ಕರೆಂಟ್ ಬಿಲ್ ನೋಡಿ ಮೂರ್ಛೆ ಹೋದ ಅಜ್ಜ! ಅವರಿಗೆ ಬಂದ ಬಿಲ್ ಎಷ್ಟು ಎಂದು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ

ನಾವು ಸರ್ಕಾರದಿಂದ ಅಥವಾ ಸಂಸ್ಥೆಗಳಿಂದ ಒಂದು ಸೌಲಭ್ಯವನ್ನು ಪಡೆಯುತ್ತೇವೆ ಎಂದಾಗ ಅದಕ್ಕೆ ಬಿಲ್ ಪಾವತಿಸಲೇಬೇಕು. ನಾವು ಆಟೋದಲ್ಲೂ ಪ್ರಯಾಣಿಸಿದರೂ ಸಹ ಅದರ ಬಾಡಿಗೆ ಪಾವತಿಸಲೇಕು. ಹಾಗೆಯೇ ಮನಯಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೆ, ಸೌಲಭ್ಯಕ್ಕೆ ನಾವು ಹಣ ಪಾವತಿಸಲೇಬೇಕು. ಯಾಕೆಂದರೆ ಅದು ಕಟ್ ಆಯಿತು ಎಂದರೆ ನಮಗೆ ಬದುಕಲು ಸಾಧ್ಯವಾಗುವುದಿಲ್ಲ. ನಾವು ಐಶಾರಾಮಿತನಕ್ಕೆ ಅಷ್ಟು ಒಗ್ಗಿಹೋಗಿದ್ದೇವೆ. ಅದರಲ್ಲೂ ವಿದ್ಯುತ್ ಇಲ್ಲ ಎಂದರೆ ನಮಗೆ ಒಂದು ಕ್ಷಣವೂ ಇರಲು ಸಾಧ್ಯವಾಗುವುದಿಲ್ಲ. ಆದರೆ ಅದರ ಬಿಲ್ ಎಷ್ಟು ಬರಬಹುದು ಎಂಬ ಒಂದು ಊಹೆ ನಮಗೆ ಇರುತ್ತದೆ. ಅದಕ್ಕಿಂತ ಸ್ವಲ್ಪ ಹೆಚ್ಚಾಗಿ ಬಂದರೆ ನಮಗೆ ಏನು ಅನಿಸುವುದಿಲ್ಲ. ಆದರೆ ಕೋಟಿ ಲೆಕ್ಕದಲ್ಲಿ ಬಂದರೆ ಪರಿಸ್ಥಿತಿ ಏನಾಗಬೇಡ.. ಇಲ್ಲಿ ಒಬ್ಬ ವೃದ್ಧನಿಗೂ ಅದೇ ರೀತಿ ಆಗಿದೆ.

