ಈ ಕೃಷ್ಣ ಜನ್ಮಾಷ್ಟಮಿಗೆ ಕೃಷ್ಣನಿಗೆ ಪ್ರಿಯವಾದ ತಿಂಡಿಗಳನ್ನ ತಯಾರಿಸಿ; ಮುಕುಂದನ ಕೃಪೆಗೆ ಪಾತ್ರರಾಗಿ!

ಈ ಬಾರಿ ಕೃಷ್ಣ ಜನ್ಮಾಷ್ಟಮಿ ನಾಳೆ ಹಾಗೂ ನಾಡಿದ್ದು ಅಂದ್ರೆ ಆಗಸ್ಟ್ 18 ಮತ್ತು 19 ಎರಡು ದಿನವೂ ಮಹತ್ವದ್ದಾಗಿದೆ ಕೃಷ್ಣ ಜನ್ಮಾಷ್ಟಮಿ 18ಕ್ಕೆ ಆರಂಭವಾಗಿ 19 ಮತಕ್ಕೆ ಮುಕ್ತಾಯವಾಗುತ್ತದೆ.  ಅಂದರೆ ಒಂದೊಂದು ಭಾಗದಲ್ಲಿ ಅವರವರ ಪಂಚಾಂಗದ ಆಧಾರದ ಮೇಲೆ ಹಬ್ಬವನ್ನು ಆಚರಿಸಲಾಗುತ್ತದೆ ಕೃಷ್ಣಪಕ್ಷದ ರೋಹಿಣಿ ನಕ್ಷತ್ರದ ಅಷ್ಟಮಿ ತಿಥಿ ಎಂದು ಕೃಷ್ಣ ಜನ್ಮಾಷ್ಟಮಿ ಯನ್ನ ದೇಶದೆಲ್ಲೆಡೆ ವಿವಿಧ ಬಗೆಯಲ್ಲಿ ಆಚರಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯ ದಿನ ಉಪವಾಸಕ್ಕೆ ಹೆಚ್ಚಿನ ಮಹತ್ವವಿದೆ ಹೆಚ್ಚಿನವರು ಈ ದಿನ ಉಪವಾಸ ಮಾಡಿ ವಿಶೇಷವಾದ ತಿನಿಸುಗಳನ್ನ ತಯಾರಿಸಿ ಕೃಷ್ಣನಿಗೆ ಅರ್ಪಿಸುತ್ತಾರೆ. ಹಾಗಾದರೆ ಬನ್ನಿ ಕೃಷ್ಣ ಪ್ರಿಯ ಪ್ರಸಾದದ ಬಗೆಗಳನ್ನು ನೋಡೋಣ.

ಕೃಷ್ಣನಿಗೆ ಹಾಲು ಬೆಣ್ಣೆ ತುಪ್ಪ ಮೊಸರು ಮೊದಲಾದ ಹಸು ಉತ್ಪನ್ನಗಳು ಇಷ್ಟ ಎಂಬುದು ಎಲ್ಲರಿಗೂ ಗೊತ್ತು ಹಾಗಾಗಿ ಈ ಹಬ್ಬದ ದಿನ ಹೆಚ್ಚಾಗಿ ಹಾಲಿನ ಪದಾರ್ಥಗಳನ್ನ ಕೃಷ್ಣನಿಗೆ ಅರ್ಪಿಸಲಾಗುತ್ತದೆ.

ಹೊದ್ಲು ಅವಲಕ್ಕಿ; ಸಾಮಾನ್ಯವಾಗಿ ಕರ್ನಾಟಕದಲ್ಲಿ ಈ ಬಗೆಯ ತಿಂಡಿಯನ್ನು ಮಾಡಲಾಗುತ್ತೆ. ಕೃಷ್ಣನು ಆಪ್ತಮಿತ್ರ ಕುಚೇಲ ಕೃಷ್ಣನಿಗೆ ಒಂದು ಹಿಡಿ ಅವಲಕ್ಕಿ ಅಥವಾ ಹೊದ್ಲು ತಂದು ಕೊಟ್ಟ ಎನ್ನುವ ಪ್ರತಿತಿ ಇದೆ. ಇದನ್ನ ಬಹಳ ಪ್ರೀತಿಯಿಂದ ಕೃಷ್ಣ ಸೇವಿಸುತ್ತಾನೆ ಹಾಗಾಗಿ ಕೃಷ್ಣನಿಗೆ ಇಷ್ಟವಾದ ಈ ತಿಂಡಿಯನ್ನು ಕೃಷ್ಣ ಜನ್ಮಾಷ್ಟಮಿ ಎಂದು ಮಾಡಲಾಗುತ್ತದೆ.

ಮುರುಕು; ಬೆಣ್ಣೆಯನ್ನ ಬಳಸಿ ತಯಾರಿಸಲಾಗುವ ಬೆಣ್ಣೆ ಮುರುಕು ಕೃಷ್ಣನಿಗೆ ಸಮರ್ಪಿಸಲಾಗುತ್ತದೆ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕೃಷ್ಣಾಷ್ಟಮಿಯ ದಿನ ಮುರುಕನ್ನು ತಯಾರಿಸಿಯೇ ತಯಾರಿಸುತ್ತಾರೆ.

