ಮೂರು ದಶಕಗಳ ನಂತರ ಕಾಶ್ಮೀರದ ಯುವಕರಿಗೆ ಮನೋರಂಜನೆಗೆ ಅವಕಾಶ ಸಿಕ್ತಾ!? ಶ್ರೀನಗರದಲ್ಲಿ ಇನ್ನು ಮಲ್ಟಿಪ್ಲೆಕ್ಸ್ ಥಿಯೇಟರ್ ಲಭ್ಯವಂತೆ!

ಭಾರತ ಎಲ್ಲಿಂದ ಎಲ್ಲಿಯವರೆಗೆ ಇದೆ ಎಂದು ಮಗುವನ್ನೂ ಕೇಳಿದರೂ ಅದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇದೆ ಎಂದು ಹೇಳುತ್ತದೆ. ನಮ್ಮ ದೇಶದಲ್ಲಿ, ನಮ್ಮ ಮನಸ್ಸಿನಲ್ಲಿ ಕಶ್ಮೀರಕ್ಕೆ ವಿಶೇಷ ಸ್ಥಾನವಿದೆ. ನಾವು ನಮಗೆ ಅರಿವಿಲ್ಲದಂತೆ ಕಾಶ್ಮೀರದ ಜೊತೆ ಭಾವನಾತ್ಮಕವಾಗಿ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ಶ್ಲೋಕಗಳಲ್ಲೂ ಕಾಶ್ಮೀರದ ಉಲ್ಲೇಖವಿದೆ. ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ ಎಂದು ನಾವು ದೇವಿ ಶಾರದಾಮಾತೆಯನ್ನು ಸ್ಮರಿಸುತ್ತವೆ. ಆದರೂ ಇಷ್ಟು ವರ್ಷ ಕಾಶ್ಮೀರ ದೇಶದ ಜೊತೆಗೆ ಇದ್ದು ಇಲ್ಲದಂತಿತ್ತು. ಆದರೆ ಕಳೆದ ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ೩೭೦ನೇ ವಿಧಿಯನ್ನು ಕಿತ್ತು ಹಾಕುವ ಮೂಲಕ ಕಾಶ್ಮೀರವನ್ನು ನಮ್ಮ ದೇಶದ ಅವಿಭಾಜ್ಯ ಅಂಗವಾಗಿಸಿದೆ. ಈಗ ಅಲ್ಲಿ ಅಭಿವೃದ್ಧಿ ಚಟುವಟಿಕೆಗಳು ಬಹಳ ಬಿರುಸಿನಿಂದ ಸಾಗಿವೆ. ಇದರ ಭಾಗವಾಗಿಯೇ ಅಲ್ಲಿ ಐನಾಕ್ಸ್ ಸಂಸ್ಥೆ ಥಿಯೇಟರ್ ಆರಂಭಿಸಲು ಮುಂದೆ ಬಂದಿದೆ. ಇದರಿಂದ ಕಾಶ್ಮೀರದ ನಿವಾಸಿಗಳಿಗೆ ಉದ್ಯೋಗವೂ ಸಿಗಲಿದೆ. ಜೊತೆ ಜೊತೆಗೆ ಮನರಂಜನೆ ಕೂಡ.

