ಡೌನ್ ಪೇಮೆಂಟ್ ಮಾಡಿ, ಕಾರು ಖರೀದಿ ಮಾಡಿ, ಬಾಡಿಗೆ ಬಿಟ್ಟು EMI ಜೊತೆಗೆ ಖರ್ಚಿಗೆ 30 ಸಾವಿರ ಗಳಿಸಿ. ಕೆಲಸ ಮಾಡದೆಯೇ ದುಡಿಯುವುದು ಹೇಗೆ ಗೊತ್ತೇ??

ಭಾರತದಲ್ಲಿ ಎಲ್ಲಿ ನೋಡಿದರೂ ಉದ್ಯೋಗ ಇಲ್ಲ ಎನ್ನುವ ಕೂಗು ಕೇಳಿ ಬರುತ್ತಿದೆ. ಕರೋನಾ ನಂತರವಂತೂ ಇದರ ಪರಿಸ್ಥಿತಿ ಹೆಚ್ಚಾಗಿದೆ. ಕರೋನಾ ಸಂದರ್ಭದಲ್ಲಿ ಕೆಲವೊಂದು ಕಂಪನಿಗಳು ಇದನ್ನೆ ನೆಪ ಮಾಡಿಕೊಂಡು ಉದ್ಯೋಗ ಕಡಿತಗೊಳಿಸಿದರೆ ಇನ್ನು ಕೆಲವು ಕಂಪನಿಗಳು ನಿಜವಾಗಿಯೂ ಆರ್ಥಿಕ ಹೊಡೆತಕ್ಕೆ ಸಿಲುಕಿ ಉದ್ಯೋಗ ಕಡಿತಗೊಳಿಸಿವೆ. ಇದರಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗೆ ಉದ್ಯೋಗ ಕಳೆದುಕೊಂಡವರಲ್ಲಿ ಹಲವರು ತಮ್ಮ ಊರಿಗೆ ಮರಳಿ ವ್ಯವಸಾಯ, ಹೈನುಗಾರಿಕೆ, ಕುರಿಸಾಕಾಣಿಕೆಯಂತಹ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇನ್ನು ಹಲವರು ಇನ್ನು ಮುಂದೆ ಏನು ಮಾಡುವುದು ಎಂದು ದಾರಿ ತೋಚದೆ ಕುಳಿತುಕೊಂಡಿದ್ದಾರೆ. ಈಗ ಚಿಂತೆ ಬಿಡಿ. ನಿಮ್ಮ ಬಳಿ ಕಾರ್ ಇದ್ದರೆ ಅದರಿಂದ ಮನೆಯಲ್ಲಿಯೇ ಕುಳಿತು ಹಣಗಳಿಸಿ!

ಹೌದು. ನೀವು ಕೇಳುತ್ತಿರುವುದು ಸತ್ಯ. ನಿಮ್ಮ ಬಳಿ ಕಾರ್ ಇದ್ದರೆ ನೀವು ಮನೆಯಲ್ಲಿಯೇ ಕುಳಿತು ತಿಂಗಳಿಗೆ ಕಮ್ಮಿ ಎಂದರೂ ೪೦ ರಿಂದ ೫೦ ಸಾವಿರ ರೂ. ಆದಾಯ ಗಳಿಸಬಹುದು. ಹೇಗೆ ಅಂತಿರಾ.. ನೀವು ನಿಮ್ಮ ಕಾರನ್ನು ಓಲಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಾಡಿಗೆಗೆ ಬಿಡುವುದು. ಓಲಾ ಸಂಸ್ಥೆಯು ತನ್ನ ವ್ಯವಸ್ಥೆಯೊಳಗೆ ಪ್ಲಿಟ್ ಆಟ್ಯಾಚ್ ಎನ್ನುವ ಯೋಜನೆ ರೂಪಿಸಿದೆ. ಇದು ಎರಡ್ಮೂರು ಕಾರುಗಳನ್ನು ಒಟ್ಟಿಗೆ ಸೇರಿಸುತ್ತದೆ. ಈ ವ್ಯಾಪಾರದಲ್ಲಿ ನೀವು ಹೊಂದಿರುವ ಕಾರುಗಳನ್ನು ಬಳಸಿಕೊಂಡು ಲಾಭ ಗಳಿಸಬಹುದು. ನಿಮಗೆ ಲಾಭ ಬಂದ ಮೇಲೆ ಕಾರುಗಳ ಸಂಖ್ಯೆಯನ್ನು ಬೇಕಾದರೆ ಹೆಚ್ಚಿಸಬಹುದು. ಕಾರುಗಳು ಇಷ್ಟೇ ಇರಬೇಕು ಎನ್ನುವ ಲಿಮಿಟ್ ಇಲ್ಲ.

ಹಾಗಾದರೆ ಇದಕ್ಕೆ ಬೇಕಾಗುವ ದಾಖಲೆಗಳೇನು? ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರದ್ದಾದ ಚೆಕ್ ಬುಕ್, ಮನೆ ವಿಳಾಸದ ದೃಢಿಕರಣ, ಚಾಲನಾ ಪರವಾನಗಿ ಪತ್ರ, ಇನ್ಸೂರೆನ್ಸ್ ಎಲ್ಲವನ್ನು ಓಲಾ ಕಂಪನಿಗೆ ನೀಡಬೇಕು. ಮೊದಲು ಓಲಾ ಕಚೇರಿಗೆ ಭೇಟಿ ನೀಡಿ ನಿಮ್ಮ ವಿವರಗಳನ್ನು ನೀಡಬೇಕು. ನಂತರ ನಿಮ್ಮ ಬಳಿ ಇರುವ ದಾಖಲಾತಿಗಳನ್ನು ನೀಡಬೇಕು. ಓಲಾ ಸಂಸ್ಥೆಯು ನೀವು ನೀಡಿರುವ ದಾಖಲೆಗಳನ್ನು ಪರಿಶೀಲಿಸುತ್ತದೆ. ಇದಾದ ಬಳಿಕ ನಿಮ್ಮ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಇದಕ್ಕೆಲ್ಲ ಸುಮಾರು ೮-೧೦ ದಿನಗಳ ಸಮಯ ತಗಲುತ್ತದೆ.

ನಂತರ ನೀವು ಎಷ್ಟು ಕಾರನ್ನು ಕೊಟ್ಟಿದ್ದಿರಿ ಎನ್ನುವದನ್ನು ಅವಲಂಬಿಸಿ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಆದರೆ ಚಾಲಕನ ವೇತನ, ಇನ್ನಿತರ ಖರ್ಚುಗಳನ್ನು ನೀವೇ ಭರಿಸಬೇಕಾಗುತ್ತದೆ. ಆದರೂ ಇದೆಲ್ಲ ಕಳೆದೇ ನಿಮಗೆ ತಿಂಗಳಿಗೆ ಏನಿಲ್ಲವೆಂದರೂ ೪೫ ಸಾವಿರ ರೂ. ನಿಂದ ೬೦ ಸಾವಿರ ರೂ. ನಿಮ್ಮ ಖಾತೆಗೆ ಜಮಾ ಆಗುತ್ತದೆ. ಉದ್ಯೋಗವಿಲ್ಲ ಎಂದು ಕುಳಿತವರಿಗೆ ಇದು ಒಂದು ಚಿಕ್ಕ ಸಹಾಯ ಆಗಬಲ್ಲುದು.

Leave A Reply

Your email address will not be published.