ಬೇಸಿನ್ ಲಡ್ಡು; ಚೆನ್ನಾಗಿ ತುಪ್ಪ ಹಾಕಿ ಕಡಲೆ ಹಿಟ್ಟಿನಿಂದ ಈ ಲಡ್ಡು ತಯಾರಿಸಲಾಗುತ್ತೆ. ಬೇರೆ ಹಬ್ಬಗಳಲ್ಲಿಯೂ ವಿಶೇಷವಾಗಿ ತಯಾರಿಸಲಾಗುವ ಈ ಲಡ್ಡನ್ನು ಕೃಷ್ಣ ಜನ್ಮಾಷ್ಟಮಿಯಲ್ಲಿ ವಿಶೇಷವಾಗಿ ಸಿಹಿ ಖಾದ್ಯದ ಲಿಸ್ಟ್ ನಲ್ಲಿ ಸೇರಿಸಲಾಗುತ್ತೆ.

ಸೋರೆಕಾಯಿ ತುಪ್ಪದ ಹಲ್ವಾ; ನೀವು ಉತ್ತರ ಭಾರತದ ಕಡೆಗೆ ಹೋದರೆ ಅಲ್ಲಿ ಕೃಷ್ಣಪ್ರಿಯರು ಸಾಕಷ್ಟು ಮಂದಿ ಹಾಗಾಗಿ ಕರ್ನಾಟಕದಲ್ಲಿ ಹೆಚ್ಚಾಗಿ ಉತ್ತರ ಭಾರತದ ಕಡೆಗೆ ಕೃಷ್ಣ ಜನ್ಮಾಷ್ಟಮಿ ಹೆಚ್ಚು ಮಹತ್ವವನ್ನು ಪಡೆದಿದೆ ಈ ಸಂದರ್ಭದಲ್ಲಿ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಕೃಷ್ಣನಿಗೆ ಇಷ್ಟವಾದ ಹಾಲಿನ ಉತ್ಪನ್ನವಾದ ತುಪ್ಪವನ್ನು ಹಾಕಿ ಹಲ್ವಾ ತಯಾರಿಸಲಾಗುತ್ತದೆ. ಸೋರೆಕಾಯಿ ತುಪ್ಪ ಹಾಗೂ ಡ್ರೈ ಫ್ರೂಟ್ಸ್ ನಿಂದ ತಯಾರಿಸಲಾಗುವ ಈ ಖಾದ್ಯ ಕೃಷ್ಣನಿಗೆ ಬಹಳ ಪ್ರಿಯವಂತೆ.

ಆಲೂ ಪೋಹ; ಹೌದು ಕೃಷ್ಣನಿಗೆ ಅವಲಕ್ಕಿ ಬಹಳ ಪ್ರೀತಿ, ಹಾಗಾಗಿ ಅವಲಕ್ಕಿಯಿಂದ ತಯಾರಿಸಲಾಗುವ ತಿನಿಸುಗಳನ್ನ ಕೃಷ್ಣ ಜನ್ಮಾಷ್ಟಮಿ ಎಂದು ನೈವೇದ್ಯಕ್ಕೆ ಇಡಲಾಗುತ್ತದೆ. ಅದೇ ರೀತಿ ತೆಂಗಿನ ಕಾಯಿ ಬರ್ಫಿಯನ್ನು ಕೂಡ ಸಿಹಿಖಾದ್ಯವಾಗಿ ನೈವೇದ್ಯಕ್ಕೆ ಇಡಲಾಗುತ್ತದೆ.

ಹೀಗೆ ಕೃಷ್ಣನಿಗೆ ಇಷ್ಟವಾದ ಎಲ್ಲಾ ಸಿಹಿ ಖಾದ್ಯಗಳನ್ನು ಜೊತೆಗೆ ಇತರ ತಿಂಡಿಗಳನ್ನು ತಯಾರಿಸಿ ಆ ಪರಮಾತ್ಮನ ಆಶೀರ್ವಾದ ಪಡೆಯಲು ಭಗವಂತನಿಗೆ ಅರ್ಪಿಸಲಾಗುತ್ತೆ. ಶ್ರೀ ಕೃಷ್ಣ ಅಂದರೆ ಪ್ರೀತಿಯ ಸಂಕೇತ. ಹಾಗಾಗಿ ಶ್ರೀ ಕೃಷ್ಣನನ್ನು ಹೆಂಗಳೆಯರು ಬಹಳ ಭಕ್ತಿ ಭಾವದಿಂದ ಆರಾಧಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿ ಅಂದರೆ ಹಲವು ತಾಯಂದಿರು ತಮ್ಮ ಮಕ್ಕಳಿಗೆ ರಾಧಾಕೃಷ್ಣನ ವೇಷ ಹಾಕಿ ಸಂತೋಷ ಪಡುತ್ತಾರೆ. ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಭಾವದಿಂದ ಆಚರಿಸಿ. ಶ್ರೀ ಭಗವಾನ್ ಕೃಷ್ಣ ನಿಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ.

Leave A Reply

Your email address will not be published.