ಬಿಗ್ ಶಾಕಿಂಗ್: ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಮಹತ್ವದ ಹೇಳಿಕೆ ನೀಡಿ ಎಲ್ಲರಿಗೂ ಶಾಕ್ ನೀಡಿದ ಬಿಸಿಸಿಐ ಸೌರವ್: ಹೇಳಿದ್ದೇನು ಗೊತ್ತೇ?

ಭಾರತ ಇಂದು ಎಲ್ಲ ರಂಗದಲ್ಲೂ ಮುಂದೆ ಇದೆ. ಸ್ವಾವಲಂಬಿ ರಾಷ್ಟ್ರವಾಗುವತ್ತ ದಾಪುಗಾಲನ್ನಿಡುತ್ತಿದೆ. ಹಾಗೆಯೇ ಕ್ರೀಡಾ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ್ಲ. ಇದಕ್ಕೆ ಮೊನ್ನೆ ಮೊನ್ನೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ತಂದಿರುವ ಪ್ರಶಸ್ತಿಗಳೇ ಸಾಕ್ಷಿ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದಿಂದಲೂ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅದಕ್ಕಾಗಿಯೇ ಕೊಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಇನ್ನು ಭಾರತೀಯರಿಗೆ ಕ್ರೀಡೆ ಎಂದ ತಕ್ಷಣ ನೆನಪಿಗೆ ಬರುವುದು ಕ್ರಿಕೆಟ್. ಕ್ರಿಕೆಟ್ನಲ್ಲೂ ನಮ್ಮ ಸಾಧನೆ ಕಡಿಮೆ ಏನಿಲ್ಲ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಕಳಪೆ ಪ್ರದರ್ಶನನಿಂದ ಸ್ವಲ್ಪ ನರ್ವಸ್ ಆಗಿದ್ದು, ಇದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಸ್ತುತ ಭಾರತ ತಂಡದ ಸ್ಪೋಟಕ ಬ್ಯಾಟ್ಸಮನ್, ಅನುಭವಿ ಆಟಗಾರನಾಗಿರುವ ವಿರಾಟ್ ಕೊಯ್ಲಿಯವರು ಬ್ಯಾಟಿಂಗ್ನಲ್ಲಿ ತೀವ್ರ ವೈಫಲ್ಯ ಕಂಡಿದ್ದಾರೆ. ಅದಕ್ಕೆ ಇತ್ತಿಚೆಗೆ ನಡೆದಿರುವ ಪಂದ್ಯಗಳೇ ಸಾಕ್ಷಿಯಾಗಿವೆ. ಕೊಯ್ಲಿಯವರಿಗೆ ಕೊಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ವಿರಾಟ್ ಕೊಹ್ಲಿ ಅವರ ಆಟವನ್ನು ನೋಡಬೇಕು. ಅವರ ಬೌಲರ್ಗಳಿಗೆ ಬೆವರಳಿಸುವುದನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾಯುತ್ತಿರುತ್ತಾರೆ. ಆದರೆ ಕೊಹ್ಲಿಯವರ ಕಳಪೆ ಪ್ರದರ್ಶನಿಂದ ಅವರಿಗೆಲ್ಲ ನಿರಾಸೆಯಾಗುತ್ತಿದೆ.

ಕೊಹ್ಲಿಯವರು ಮತ್ತೆ ಹಳೆಯ ಫಾರ್ಮ್ ಮರಳಬೇಕು. ಅವರ ಆಟವನ್ನು ತಾವು ಎಂಜಾಯ್ ಮಾಡಬೇಕು ಎಂದು ಹಲವರು ಹೇಳುತ್ತಿದ್ದಾರೆ. ಜನರು ಹೀಗೆ ಬಯಸುತ್ತಿದ್ದಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ವಿರಾಟ್ ಕೊಹ್ಲಿಯವರು ಮತ್ತೆ ಅಂಗಳಕ್ಕೆ ಇಳಿಯಲಿದ್ದಾರೆ. ಮತ್ತೆ ಹಳೆಯ ಫಾರ್ಮ್ಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ಕೊಹ್ಲಿಯವರ ಬೆಂಬಲಕ್ಕೆ ನಿಂತಿದ್ದಾರೆ.

