ಅಯ್ಯೋ ಈ ಟಿಪ್ಸ್ ಗಳು ಮೊದಲೇ ಗೊತ್ತಿದ್ರೆ ಹೆಣ್ಣುಮಕ್ಕಳಿಗೆ ಎಷ್ಟೋ ಕೆಲಸ ಸುಲಭವಾಗಿ ಬಿಡುತ್ತಿತ್ತು! ಮಹಿಳೆಯರು ಮಿಸ್ ಮಾಡ್ದೆ ಇದನ್ನ ಓದಿ

ಹೆಣ್ಣು ಮಕ್ಕಳು ಹಾಗೂ ಮನೆಯ ಕೆಲಸ ಇವೆರಡು ಅವಿನಾಭಾವ ಸಂಬಂಧ ನೋಡಿ. ಹೆಣ್ಮಕ್ಕಳು ಮನೆಯಲ್ಲಿ ಕೆಲಸ ಮಾಡದೆ ಕುಳಿತುಕೊಳ್ಳುವ ಹಾಗೆ ಇಲ್ಲ ಇತ್ತ ಮದುವೆಯಾಗುವವರೆಗೂ ಸಣ್ಣ ಪುಟ್ಟ ಕೆಲಸಗಳನ್ನಾದರೂ ಅಮ್ಮನ ಮನೆಯಲ್ಲಿ ಮಾಡುತ್ತಾರೆ. ಗಂಡನ ಮನೆಯಲ್ಲಿ ಕೆಲಸಕ್ಕೆ ಏನು ಕಡಿಮೆ ಇಲ್ಲ. ಅದರಲ್ಲೂ ಇತ್ತೀಚಿನ ಹೆಣ್ಣು ಮಕ್ಕಳು ಮದುವೆಯಾದ ಮೇಲು ಮನೆ ಕೆಲಸ ಹಾಗೂ ಆಫೀಸ್ ಕೆಲಸ ಎರಡೂ ಜೊತೆ ಜೊತೆಯಲ್ಲಿ ಮ್ಯಾನೇಜ್ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲವು ಸುಲಭ ಐಡಿಯಾಗಳು ನಿಮಗೆ ಗೊತ್ತಿದ್ದರೆ ನಿಮ್ಮ ಕೆಲಸ ಇನ್ನಷ್ಟು ಸುಲಭವಾಗುತ್ತೆ. ಹಾಗಾದ್ರೆ ಬನ್ನಿ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಟಿಪ್ಸ್ ಗಳನ್ನು ನಾವಿಲ್ಲಿ ಹೇಳುತ್ತೇವೆ.

ಮೊದಲನೆಯದಾಗಿ ಹೆಣ್ಣುಮಕ್ಕಳು ಇರುವ ಮನೆಯಲ್ಲಿ ತರಾವರಿ ಕ್ಲಿಪ್ ಗಳು ಇರುತ್ತೆ. ತಲೆಗೆ ಹಾಕುವ ಕ್ಲಿಪ್ ಗಳನ್ನು ಒಮ್ಮೆ ಬಳಸಿ ಮತ್ತೆ ಇನ್ನೊಮ್ಮೆ ಬಳಸೋಣ ಅಂತ ಹುಡುಕಿದರೆ ಅದು ಇಟ್ಟ ಜಾಗದಲ್ಲಿ ಇರುವುದೇ ಇಲ್ಲ ಮನೆಯ ಇನ್ಯಾವುದೋ ಮೂಲೆಯಲ್ಲಿ ಬಿದ್ದಿರುತ್ತೆ. ಹಾಗಾದ್ರೆ ಇದಕ್ಕೆ ಏನು ಮಾಡಬೇಕು ಗೊತ್ತಾ. ಈಗ ಪ್ರತಿಯೊಬ್ಬರ ಮನೆಯಲ್ಲಿ ಮಾಸ್ಕ್ ಇದ್ದೇ ಇರುತ್ತೆ ನಂತಹ ಮಾಸ್ಕ್ ತೆಗೆದುಕೊಳ್ಳಿ ಅದಕ್ಕೆ ಅಲ್ಲಿ ಇಲ್ಲಿ ಬಿದ್ದು ಹಾಳಾಗುವ ತೆಗೆದುಕೊಂಡು ಮಾಸ್ಕ್ ಗೆ ಟ್ಯಾಗ್ ಮಾಡಿ. ನಂತರ ಮನೆಯಲ್ಲಿ ಎಲ್ಲಾದರೂ ಈ ಮಾಸ್ಕ್ ಅನ್ನ ನೇತಾಕಿ ಇಡಬಹುದು. ಇದರಿಂದ ಕ್ಲಿಪ್ ಕಳೆದುಹೋಗುವ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಇನ್ನು ಪ್ಲಾಸ್ಟಿಕ್ ಅಥವಾ ಗ್ಲಾಸ್ ಜಾರ್ಗಳಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಅಥವಾ ಇತರ ಮಸಾಲೆ ಪದಾರ್ಥವನ್ನು ಸ್ಟೋರ್ ಮಾಡಿ ಇಡುತ್ತೇವೆ ಅವು ಖಾಲಿಯಾದ ನಂತರ ಎಷ್ಟೇ ಸ್ವಚ್ಛಗೊಳಿಸಿದರು ಆ ಜಾರ್ ನಲ್ಲಿನ ಮಸಾಲೆ ಪರಿಮಳ ಹೋಗುವುದೇ ಇಲ್ಲ ಆಗಿದ್ದಾಗ ಒಂದು ಕೆಲಸ ಮಾಡಿ ಸ್ವಲ್ಪ ಸಾಸಿವೆ ಒಳಗೆ ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಕುಲುಕಿ. ಹೀಗೆ ಮಾಡಿದ್ರೆ ಜಾರ್ ನಲ್ಲಿರುವ ಮಸಾಲೆ ಸ್ಮೆಲ್ ಹೋಗುತ್ತದೆ.

