕ್ಕೂ ಅವರು ಇತರರಿಗೂ ಮಾದರಿ.

ಇನ್ನು ದರ್ಶನ್ ಅವರು ತೂಗುದೀಪ್ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ಅದರ ಅಡಿಯಲ್ಲಿ ಕೆಲವು ಸಿನಿಮಾಗಳ ನಿರ್ಮಾಣವನ್ನು ಕೂಡ ಮಾಡಿದ್ದಾರೆ. 2003ರಲ್ಲಿ ವಿಜಯಲಕ್ಷ್ಮಿ ಅವರನ್ನು ವಿವಾಹವಾದರೂ ದರ್ಶನ್ ಇವರಿಗೆ ವಿನೀಶ್ ಎನ್ನುವ ಮಗನಿದ್ದಾನೆ ತಮ್ಮ ಸಂಸಾರಿಕ ಜೀವನದಲ್ಲಿಯೂ ಕೆಲವು ಸವಾಲುಗಳನ್ನು ಎದುರಿಸಿ ಇಂದು ಅವೆಲ್ಲವನ್ನು ಮೆಟ್ಟಿ ನಿಂತು ಸಂಸಾರಿಕ ಜೀವನದಲ್ಲಿಯೂ ಕೂಡ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ ಡಿ ಬಾಸ್.

ಡಿ ಬಾಸ್ ಅವರ ಆಸ್ತಿ ಅಮೂಲ್ಯ ಎಷ್ಟಿರಬಹುದು ಎನ್ನುವ ಕುತೂಹಲ ಹಲವರಿಗೆ ಇದೆ. ಎಲ್ಲರ ಊಹೆಯಂತೆ ದರ್ಶನ್ ಕೂಡ ಕೋಟಿ ಸರದಾರ ಹೌದು. ದರ್ಶನ್ ಅವರು ಸಿನಿಮಾಕ್ಕೆ ಸುಮಾರು 13 ರಿಂದ 15 ಕೋಟಿ ಸಂಭಾವನೆ ಪಡೆಯುತ್ತಾರೆ. ಇನ್ನು ರಿಯಲ್ ಎಸ್ಟೇಟ್ ಹಾಗೂ ಇತರ ಉದ್ಯಮದಲ್ಲಿಯೂ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಅವರ ಬಳಿ ಲ್ಯಾಂಬರ್ಗಿನಿ, ಬೆಂಜ್, ಫಾರ್ಚುನರ್, ಬಸ್ಟಾಂಡ್, ರೇಂಜ್ ರೋವರ್, ಮೊದಲಾದ ಕಾರ್ ಕಲೆಕ್ಷನ್ ಗಳು ಇವೆ. ಇನ್ನು ದರ್ಶನ್ ಅವರ ಆಸ್ತಿಯ ಮೌಲ್ಯ ಸುಮಾರು 150 ರಿಂದ 170 ಕೋಟಿ ಎನ್ನಲಾಗುತ್ತಿದೆ.

ದರ್ಶನ್ ಅವರ ಚರಾಸ್ತಿ ಎಷ್ಟೇ ಕೋಟಿ ಇರಬಹುದು. ಆದರೆ ಅವರ ನಿಜವಾದ ಆಸ್ತಿ ಅಂದ್ರೆ ಅವರ ಅಭಿಮಾನಿಗಳು. ಇದನ್ನು ಸಾಕಷ್ಟು ಬಾರಿ ದರ್ಶನ್ ಅವರು ಕೂಡ ಹೇಳಿಕೊಂಡಿದ್ದಾರೆ ಅಭಿಮಾನಿಗಳ ಪ್ರೀತಿ ಅಭಿಮಾನದ ಮುಂದೆ ಯಾವ ಹಣಕಾಸು ಮುಖ್ಯವಾಗುವುದಿಲ್ಲ ಅಂತ ದರ್ಶನ್ ಹೇಳುತ್ತಾರೆ.

Leave A Reply

Your email address will not be published.