ಬೇಡ ಬೇಡ ಎಂದರೂ 60 ವರ್ಷದ ಮುದುಕನನ್ನು ಮದುವೆಯಾದ 18 ರ ಯುವತಿ: ಆದರೆ ಮದುವೆಯಾದ ಮಾರನೇ ದಿನ ಮುದುಕ ಮಾಡಿದ್ದೇನು ಗೊತ್ತೇ??

ಜಗತ್ತು ನಡೆಯುತ್ತಿರುವುದೇ ಪ್ರೀತಿ ಹಾಗೂ ನಂಬಿಕೆಯ ಆಧಾರದ ಮೇಲೆ ಎಂದು ಹಿರಿಯರು ಹೇಳಿದ್ದಾರೆ. ಪ್ರೀತಿ ಕುರುಡು ಎಂದೂ ಹೇಳಿದ್ದಾರೆ. ಯಾಕೆಂದರೆ ಅದು ಯಾರ ಮೇಲೆ, ಎಷ್ಟು ವಯಸ್ಸಿನವರ ಮೇಲೆ ಬೇಕಾದರೂ ಆಗಬಹುದು. ಅದಕ್ಕೆ ಇದೇ ರೀತಿಯಲ್ಲಿ ಆಗಬೇಕು, ಇಂತಹವರ ಮೇಲೆ ಆಗಬೇಕು ಎನ್ನುವ ನಿಯಮಗಳು ಇಲ್ಲ. ಹಾಗಾಗಿ ಒಂದೊಂದು ಕವಿಗಳು ಒಂದೊಂದು ರೀತಿಯಾಗಿ ಪ್ರೀತಿಯನ್ನು ವರ್ಣಿಸಿದ್ದಾರೆ. ಇಲ್ಲೊಂದು ೧೮ ವರ್ಷದ ಹುಡುಗಿಗೇ ೬೦ ವರ್ಷದ ವ್ಯಕ್ತಿಯ ಮೇಲೆ ಪ್ರೀತಿ ಆಗಿದೆ. ಆಮೇಲೇ ಏನಾಯಿತು ಗೊತ್ತಾ?

ಈ ಘಟನೆ ನಡೆದಿದ್ದು ಜಾರ್ಖಂಡ್ ರಾಜ್ಯದಲ್ಲಿ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೂ ನೆಟ್ಟಿಗರಿಂದ ವಿವಿಧ ರೀತಿಯ ಸಾವಿರಾರು ಕಮಿಂಟ್ಗಳು ಹರಿದು ಬರುತ್ತಿವೆ. ಕೆಲವರು ಈ ವಯಸ್ಸಿನಲ್ಲಿ ವೃದ್ಧನಿಗೆ ಮದುವೆ ಬೇಕಿತ್ತಾ ಎಂದು ಕೇಳಿದರೆ, ಇನ್ನು ಕೆಲವರು ಆ ಹುಡುಗಿಗೆ ಬುದ್ದಿ ಇದೆಯೋ ಇಲ್ಲವೋ… ಎಂದು ಕಮಿಂಟ್ ಮಾಡಿದ್ದಾರೆ. ಹೀಗೆ ವಿಧವಿಧವಾಗಿ ಕಮಿಂಟ್ ಮಾಡಿದ್ದಾರೆ.

ಜಾರ್ಖಂಡ್ ರಾಜ್ಯದ ೬೦ ವರ್ಷದ ವ್ಯಕ್ತಿಗೆ ಮದುವೆ ಆಗಿ ಪತ್ನಿ ತೀರಿಹೋಗಿ ಐದಾರು ವರ್ಷಗಳು ಸಂದಿದ್ದವು. ಆ ವ್ಯಕ್ತಿಯ ಮೇಲೆ ೧೮ ವರ್ಷದ ಹುಡುಗಿಗೆ ಪ್ರೀತಿ ಆಗಿದೆ. ಅಲ್ಲದೆ ಅದನ್ನು ಆತನ ಬಳಿ ಹೋಗಿ ಹೇಳಿಕೊಂಡಿದ್ದಾಳೆ. ಆತನು ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ. ನಂತರ ಸ್ವಲ್ಪ ದಿನಗಳ ಕಾಲ ಇಬ್ಬರು ಕಾಲ ಕಳೆಯುತ್ತಾರೆ. ನಂತರ ವಿವಾಹ ಆಗುವ ತೀರ್ಮಾನಕ್ಕೆ ಬರುತ್ತಾರೆ. ಆಗ ಹುಡುಗಿ ತಮ್ಮ ಮನೆಯಲ್ಲಿ ತಿಳಿದರೆ ಈ ಪ್ರೀತಿಗೆ ಒಪ್ಪಿಗೆ ಸಿಗುವುದಿಲ್ಲ ಎಂದು ಹೇಳುತ್ತಾಳೆ. ಆಗ ಅವರಿಬ್ಬರು  ಮನೆಯವರಿಗೆ ತಿಳಿಯದಂತೆ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಆಗಿ ಸಂಸಾರ ಆರಂಭಿಸಿದ್ದರು. ಈ ವೇಳೆ ಹುಡುಗಿ ಮನೆಯವರಿಗೆ ವಿಚಾರ ತಿಳಿದಿದೆ.

ಹುಡುಗಿಯ ಅಪ್ಪ-ಅಮ್ಮ ಅವರ ಮನೆಗೆ ಬಂದು ಮಗಳಿಗೆ ಬುದ್ದಿವಾದ ಹೇಳುತ್ತಾರೆ. ಆದರೂ ಅವಳು ತನ್ನ ಪತಿಯನ್ನು ಬಿಟ್ಟು ಬರಲು ಸಿದ್ದವಾಗುವುದಿಲ್ಲ. ನಂತರ ಆ ಹುಡುಗಿಯ ಪಾಲಕರು ಅನಿವಾರ್ಯವಾಗಿ ತಮ್ಮ ಮಗಳನ್ನು ಹಿಂತಿರುಗಿಸಿ ಮನೆಗೆ ಕಳುಹಿಸಿಕೊಡಿ. ಇದರಲ್ಲಿ ಏನೋ ಮೋಸ ನಡೆದಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಪೊಲೀಸ್ ಠಾಣೆಯಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕರಣದ ತೀರ್ಪು ಇನ್ನೂ ಬಂದಿಲ್ಲ. ಮಗಳು ತಮ್ಮ ಮನೆಗೆ ವಾಪಾಸು ಬರಬಹುದು. ಕೋರ್ಟ್ ತಮ್ಮ ಪರವಾಗಿಯೇ ತೀರ್ಪು ನೀಡಬಹುದು ಎನ್ನುವ ನಿರೀಕ್ಷೆಯಲ್ಲಿ ಆ ಪಾಲಕರು ಕಾಯುತ್ತಿದ್ದಾರೆ.

Leave A Reply

Your email address will not be published.