ಈ ಹಿಂದೆ ಕಾಶ್ಮೀರದಲ್ಲಿ ಭಯೋತ್ಪಾದಕರ ಕಾಟ ವಿಪರೀತವಾಗಿತ್ತು. ನಮ್ಮ ಸೈನಿಕರು, ಪೊಲೀಸರು ಸಹ ಅವರ ಸೆದೆ ಬಡಿಯುವ ಕೆಲಸದಲ್ಲಿ ನಿರತರಾಗಿದ್ದರು. ಆದರೂ ಕೂಡ ನಿಂತಿರಲಿಲ್ಲ. ಅದಕ್ಕೆ ಅಲ್ಲಿಯ ಕೆಲ ದೇಶವಿರೋಧಿ ಮನಃ ಸ್ಥಿತಿ ಇರುವ ಜನರ ಬೆಂಬಲವೂ ಇತ್ತು ಎನ್ನುವುದು ಸತ್ಯ. ಇದರಿಂದಲೇ ಕಾಶ್ಮೀರ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿತ್ತು. ಅಭಿವೃದ್ಧಿಗೆ ಎಂದು ಬರುವ ಹಣವೆಲ್ಲ ರಾಜಕಾರಣಿಗಳು, ಅಧಿಕಾರಿಗಳ ಖಜಾನೆ ಸೇರುತ್ತಿತ್ತು ಎನ್ನುವುದು ಓಪನ್ ಸಿಕ್ರೇಟ್. ಇದರಿಂದಾಗಿ ಅಲ್ಲಿ ಯಾವುದೇ ಕಂಪನಿಗಳು ಹೋಗಲು ಹಿಂದೇಟು ಹಾಕುತ್ತಿದ್ದವು.

ಕಳೆದ ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಸಂವಿಧಾನದ ೩೭೦ನೇ ವಿಧಿ ರದ್ದು ಮಾಡಿತು. ಇದರಿಂದ ಕಾಶ್ಮೀರ ಸಹ ನಮ್ಮ ಕರ್ನಾಟಕದಂತೆ ಭಾರತದ ಇನ್ನೊಂದು ರಾಜ್ಯವಾಗಿದೆ. ಅಲ್ಲಿಗೆ ಯಾರೂ ಬೇಕಾದರೂ ಹೋಗಬಹುದು, ವಾಸ ಮಾಡಬಹುದು ಯಾವುದಕ್ಕೂ ಅಡೆತಡೆ ಇಲ್ಲದಂತೆ ಆಯಿತು. ಅಲ್ಲದೆ ಕೇಂದ್ರ ಸರ್ಕಾರವು ಅಲ್ಲಿನ ಜನರ ಜೀವನವನ್ನು ಹಸನು ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ವಿವಿಧ ಕಂಪನಿಗಳು ಕಾಶ್ಮೀರದತ್ತ ಧಾವಿಸುತ್ತಿವೆ. ಇದರಿಂದ ಕಾಶ್ಮೀರದ ಜನರ ಜೀವನ ನಿಧಾನವಾಗಿ ಸುಧಾರಿಸಲು ಆರಂಭಿಸಿದೆ.

ಇದೀಗ ಐನಾಕ್ಸ್ ಸಂಸ್ಥೆಯು ಕಾಶ್ಮೀರದಲ್ಲಿ ಮಲ್ಟಿಫ್ಲೆಕ್ಸ್ ಆರಂಭಿಸಲು ಮುಂದೆ ಬಂದಿದೆ. ಈಗಾಗಲೇ ಮಲ್ಟಿಫ್ಲೆಕ್ಸ್ ಕಟ್ಟಡದ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಮುಂದಿನ ತಿಂಗಳು ಐನಾಕ್ಸ್ ಥಿಯೇಟರ್ ಓಪನ್ ಆಗಲಿದೆ. ಇಲ್ಲಿ ೩ ಆಡಿಟೋರಿಯಂ ನಿರ್ಮಿಸಲಾಗಿದೆ. ವಿಶೇಷ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ. ಅಲ್ಲದೆ ಲೇಟೆಸ್ಟ್ ಆಸನದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಈ ಥಿಯೇಟರ್ನಲ್ಲಿ ರಿಕ್ಲೈನರ್ ಹಾಗೂ ಲಕ್ಸೂರಿ ಎರಡು ರೀತಿಯ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಭಾರತದ ಇತರ ನಗರದ ಜನರಿಗೆ ಸಿಗುವ ಸೌಲಭ್ಯಗಳು ಕಾಶ್ಮೀರದ ಜನರಿಗೂ ಸಿಗಲಿ ಎನ್ನುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಐನಾಕ್ಸ್ ಸಂಸ್ಥೆ ತಿಳಿಸಿದೆ.

Leave A Reply

Your email address will not be published.