ಆಗಿದ್ದೇನು? ಗಣಪತಿ ಎನ್ನುವವರು ೮೦ರ ವೃದ್ಧ. ಇವರು ಮಹಾರಾಷ್ಟ್ರದ ನಲ್ಸೋಪರ್ ಪಟ್ಟಣದ ನಿವಾಸಿ. ಇವರಿಗೆ ಪ್ರತಿ ತಿಂಗಳಿನಿಂತೆ ಈ ತಿಂಗಳವೂ ವಿದ್ಯುತ್ ಬಿಲ್ ಬಂದಿದೆ. ವಿದ್ಯುತ್ ಬಿಲ್ ನೋಡಿದ ತಕ್ಷಣ ಅವರು ಮೂರ್ಛೆ ಹೋಗಿದ್ದಾರೆ. ಇದಕ್ಕೆ ಕಾರಣ ವಿದ್ಯುತ್ ಬಿಲ್ ೮೦ ಕೋಟಿ ರೂ. ಬಂದಿತ್ತು. ಮೊದಲೇ ಕೆಳಮಧ್ಯಮ ವರ್ಗದ ಜನ ಗಣಪತಿಯವರು. ತಿಂಗಳಿಗೆ ಸಾವಿರದ ಆಸು ಪಾಸು ಕರೆಂಟ್ ಬಿಲ್ ಬರುತ್ತಿತ್ತು. ಏಕಾಏಕಿ ವಿದ್ಯುತ್ ಸರಬರಾಜು ಮಾಡುವ ಕಂಪನಿಯವರು ೮೦ ಕೋಟಿ ರೂ. ಬಿಲ್ ನೀಡಿದರೆ ಎಂತಹ ಶ್ರೀಮಂತರಿಗೂ ಒಂದು ಕ್ಷಣ ಇದೇ ರೀತಿ ಆಗದೇ ಇರದು. ಕೂಡಲೇ ಗಣಪತಿ ಅವರ ಪುತ್ರ ಅವರನ್ನು ಅಲ್ಲೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ಮೂರು ದಿನದಲ್ಲಿ ಗಣಪತಿ ಅವರು ಚೇತರಿಸಿಕೊಂಡಿದ್ದಾರೆ. ನಂತರ ವಿದ್ಯುತ್ ಸರಬರಾಜು ಕಂಪನಿಯವರ ಗಮನಕ್ಕೆ ತಂದಿದ್ದಾರೆ. ವಿದ್ಯುತ್ ಬಿಲ್ ನೀಡುವ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಈ ರೀತಿ ಆಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ವಿದ್ಯುತ್ ಸರಬರಾಜು ಮಾಡುವ ಕಂಪನಿಯವರು ಗಣಪತಿಯವರ ಕ್ಷಮೆ ಕೋರಿದ್ದಾರೆ. ವಿದ್ಯುತ್ ಬಿಲ್ ನೀಡಲು ತೆರಳುವ ಇಂಜನಿತರಿಂಗ್ ವಿಭಾಗದಲ್ಲಿ ಆದ ದೋಷದಿಂದ ಈ ರೀತಿ ಆಗಿತ್ತು.

ಈ ಕುರಿತು ವಿದ್ಯುತ್ ಸರಬರಾಜು ಮಾಡುವ ಕಂಪನಿಯವರು ಸ್ಪಷ್ಟನೆ ನೀಡಿದ್ದಾರೆ. ನಾವು ಗಣಪತಿಯವರ ಬಳಿ ಕ್ಷಮೆ ಕೇಳಿದ್ದೇವೆ. ಇಂಜನಿಯರಿಂಗ್ ವಿಭಾಗದವರು ಆರು ಅಂಕಿಗಳ ಬದಲು ೯ ಅಂಕಿಗಳ ವಿದ್ಯುತ್ ಬಿಲ್ ತಯಾರಿಸಿದೆ. ಇದರಿಂದ ಈ ರೀತಿ ಅವಘಡ ಸಂಭವಿಸಿದೆ. ನಾವು ಗಣಪತಿಯವರ ಬಳಿ ಮಾತನಾಡಿದ್ದೇವೆ. ಅವರ ಸಮಸ್ಯೆ ಬಗೆಹರಿಸಲು ನಾವು ಈಗಾಗಲೇ ಸೂಚನೆ ನೀಡಿದ್ದೇವೆ. ಇನ್ನು ಮುಂದೆ ಈ ರೀತಿ ಲೋಪಗಳು ಆಗದಂತೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದೆ.

ಆದರೆ ಸಾರ್ವಜನಿಕರು ವಿದ್ಯುತ್ ಸರಬರಾಜು ಕಂಪನಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆ ಅಜ್ಜ ವಿದ್ಯುತ್ ಬಿಲ್ ನೋಡಿದ ತಕ್ಷಣ ಏನಾದರೂ ಹೆಚ್ಚು ಕಮ್ಮಿ ಆಗಿದ್ದರೆ ಅವರಿಗೆ ಆ ನಷ್ಟವನ್ನು ಕಂಪನಿ ಬರಿಸುತ್ತಿತ್ತೇ? ಕಂಪನಿಯವರು ಏನಾದರೂ ಆದ ತಕ್ಷಣ ಕ್ಷಮೆ ಕೇಳಿ ಕೈ ತೊಳೆದುಕೊಂಡು ಬಿಡುತ್ತಾರೆ. ಆದರೆ ಜನಸಾಮಾನ್ಯರ ಕಷ್ಟವನ್ನು ಕೇಳುವವರೂ ಯಾರೂ ಇಲ್ಲವಾಗಿದ್ದಾರೆ ಎಂದು ಗರಂ ಆಗಿದ್ದಾರೆ.

Leave A Reply

Your email address will not be published.