ವಿರಾಟ್ ಕೊಹ್ಲಿಯವರು ಇನ್ನೂ ಹೆಚ್ಚು ಹೆಚ್ಚು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ನಿರಂತರವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರಿಂದ ಸಹಜವಾಗಿಯೇ ಸಾಧನೆ ಆಗಲಿದೆ. ಕೊಹ್ಲಿ ಅವರೊಬ್ಬ ಅನುಭವಿ ಆಟಗಾರ. ಇನ್ನು ಹಲವಾರು ಪಂದ್ಯಗಳಲ್ಲಿ ಅವರು ಆಟ ಆಡಬೇಕಿದೆ. ಅವರು ಖಂಡಿತವಾಗಿಯೂ ಮೊದಲಿನ ಫಾರ್ಮ್ಗೆ ಮರಳಲಿದ್ದಾರೆ. ಜನರು ಏನು ನಿರೀಕ್ಷೆ ಮಾಡುತ್ತಿದ್ದರೋ ಅದೇ ರೀತಿ ಆಟ ಆಡಲಿದ್ದಾರೆ. ಮುಂದಿನ ಏಷ್ಯಾ ಕಪ್ ವೇಳೆಗೆ ಅವರು ಮೊದಲಿನ ರೀತಿಯೇ ಪಾಲ್ಗೊಳ್ಳಲಿದ್ದಾರೆ ಎಂದು ದಾದಾ ಹೇಳಿದ್ದಾರೆ.

ಏಷ್ಯಾ ಕಪ್ ಕ್ರಿಕೇಟ್ ಪಂದ್ಯಾವಳಿಯು  ಇದೇ ೨೭ರಿಂದ ಯುಎಇನಲ್ಲಿ ಆರಂಭವಾಗಲಿದೆ. ಅದರಲ್ಲಿ ಭಾರತವು ೨೮ರಂದು ನಮ್ಮ ಸಾಂಪ್ರದಾಯಿಕ ವೈರಿ ರಾಷ್ಟ್ರವೆಂದೇ ಕರೆಯಲ್ಪಡುವ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಈ ಕುರಿತು ಸೌರವ್ ಗಂಗೂಲಿ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಏಷ್ಯಾ ಕಪ್ ಕ್ರಿಕೇಟ್ ಪಂದ್ಯಾವಳಿ. ಇದರಲ್ಲಿ ಸಹಜವಾಗಿ ಭಾರತ -ಪಾಕಿಸ್ತಾನ ಮುಖಾಮುಖಿ ಆಗಲಿದೆ. ಇದು ನನ್ನ ಪಾಲಿಗೆ ಎಲ್ಲ ಪಂದ್ಯಗಳ ತರಹವೇ ಒಂದು ಪಂದ್ಯವಾಗಿರುತ್ತದೆ. ಯಾವುದೇ ಪಂದ್ಯವಾಗಲಿ ಗೆಲ್ಲುವುದಷ್ಟೇ ನಮ್ಮ ಗುರಿ ಆಗಿರಲಿದೆ ಎಂದು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೇಟಿಗ ರಿಕಿ ಪಾಂಟಿಗ್ ಸಹ ಪ್ರತಿಕ್ರಿಯೆ ನೀಡಿದ್ದು, ಭಾರತವು ಪಾಕಿಸ್ತಾನವನ್ನು ಸುಲಭವಾಗಿ ಸೋಲಿಸಲಿದೆ. ಭಾರತ ತಂಡವು ಬಲಿಷ್ಠವಾಗಿದೆ. ಅದನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಏಷ್ಯ ಕಪ್ ಎತ್ತಿ ಹಿಡಿಯುವ ಸಾಮರ್ಥ್ಯವನ್ನು ಸಹ ಭಾರತ ತಂಡ ಹೊಂದಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.