ಇನ್ನು ಹೊರಗೆ ಪ್ರಯಾಣ ಬೆಳೆಸುವಾಗ ಒಂದು ಪರ್ಸ್ ನಲ್ಲಿ ಎಲ್ಲಾ ರೀತಿಯ ಇಯರಿಂಗ್ ಹಾಕಿಕೊಂಡು ಹೋಗುತ್ತೇವೆ ಹೀಗೆ ಮಾಡಿದ್ರೆ ಇಯರಿಂಗ್ ಮುರಿದು ಹೋಗುವ ಸಾಧ್ಯತೆ ಇರುತ್ತೆ. ಅದರ ಬದಲು ಒಂದು ಚಿಕ್ಕ ಮುಚ್ಚಳ ತೆಗೆದುಕೊಂಡು ಅದಕ್ಕೆ ಹೋಲ್ ಮಾಡಿ ಆ ಹೋಲ್ ಗೆ ಕಿವಿ ಓಲೆಯನ್ನು ಸಿಲುಕಿಸಿದರೆ ನೀವು ಸುಲಭವಾಗಿ ಕ್ಯಾರಿ ಮಾಡಬಹುದು.

ಇನ್ನು ಮನೆಯಲ್ಲಿ ರವೆ ತಂದು ಕೂಡಲೇ ಅದನ್ನ ಸ್ವಲ್ಪ ಉರಿದು ಗಾಳಿ ಆಡದ ಕರಡಿಗೆಯಲ್ಲಿ ಸ್ಟೋರ್ ಮಾಡಿ ಇಡಿ ಇದರಿಂದ ಎಷ್ಟೇ ಸಮಯವಾದರೂ ರವೆಯಲ್ಲಿ ಹುಳ ಆಗುವುದಿಲ್ಲ.  ಇನ್ನು ಸಾಮಾನ್ಯವಾಗಿ ಎಲ್ಲಾ ಮನೆಯಲ್ಲಿ ಕುಟಾಣಿಯನ್ನು ಬಳಸುತ್ತಾರೆ. ಕುಟಾಣಿಯಲ್ಲಿ ಏನಾದರೂ ಪದಾರ್ಥಗಳನ್ನು ಕೊಟ್ಟುವಾಗ ಅದು ಆಚೆ ಈಚೆ ಸಿಡಿಯುವುದನ್ನು ನೀವು ಗಮನಿಸಿರಬಹುದು ಹೀಗಿರುವಾಗ ಒಂದು ಉದ್ದವಾದ ಪೇಪರ್ ತೆಗೆದುಕೊಂಡು ಅದರ ಸುತ್ತಲೂ ಇಟ್ಟು ಹುಟ್ಟಿದರೆ ಯಾವುದೇ ಪದಾರ್ಥ ಹೊರಗಡೆ ಚೆಲ್ಲುವುದಿಲ್ಲ. ಇನ್ನು ಕುಟಾಣಿ ಮೇಲೆ ಒಂದು ಉದ್ದವಾದ ಲೋಟವನ್ನು ಬೋರಲು ಹಾಕಿ ಇಟ್ಟರೆ ಯಾವುದೇ ಜಿರಳೆ ಅಂತಹ ಕ್ರಿಮಿ ಕೀಟಗಳ ಕುಟ್ಟಣಿಯೊಳಗೆ ಸೇರಿಕೊಳ್ಳುವುದಿಲ್ಲ ಧೂಳು ಆಗುವುದಿಲ್ಲ.

ಇನ್ನು ಮನೆಯಲ್ಲಿಯೇ ಹುಕ್ ತಯಾರಿಸಿಕೊಳ್ಳಬಹುದು. ವೇಸ್ಟ್ ಆಗುವಂತಹ ಮೆಟಲ್ ಬಳೆಯನ್ನು ಒಂದು ಸೈಡ್ ಕತ್ತರಿಸಿಕೊಳ್ಳಿ. ನಂತರ ಎಸ್ ಶೇಪ್ ನಲ್ಲಿ ಅದನ್ನು ಬೆಂಡ್ ಮಾಡಿ. ಈಗ ಇದನ್ನ ಹುಕ್ನಂತೆ ಬಳಸಬಹುದು ಅಡುಗೆ ಮನೆಯಲ್ಲಿ ಈ ಹುಕ್ ಹಾಕಿಟ್ಟು ಅದಕ್ಕೆ ಹಗುರವಾದ ಯಾವುದೇ ವಸ್ತುವನ್ನು ನೇತು ಹಾಕಬಹುದು ಪ್ಲಾಸ್ಟಿಕ್ ಕವರ್ ಅಥವಾ ಲೈಟ್ ವೆಟ್ ಇರುವ ಚಮಚ ಚಾಕುಗಳನ್ನ ಸಿಕ್ಕಿಸಿಕೊಳ್ಳಬಹುದು.

ಇದೆಲ್ಲವೂ ಯಾವುದೇ ಖರ್ಚು ಇಲ್ಲದೆ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ಬುದ್ದಿವಂತಿಕೆಯಿಂದ ಮಾಡಬಹುದಾದ ಕೆಲಸಗಳು ಈ ಟಿಪ್ಸ್ ಸಹಾಯದಿಂದ ನಿಮ್ಮ ಕೆಲಸ ಇನ್ನಷ್ಟು ಸುಲಭವಾಗಿದೆ.

Leave A Reply

Your email address will not be published.